ಸುಪ್ರೀಂ ಕೋರ್ಟ್‌ ಬಾಣಸಿಗನ ಪುತ್ರಿಗೆ ಯುಎಸ್‌ ಸ್ಕಾಲರ್‌ಷಿಪ್‌, ಸಿಜೆಐಯಿಂದ ಸನ್ಮಾನ!

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ದೇಶದ ಅತ್ಯುನ್ನತ ಕೋರ್ಟ್‌ನ ಬಾಣಸಿಗನ ಪುತ್ರಿ ಪ್ರಜ್ಞಾ ಅವರನ್ನು ಗುರುವಾರ ಸನ್ಮಾನಿಸಿದ್ದಾರೆ. ಅವರು ಯುಎಸ್ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಾಗಿ ವಿದ್ಯಾರ್ಥಿವೇತನವನ್ನು ಪಡೆದುಕೊಂಡಿದ್ದಾರೆ.
 

daughter of Supreme Court cook who won US scholarships Chief Justice DY Chandrachud honours san

ನವದೆಹಲಿ (ಮಾ.13): ದೇಶದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಹಾಗೂ ಸುಪ್ರೀಂ ಕೋರ್ಟ್‌ನ ಇತರ ನ್ಯಾಯಾಧೀಶರು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಯಾವುದೇ ಗಣ್ಯ ವ್ಯಕ್ತಿಗೆ ಅಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿರಲಿಲ್ಲ. ಸುಪ್ರೀಂ ಕೋರ್ಟ್‌ನ ಅಡುಗೆ ಮನೆಯ ಬಾಣಸಿಗನ ಪುತ್ರಿಗೆ ಅಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಲ್ಲಿ ಕಾನೂನು ವಿಭಾಗದ ಸ್ನಾತಕೋತ್ತರ ಪದವಿಗಾಗಿ ವಿದ್ಯಾರ್ಥಿವೇತನ ಪಡೆದ ಕಾರಣಕ್ಕಾಗಿ ಅವರಿಗೆ ಸಿಜೆಐ ನೇತೃತ್ವದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಾಧೀಶರು ಇಂದು ಬೆಳಿಗ್ಗೆ ನ್ಯಾಯಾಧೀಶರ ವಿಶ್ರಾಂತಿ ಕೊಠಡಿಯಲ್ಲಿ ಜಮಾಯಿಸಿದರು. ಆ ಬಳಿಕ ಸುಪ್ರೀಂ ಕೋರ್ಟ್‌ನ ಕುಕ್‌ ಆಗಿರುವ ಅಜಯ್ ಕುಮಾರ್ ಸಮಾಲ್ ಅವರ ಪುತ್ರಿ ಪ್ರಗ್ಯಾ ಅವರಿಗೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. 'ಪ್ರಜ್ಞಾ ಅವರು ತಮ್ಮ ಸ್ವಂತ ಶಕ್ತಿಯಿಂದ ಏನನ್ನೋ ಸಾಧಿಸಿದ್ದಾರೆ. ಆಕೆಗೆ ಏನು ಅಗತ್ಯವಿದೆಯೋ ಅದೆಲ್ಲವನ್ನು ಮಾಡಲು ನಾವು ಸಿದ್ಧವಿದ್ದೇವೆ. ಆಕೆ ಮರಳಿ ದೇಶಕ್ಕೆ ಬಂದು ದೇಶಸೇವೆ ಮಾಡುತ್ತಾರೆ ಎಂದು ನಂಬಿದ್ದೇವೆ' ಎಂದು ಪ್ರಗ್ಯಾ  ಅವರನ್ನು ಸನ್ಮಾನಿಸಿದ ಬಳಿಕ ಸಿಜೆಐ ಡಿವೈ ಚಂದ್ರಚೂಡ್‌ ಹೇಳಿದ್ದಾರೆ.

ಆಕೆ ಏನು ಮಾಡಿದರೂ, ಅದು 140 ಕೋಟಿ ಜನರ ಸಾಧನೆ ಆಗುತ್ತದೆ. ಆಕೆ ತನ್ನ ಕನಸನ್ನು ಈಡೇರಿಸಿಕೊಳ್ಳುತ್ತಾಳೆ ಎನ್ನುವ ಎಲ್ಲಾ ವಿಶ್ವಾಸ ನಮಗಿದೆ. ಇಡೀ ದೇಶವೇ ಆಕೆಯ ಬೆನ್ನಿಗಿದೆ ಎಂದು ತಿಳಿಸಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರು 25 ವರ್ಷ ವಯಸ್ಸಿನ ಪ್ರಗ್ಯಾ ಅವರಿಗೆ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ಸಹಿ ಮಾಡಿದ ಭಾರತೀಯ ಸಂವಿಧಾನದ ಮೂರು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.

ಪ್ರಗ್ಯಾ  ಅವರ ಕನಸಿಗೆ ಒತ್ತಾಸೆಯಾಗಿ ನಿಂತ ಪ್ರಜ್ಞಾ ಅವರ ಪೋಷಕರಿಗೂ ಸಿಜೆಐ ಶಾಲು ಹೊದೆಸಿ ಸನ್ಮಾನಿಸಿದರು. ತನ್ನನ್ನು ಸನ್ಮಾನಿಸಿದ್ದಕ್ಕಾಗಿ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ಇತರರಿಗೆ ಧನ್ಯವಾದ ಹೇಳಿದ ಪ್ರಗ್ಯಾ, ತನ್ನ ತಂದೆ ಮತ್ತು ತಾಯಿಯ ಸಹಾಯದಿಂದ ತನ್ನ ವೃತ್ತಿಜೀವನದ ಉನ್ನತ ಸ್ಥಾನವನ್ನು ಏರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಇವರ ಮಗಳಾಗಿ ಜನಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ನನ್ನ ಶಾಲಾ ದಿನಗಳಿಂದಲೂ ತಂದೆ ನನಗೆ ಒತ್ತಾಸೆಯಾಗಿ ನಿಂತಿದ್ದರು. ನನಗೆ ಬೇಕಾದಂಥ ಎಲ್ಲಾ ಅವಕಾಶಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಶ್ರಮವಹಿಸಿದ್ದರು. ಇದೇ ವೇಳೆ ತಾವು ಕಾನೂನು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಿಜೆಐ ಡಿವೈ ಚಂದ್ರಚೂಡ್‌ ಅವರೇ ಕಾರಣ ಎಂದು ಪ್ರಗ್ಯಾ ಹೇಳಿದ್ದಾರೆ.

2019-2024ರ ಅವಧಿಯಲ್ಲಿ 22,217 ಚುನಾವಣಾ ಬಾಂಡ್‌ ಖರೀದಿ, ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮಾಹಿತಿ!

"ನ್ಯಾಯಾಲಯದ ವಿಚಾರಣೆಗಳ ಲೈವ್ ಸ್ಟ್ರೀಮಿಂಗ್‌ನೊಂದಿಗೆ, ಅವರು (ನ್ಯಾಯಮೂರ್ತಿ ಚಂದ್ರಚೂಡ್) ಮಾತನಾಡುವುದನ್ನು ಪ್ರತಿಯೊಬ್ಬರೂ ವೀಕ್ಷಿಸಬಹುದು. ಅವರು ಯುವ ವಕೀಲರನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಅವರ ಮಾತುಗಳು ರತ್ನಗಳಂತಿವೆ. ಅವರು ನನಗೆ ಸ್ಫೂರ್ತಿ" ಎಂದು ಪ್ರಗ್ಯಾ ತಿಳಿಸಿದ್ದಾರೆ.

ಭಾರತದ ಪ್ರಭಾವಿ ವ್ಯಕ್ತಿ ಪಟ್ಟಿ ಪ್ರಕಟ, ಮೋದಿ ನಂ.1, ಟಾಪ್ 10 ಪಟ್ಟಿಯಲ್ಲಿ CJI ಚಂದ್ರಚೂಡ್!

Latest Videos
Follow Us:
Download App:
  • android
  • ios