ಪಾನಿಪುರಿ ಸ್ಟಾಲ್‌ನಲ್ಲೂ ಇದೆ ಲಕ್ಷಾಂತರ ದುಡಿಮೆ….ಬಾಣಸಿಗರಿಗೆ ಇದು ಬೆಸ್ಟ್ ಬ್ಯುಸಿನೆಸ್!

ಪಾನಿಪುರಿ, ಬೇಲ್ಪುರಿ ಸೇರಿದಂತೆ ಬೀದಿಬದಿ ಆಹಾರ ಅಂದ್ರೆ ನಮಗೆಲ್ಲ ಇಷ್ಟ. ಬೀದಿಯಲ್ಲಿ ಇದನ್ನು ಮಾರಾಟ ಮಾಡೋರಿಗೆ ಮಹಾ ಎಷ್ಟು ಲಾಭ ಸಿಗುತ್ತೆ ಅಂತ ರಾಗ ಎಳೆಯೋರಿದ್ದಾರೆ. ಆದ್ರೆ ಅರುಣ್ ಜೋಶಿ ಕಥೆ ನಿಮ್ಮ ನಂಬಿಕೆ ಬದಲಿಸುತ್ತೆ.
 

Mumbai Pani Puri Seller Arun Joshi Owner Of Two Flats Son In America roo

ಭಾರತದಲ್ಲಿ ಬೀದಿ ಬದಿ ಆಹಾರಕ್ಕೆ ಹೆಚ್ಚು ಬೇಡಿಕೆ ಇದೆ. ಭಾರತೀಯರು ಬಾಯಿ ಚಪ್ಪರಿಸಿ ಬೀದಿ ಬದಿ ಆಹಾರ ಸೇವನೆ ಮಾಡ್ತಾರೆ. ಇದೇ ಕಾರಣಕ್ಕೆ ಬೇಲ್ಪುರಿ, ಪಾನಿಪುರಿ, ಗೋಬಿ ಮಂಚೂರಿ ತಯಾರಿಸುವವರ ಜೇಬು ತುಂಬುತ್ತಿದ್ದೆ. ಬೀದಿಯಲ್ಲಿ ಅದೆಷ್ಟೇ ಹೊಸ ಹೊಸ ಸ್ಟಾಲ್ ಓಪನ್ ಆದ್ರೂ ಅದ್ರ ಮುಂದೆ ಜನರಿರುತ್ತಾರೆ. ರುಚಿಯಾದ ಆಹಾರ ಸಿಗುತ್ತೆ ಅಂದ್ರೆ ಆ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು. ಒಳ್ಳೆ ಸರ್ಕಾರಿ ನೌಕರಿ ಮಾಡ್ಬೇಕು ಇಲ್ಲವೆ ಐಟಿ ಕಂಪನಿಯಲ್ಲಿ ಕೆಲಸ ಮಾಡ್ಬೇಕು ಎಂದು ಬಹುತೇಕರು ಕನಸು ಕಾಣ್ತಾರೆ. ಎಲ್ಲೂ ಕೆಲಸ ಇಲ್ಲದ ಸಮಯದಲ್ಲಿ ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡೋರು ಹೆಚ್ಚು. ಆದ್ರೆ ಬೀದಿ ಬದಿಯಲ್ಲಿ ಗೋಲ್ಗಪ್ಪ ಸ್ಟಾಲ್ ಓಪನ್ ಮಾಡಿ ಯಶಸ್ವಿಯಾಗ್ಬೇಕು ಎನ್ನುವವರು ಅತೀ ವಿರಳ. ಆದ್ರೆ ಅರುಣ್ ಜೋಶಿಯ ಕನಸಿನ ಕೆಲಸ ಇದಾಗಿತ್ತು. ಸತತ ಪರಿಶ್ರಮದ ನಂತ್ರ ಅವರು ತಮ್ಮ ಕನಸು ನನಸುಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಎರಡು ಫ್ಲಾಟ್ ಖರೀದಿ ಮಾಡುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ವಿದೇಶಕ್ಕೆ ಕಳುಹಿಸುವಲ್ಲಿ ಅರುಣ್ ಜೋಶಿ ಯಶಸ್ವಿಯಾಗಿದ್ದಾರೆ.

ಅರುಣ್ ಜೋಶಿ (Arun Joshi) ಅವರ ತಂದೆಯೇ ಅರುಣ್ ಈ ಮಟ್ಟಕ್ಕೆ ಬರಲು ಮೂಲ ಕಾರಣ. ಅವರ ತಂದೆ 60 ರ ದಶಕದಲ್ಲಿ ಮುಂಬೈಗೆ ಬಂದರು. ಅವರು ತಳ್ಳುವ ಗಾಡಿಯಲ್ಲಿ ಪಾನಿಪುರಿ (Panipuri) ಮಾರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಮಕ್ಕಳ ಆಹಾರ ಹಾಗೂ ಬಟ್ಟೆಗೆ ಯಾವುದೇ ಸಮಸ್ಯೆ ಆಗದಂತೆ ಅವರು ನೋಡಿಕೊಂಡಿದ್ದರು. ಮುಂಬೈ (Mumbai) ನಲ್ಲೊಂದು ಅಂಗಡಿ ತೆರೆಯುವ ಕನಸನ್ನು ಅವರು ಹೊಂದಿದ್ದರು. ಆದ್ರೆ ಅವರ ಅನಾರೋಗ್ಯ ಅವರ ಕನಸನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 

ಹಳ್ಳಿ ಜನರಿಗೂ ಇಷ್ಟವಾಗ್ತಿದೆ ಈ ಉತ್ಪನ್ನ…. ವ್ಯಾಪಾರ ಶುರು ಮಾಡಿ ಲಕ್ಷ ಗಳಿಸ್ತಿರುವ ಉದ್ಯಮಿ

ದುಡಿಮೆಯಿಂದ ಕೂಡಿಟ್ಟ 60,000 ಸಾವಿರ ರೂಪಾಯಿ ಕೂಡ ತಂದೆ ಚಿಕಿತ್ಸೆಗೆ ಖರ್ಚಾಗಿತ್ತು. ಈ ವೇಳೆ ಅರುಣ್ ಜೋಶಿ, ಬೇಲ್ಪುರಿ ತಳ್ಳುಗಾಡಿಯಲ್ಲಿ ಮತ್ತೆ ಕೆಲಸ ಶುರು ಮಾಡಿದ್ರು. ಸುಮಾರು ನಾಲ್ಕು ವರ್ಷಗಳ ನಂತ್ರ ಅರುಣ್ ಜೋಶಿ ಕುಟುಂಬದಲ್ಲಿ ಸಂತೋಷ ಮರಳಿ ಬಂದಿತ್ತು. ಅರುಣ್ ಜೋಶಿ ತಂದೆ ಆರೋಗ್ಯ ಸುಧಾರಿಸಿದ್ದಲ್ಲದೆ ಅವರು ಒಂದು ಅಂಗಡಿ ತೆರೆಯಲು ಸಾಧ್ಯವಾಯ್ತು. 

ಅರುಣ್ ಜೋಶಿ ಬರೀ ಪಾನಿಪುರಿ ನಂಬಿ ಬದುಕಲಿಲ್ಲ. ಅವರು ತಮ್ಮ ಮೆನುವಿನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ರು. ಕೇಟರಿಂಗ್ ಉದ್ಯಮಕ್ಕೆ ಕೈ ಹಾಕಿದ್ರು. ಅವರ ಅಂಗಡಿಯಲ್ಲಿ ಈಗ ಅನೇಕ ರೀತಿಯ ಚಾಟ್ ಲಭ್ಯವಿದೆ. ಸೆಲೆಬ್ರಿಟಿಗಳು ಅವರ ಗ್ರಾಹಕರಾಗಿದ್ದಾರೆ. ಆರ್ ಡಿ ಬರ್ಮನ್ ನನ್ನ ನಿಯಮಿತ ಗ್ರಾಹಕರಾದ್ದರು ಎಂದು ಅರುಣ್ ಜೋಶಿ  ಹೇಳಿದ್ದಾರೆ. ಬೇಲ್ಪುರಿ ತಯಾರಿಸುವ ವೇಳೆ ಅರುಣ್ ಆದಾಯ ದಿನಕ್ಕೆ ಐದು ರೂಪಾಯಿ ಇತ್ತು. ಅರುಣ್ 2012 ರಲ್ಲಿ ಮುಂಬೈನ ಐಷಾರಾಮಿ ಜಾಗದಲ್ಲಿ ಎರಡು ಮನೆ ಖರೀದಿ ಮಾಡಿದ್ದಾರೆ. ಅರುಣ್ ಜೋಶಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಮಗ ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಓದಿ ಮೂರೇ ವರ್ಷದಲ್ಲಿ 300 ಕೋಟಿ ವ್ಯವಹಾರ ನಡೆಸ್ತಿರುವ ಯುವಕ 

ಅರುಣ್ ಜೋಶಿ ಅನೇಕ ಯುವಕರಿಗೆ ಸ್ಪೂರ್ತಿ. ಪಾನಿಪುರಿ, ಬೇಲ್ಪುರಿ ಸೇರಿದಂತೆ ಬೀದಿ ಬದಿಯಲ್ಲಿ ಸ್ಟಾಲ್ (Street Food Stal) ತೆರೆದು ಏನು ಮಾಡಲು ಸಾಧ್ಯ ಎನ್ನುವವರಿಗೆ ಅರುಣ್ ಮಾದರಿಯಾಗಿದ್ದಾರೆ. ಯಾವ ಕೆಲಸದಲ್ಲೂ ಮೇಲು ಕೀಳಿಲ್ಲ. ಕೆಲಸವನ್ನು ಹೇಗೆ ಮಾಡ್ತಾರೆ ಎಂಬುದು ಮುಖ್ಯ ಎಂದು ಅರುಣ್ ಹೇಳ್ತಾರೆ. ಮನಸ್ಸಿದ್ದಲ್ಲಿ, ಗುಣಮಟ್ಟದ ಕೆಲಸವನ್ನು ಮುಂದುವರೆಸಿದ್ರೆ ಯಶಸ್ಸು ಸಾಧ್ಯ ಎಂಬುದಕ್ಕೆ ಜೋಶಿ ಉತ್ತಮ ನಿದರ್ಶನ. 

Latest Videos
Follow Us:
Download App:
  • android
  • ios