Asianet Suvarna News Asianet Suvarna News

ಭಿನ್ನಾಭಿಪ್ರಾಯವಿದ್ರೂ ಪರಸ್ಪರ ಗೌರವವೂ ಇದ್ಯಂತೆ ಐಶ್-ಅಭಿ ಮಧ್ಯೆ: ದೇಹಭಾಷೆ ತಜ್ಞರ ಅಭಿಪ್ರಾಯ

ಬಾಲಿವುಡ್‌ ನ ತಾರಾ ಜೋಡಿಯಾದ ಐಶ್ವರ್ಯಾ ರೈ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ಸದ್ಯದಲ್ಲೇ ದೂರವಾಗಲಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಅವರಿಬ್ಬರ ನಡುವೆ ಆಳವಾದ ಬಾಂಧವ್ಯ, ಪರಸ್ಪರ ಮೆಚ್ಚುಗೆ ಹಾಗೂ ಪ್ರಬುದ್ಧ ಪ್ರೀತಿಯಿದೆ ಎಂದು ದೇಹಭಾಷೆಯ ತಜ್ಞರು ಹೇಳಿದ್ದಾರೆ.
 

Body Language experts reveal Aishwarya Rai and Abhishek Bachchan relationship
Author
First Published Dec 20, 2023, 5:51 PM IST

ಬಾಲಿವುಡ್‌ ನ ತಾರಾ ಕುಟುಂಬಗಳಲ್ಲಿ ಕೇಂದ್ರಬಿಂದುವಿನಂತೆ ಗಮನ ಸೆಳೆಯುವುದೆಂದರೆ, ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಕುಟುಂಬ. ಅಮಿತಾಭ್‌ ಬಚ್ಚನ್‌ ಮತ್ತು ಜಯಾಬಚ್ಚನ್‌ ಸೊಸೆಯಾಗಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಕಾಲಿಟ್ಟ ಮೇಲಂತೂ ಅವರ ಕುಟುಂಬಕ್ಕೆ ಮತ್ತೊಂದು ಹೊಸ ಖದರು ಬಂದಂತಾಗಿತ್ತು. ಅಭಿಷೇಕ್‌ ಬಚ್ಚನ್ ಹಾಗೂ ಐಶ್ವರ್ಯಾ ರೈ  ಮದುವೆಯಾಗಿ ಬರೋಬ್ಬರಿ ೧೬ ವರ್ಷಗಳಾಗಿವೆ. ಇದೀಗ, ಇವರ ಸಂಸಾರದಲ್ಲಿ ಅಪಸ್ವರ ಎದ್ದಿದೆ ಎನ್ನುವ ಮಾತೂ ಜೋರಾಗಿದೆ. ಸದ್ಯದಲ್ಲೇ ಇಬ್ಬರೂ ದೂರವಾಗಲಿದ್ದಾರೆ ಎನ್ನುವ ಗಾಸಿಪ್‌ ಕೇಳಿಬರುತ್ತಿದೆ. ಬಚ್ಚನ್‌ ಕುಟುಂಬದ ಆಪ್ತರ ಪ್ರಕಾರ, ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ಮಧ್ಯೆ ಕಳೆದ ಕೆಲವು ವರ್ಷಗಳಿಂದ ಏನೂ ಸರಿಯಿಲ್ಲ. ಅಲ್ಲದೇ, ಐಶ್ವರ್ಯಾ ಅವರಿಗೆ ಅತ್ತೆ ಜಯಾಬಚ್ಚನ್‌ ಹಾಗೂ ನಾದಿನಿ ನಂದಾ ಮೇಲೆ ಕೆಲವು ವಿಚಾರಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಇದೆಯಂತೆ. ಏನೇ ಇರಲಿ, ಈ ತಾರಾ ಜೋಡಿ ಬೇರೆಯಾಗುವುದು ಅಭಿಮಾನಿಗಳಿಗೆ ಇಷ್ಟವಿಲ್ಲದ ಸಂಗತಿ. 
ಮೊನ್ನೆಯಷ್ಟೇ ಐಶ್ವರ್ಯಾ ರೈ ಬಚ್ಚನ್‌ (Aishwarya Rai Bachchan) ಹಾಗೂ ಅಭಿಷೇಕ್‌ ಬಚ್ಚನ್‌ (Abhishek Bachchan) ಮಗಳು ಆರಾಧ್ಯಾ (Aradhya) ಬಚ್ಚನ್‌ ಶಾಲಾ ಕಾರ್ಯಕ್ರಮಕ್ಕೆ ಕುಟುಂಬದ (Family) ಎಲ್ಲರೂ ಹೋಗಿ, ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಬಂದಿದ್ದಾರೆ. ಈ ವೇಳೆ, ಐಶ್ವರ್ಯಾ ಸೇರಿದಂತೆ ಯಾರೂ ಸಹ ಏನೊಂದೂ ಅಸಹಜತೆಯನ್ನು ಪ್ರದರ್ಶಿಸದೇ ಚೆನ್ನಾಗಿ ವರ್ತಿಸಿರುವುದು ಎಲ್ಲರ ಗಮನ ಸೆಳೆದಿರುವ ಸಂಗತಿ. ಈ ಸಮಯದಲ್ಲಿ ಬಚ್ಚನ್‌ ಕುಟುಂಬ ಮತ್ತೊಮ್ಮೆ ಮೆಚ್ಚುಗೆ (Adoration) ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ತೆಗೆದ ಭಾವಚಿತ್ರವೊಂದು ವೈರಲ್‌ ಆಗಿದೆ. ಇದೀಗ, ಬಾಡಿ ಲಾಂಗ್ವೇಜ್‌ ತಜ್ಞರೊಬ್ಬರು ಐಶ್ವರ್ಯಾ ಮತ್ತು ಅಭಿಷೇಕ್‌ ಅವರ ನಡುವಿನ ಬಾಂಧವ್ಯವನ್ನು (Relationship) ವಿಶ್ಲೇಷಿಸಿದ್ದಾರೆ. 

ಐಶ್ವರ್ಯಾ ರೈಗೆ ಬೇಕೆಂದೇ ಅವಮಾನಿಸಿದ್ರಾ ಅತ್ತಿಗೆ ಶ್ವೇತಾ ಬಚ್ಚನ್‌

ಪ್ರೇರಣಾದಾಯಿ ಜೋಡಿ
ಬಾಲಿವುಡ್‌ ನಲ್ಲಿ ಗ್ಲಾಮರ್‌ (Glamour) ಗೆ ಮತ್ತೊಂದು ಹೆಸರಾಗಿರುವ ಐಶ್ವರ್ಯಾ ರೈ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ಇಂದಿಗೂ ಪ್ರೇರಣಾದಾಯಕ ಜೋಡಿ. ಬಾಲಿವುಡ್‌ ನಲ್ಲಿ ಕೆಲವೇ ಜೋಡಿಗಳು (couple) ಇಂತಹ ಚಾರ್ಮ್‌ (Charm) ಹೊಂದಿವೆ ಎನ್ನುವುದು ಸತ್ಯ. ಐಶ್ವರ್ಯಾ ರೈ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ನಡುವೆ ಆಳವಾದ ಬಾಂಧವ್ಯ ಇರುವುದನ್ನು ಬಾಡಿ ಲಾಂಗ್ವೇಜ್‌ (Body Language) ತಜ್ಞರು  (Experts) ಗುರುತಿಸುತ್ತಾರೆ. ಮದುವೆಯಾಗಿ ಇಷ್ಟು ವರ್ಷವಾದರೂ ಈ ಜೋಡಿ ಇಂಡಸ್ಟ್ರಿಯಲ್ಲಿ ಅತಿ ಬೇಡಿಕೆಯುಳ್ಳ ಜೋಡಿಯೆಂದೇ ಖ್ಯಾತವಾಗಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರಿಬ್ಬರ ಬಾಂಧವ್ಯ ಹೆಚ್ಚು ಗಮನ ಸೆಳೆಯುವಂಥದ್ದು.  

ವೈರಲ್‌ ಫೋಟೋದ (Viral Photo) ದೇಹಭಾಷೆ
ದೇಹ ಭಾಷೆಯ ತಜ್ಞರ ಪ್ರಕಾರ, ಐಶ್ವರ್ಯಾ ರೈ ಬಚ್ಚನ್‌ ಹಾಗೂ ಅಭಿಷೇಕ್‌ ಬಚ್ಚನ್‌ ಅವರ ನಡುವೆ ಪರಸ್ಪರ ಎಂದಿಗೂ ಮಾಸದ ಗೌರವವಿದೆ. ಕೊನೆಯಿಲ್ಲದ ಚಾರ್ಮ್‌ ಇದೆ, ಇದು ಅವರ ಅಭಿಮಾನಿಗಳಲ್ಲಿ ಅತೀವ ಸದ್ಭಾವನೆ ಮೂಡಿಸುವಲ್ಲಿ ಸಹಕಾರಿಯಾಗಿದೆ. ಅಭಿಷೇಕ್‌ ಮತ್ತು ಐಶ್ವರ್ಯಾ ಇಬ್ಬರಲ್ಲೂ ಅತ್ಯಂತ ಪ್ರಬುದ್ಧವಾದ (Matured) ದೇಹಭಾಷೆಯಿದೆ. ಅಭಿಷೇಕ್‌ ನಿಜವಾಗಿಯೂ ಜೆಂಟಲ್‌ ಮ್ಯಾನ್‌ ಆಗಿದ್ದು, ಅವರ ಸಣ್ಣದೊಂದು ಭಾವದಿಂದ  ಅದು ತಿಳಿದುಬರುತ್ತದೆ. ಐಶ್ವರ್ಯಾ ಜತೆಗಿನ ಮದುವೆಯ ಕುರಿತು ಅವರಲ್ಲಿ ಆಳವಾದ ಗೌರವವಿದೆ. ಹಾಗೆಯೇ, ಐಶ್ವರ್ಯಾ ರೈ ಬಚ್ಚನ್‌ ಅವರಲ್ಲೂ ಅಪಾರ ಪ್ರೀತಿ, ಕಾಳಜಿ, ಗೌರವ (Respect) ತುಂಬಿ ತುಳುಕುತ್ತಿವೆ. ಭಿನ್ನಾಭಿಪ್ರಾಯ (Difference) ಇದ್ದಾಗಲೂ ತನ್ನ ಕುಟುಂಬದ ಬಗ್ಗೆ ಆಕೆಗೆ ಅಪಾರ ಹೆಮ್ಮೆಯಿದೆ, ಗೌರವವಿದೆ. ಜೀವನಸಂಗಾತಿಯಾಗಿ ಅವರು ಪರಸ್ಪರ ಅರ್ಥಮಾಡಿಕೊಂಡು, ಆರೋಗ್ಯಕರ (Healthy) ಅಂತರವನ್ನೂ ಕಾಪಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಅಭಿ-ಐಶ್: ‘ಕುಛ್ ನಾ ಕಹೋ’ ಅಂತ ಹೇಳಿದ ಬಾಲಿವುಡ್ ಕಪಲ್!

“ತಮ್ಮ ಬಾಂಧವ್ಯದ ಬಗ್ಗೆ ಅವರು ಸಂತಸದಿಂದ ಇದ್ದಾರೆ. ಪ್ರೀತಿ (Love) ಮತ್ತು ಪ್ರಬುದ್ಧತೆ ಅವರಲ್ಲಿ ಮೇಳೈಸಿದೆ. ಅವರ ಸಂಬಂಧ ದಿನದಿಂದ ದಿನಕ್ಕೆ ಗಾಢವಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಪರಸ್ಪರ ಬದ್ಧತೆ, ಆಳವಾದ ಮೆಚ್ಚುಗೆ ಕಂಡುಬರುತ್ತಿದೆʼ ಎನ್ನುವುದು ದೇಹಭಾಷೆ ತಜ್ಞರ ಅಭಿಪ್ರಾಯ.

Follow Us:
Download App:
  • android
  • ios