Asianet Suvarna News Asianet Suvarna News

ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಅಭಿ-ಐಶ್: ‘ಕುಛ್ ನಾ ಕಹೋ’ ಅಂತ ಹೇಳಿದ ಬಾಲಿವುಡ್ ಕಪಲ್!

ಸಂಸಾರ ಹಳಿ ತಪ್ಪಿದ್ರೆ ಆ ಫ್ಯಾಮಿಲಿ ಬಗ್ಗೆ ಹಬ್ಬೋ ಗಾಸಿಪ್ಗಳು ಒಂದೇ ಎರಡೇ. ಅತ್ತೆ ಸೊಸೆ ಜಗಳ ಅಂತೆ. ಗಂಡಾ ಹೆಂಡತಿ ಪ್ರಾಬ್ಲೆಮ್ ಅಂತೆ ಆಸ್ತಿಗಾಗಿ ಗಲಾಟೆ ಅಂತೆ ಹೀಗೆ ಹತ್ತಾರ ಕತೆಗಳು ಹುಟ್ಟಿಕೊಳ್ತಾವೆ. ಇತ್ತೀಚೆಗೆ ಬಾಲಿವುಡ್ ವಿಶ್ವಸುಂದರಿ ಐಶ್ವರ್ಯ ರೈ ಬಗ್ಗೆಯೂ ಅಂತಹದ್ದೇ ಸುದ್ದಿಗಳು ಹರದಾಡಿದ್ವು.

Abhishek Bachchan Aishwarya Rai Make Appearance Together Despite Divorce Rumours gvd
Author
First Published Dec 20, 2023, 11:32 AM IST

ಸಂಸಾರ ಹಳಿ ತಪ್ಪಿದ್ರೆ ಆ ಫ್ಯಾಮಿಲಿ ಬಗ್ಗೆ ಹಬ್ಬೋ ಗಾಸಿಪ್ಗಳು ಒಂದೇ ಎರಡೇ. ಅತ್ತೆ ಸೊಸೆ ಜಗಳ ಅಂತೆ. ಗಂಡಾ ಹೆಂಡತಿ ಪ್ರಾಬ್ಲೆಮ್ ಅಂತೆ ಆಸ್ತಿಗಾಗಿ ಗಲಾಟೆ ಅಂತೆ ಹೀಗೆ ಹತ್ತಾರ ಕತೆಗಳು ಹುಟ್ಟಿಕೊಳ್ತಾವೆ. ಇತ್ತೀಚೆಗೆ ಬಾಲಿವುಡ್ ವಿಶ್ವಸುಂದರಿ ಐಶ್ವರ್ಯ ರೈ ಬಗ್ಗೆಯೂ ಅಂತಹದ್ದೇ ಸುದ್ದಿಗಳು ಹರದಾಡಿದ್ವು. ಐಶ್ವರ್ಯ ರೈ ಅಭಿಶೇಕ್ ಬಚ್ಚನ್ಗೆ ಡಿವೋರ್ಸ್ ಕೊಟ್ಟೇ ಕೊಡ್ತಾರೆ ಅಂತ ಹೇಳಿದ್ರು. ಈಗ ಇಲ್ಲ ಇಲ್ಲ. ಹಾಗೇನು ಆಗಲ್ಲ ಅಂತ ಅದೇ ಬಾಲಿವುಡ್ ಮಂದಿ ಹೇಳ್ತಿದ್ದಾರೆ. ಹಾಗಾದ್ರೆ ಹಳಿ ತಪ್ಪಿದ್ದ ಐಶ್ ದಾಂಪತ್ಯ ಮತ್ತೆ ಟ್ರ್ಯಾಕ್ಗೆ ಬಂತಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ..!

ಬಾಲಿವುಡ್ಗೆ ಬಚ್ಚನ್ ಖಾನ್ದಾನ್ನ ಇನ್ನೊಂದು ಕುಡಿ ಎಂಟ್ರಿ ಆಗಿದ್ದಾಗಿದೆ. ಆರ್ಚಿಸ್ ಸಿನಿಮಾ ಮೂಲಕ ಅಗಸ್ತ್ಯ ನಂದಾ ಎಲ್ಲರ ಗಮನ ಸೆಳೆದಿದ್ದಾರೆ. ಇದೇ ಸಿನಿಮಾ ಪ್ರಿಮಿಯರ್ನಲ್ಲಿ ಬಚ್ಚನ್ ಫ್ಯಾಮಿಲಿ ಸದಸ್ಯರೆಲ್ಲರೂ ಹಾಜರಿದ್ದರು. ಆದರೆ ಅಲ್ಲಿದ್ದವರೆಲ್ಲರ ಕಣ್ಣು ಇದ್ದಿದ್ದು ಮಾತ್ರ ಐಶ್-ಅಭಿ ಮೇಲೆ ಮಾತ್ರ. ಐಶ್-ಅಭಿ ಡಿವೋರ್ಸ್ ತೆಗೆದುಕೊಳ್ತಿದ್ದಾರೋ.. ಇಲ್ವೋ ಅನ್ನೊದೇ ಅಲ್ಲಿದ್ದವರೆಲ್ಲರ ಮುಖದಲ್ಲಿ ಎದ್ದು ಕಾಣ್ತಿದ್ದ ಪ್ರಶ್ನೆಯಾಗಿತ್ತು. ಆದರೆ ಐಶ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅಳಿಯನಿಗೆ ಜೋಶ್ ತುಂಬ್ತಾ ಇದ್ದರು. 

ಎಷ್ಟಂದರೂ ಎತ್ತಿ ಆಡಿಸಿದ ಮಗು ಅಲ್ವಾ..!! ಹಾಗಾದ್ರೆ ಐಶ್ ಬಚ್ಚನ್ ಫ್ಯಾಮಿಲಿಯಿಂದ ದೂರ ಆಗ್ತಿಲ್ವಾ, ಈ ಕನ್ಫ್ಯೂಶನ್ ಎಲ್ಲರಿಗೂ ಆಗ್ತಿರುವಾಗಲೇಈ ಬಾಲಿವುಡ್ ಕಪಲ್ ಕ್ಲಿಯರ್ ಆಗಿ ಆನ್ಸರ್ ಮಾಡಿದೆ. ಆರಾಧ್ಯ ಬಚ್ಚನ್ ಓದುತ್ತಿದ್ದ, ಧೀರೂಬಾಯಿ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ನಡೆದ, ಕಾರ್ಯಕ್ರಮದಲ್ಲಿ, ಮಗಳ ಅದ್ಭುತ ನಾಟಕ ನೋಡಿ ಬಂದ ಅಪ್ಪ ಅಭಿ ಹಾಗೂ ಅಮ್ಮ ಐಶ್ ಮುಖದಲ್ಲಿ ಖುಷಿ ಇತ್ತು. ಆ ಖುಷಿಯಲ್ಲಿ ಎಲ್ಲವನ್ನೂ ಮರೆತ ಅಭಿ-ಐಶ್ ಖುಷಿ-ಖುಷಿಯಾಗಿ ಒಂದೇ ಕಾರಲ್ಲಿ ಹೊರಟಿದ್ದರು. ಅದೇ ಕಾರಲ್ಲಿದ್ದ ಆರಾಧ್ಯ ಕೂಡ ಅಪ್ಪ ಅಮ್ಮನ ಜೊತೆ ಹರಟೆ ಹೊಡೀತಾ ಎಂಜಾಯ್ ಮಾಡ್ತಿದ್ದಳು. 

Sonu Gowda: ‘ನನ್ನ ನಗು ಎಷ್ಟು ಸುಂದರ’ ಎಂದ ಬಿಕಿನಿ ಬ್ಯೂಟಿ: ನನ್ ಮೇಲೆ ಆಣೆ ಮಾಡಿ ಹೇಳು ಎಂದ ಫ್ಯಾನ್ಸ್‌!

ಇದಿಷ್ಟು ಸಾಕಾಗಿತ್ತು ಎಲ್ಲರಿಗೂ ಇವರಿಬ್ಬರೂ ಡಿವೋರ್ಸ್ ಪಡೆಯೋ ಮಾತೇ ಇಲ್ಲ ಅನ್ನೊ ಉತ್ತರ ಸಿಕ್ಕಿತ್ತು. ಕಳೆದ ಕೆಲ ದಿನಗಳಿಂದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಬಿರುಕು ಹೆಚ್ಚಾಗಿದ್ದು, ಐಶ್ವರ್ಯ ಬಚ್ಚನ್ ಕುಟುಂಬದಿಂದ ದೂರವಾಗಿದ್ದಾರೆ. ಅವರ ನಡುವೆ ಏನೇನು ಸರಿ ಇಲ್ಲ. ಇವರ ಕುಟುಂಬದಲ್ಲಿ ಅಭಿಷೇಕ್ ಸಹೋದರಿ ಶ್ವೇತಾ ನಂದಾ ಅವರು ಹುಳಿ ಹಿಂಡಿದ್ದಾರೆ ಅನ್ನೊ ಇಲ್ಲ ಸಲ್ಲದ ಸುದ್ದಿ ಹರಡಿತ್ತು. ಅಭಿ-ಐಶ್ ಇನ್ನೇನು ಡಿವೋರ್ಸ್ ತೆಗೆದುಕೊಂಡು ಬಿಡ್ತಾರೆ ಅನ್ನೊ ಸುದ್ದಿ ಹರಡಿತ್ತು. ಆದರೆ ಈಗ ಅದಕ್ಕೆಲ್ಲ ಕ್ಲಿಯಕ್ ಕಟ್ ಆಗಿ ಬ್ರೇಕ್ ಬಿದ್ದಿದೆ. 

Latest Videos
Follow Us:
Download App:
  • android
  • ios