ಐಶ್ವರ್ಯಾ ರೈಗೆ ಬೇಕೆಂದೇ ಅವಮಾನಿಸಿದ್ರಾ ಅತ್ತಿಗೆ ಶ್ವೇತಾ ಬಚ್ಚನ್
ಐಶ್ವರ್ಯಾ ಅವರ ನಾದಿನಿ(ಅತ್ತಿಗೆ) ಶ್ವೇತಾ ಬಚ್ಚನ್ ಮತ್ತು ಐಶ್ ಪತಿ ಅಭಿಷೇಕ್ ಬಚ್ಚನ್ ಮಾಜಿ ಪ್ರೇಯಸಿ ಕರೀಷ್ಮಾ ಕಪೂರ್ ಅವರ ನಡುವೆ ಒಡನಾಟ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಅಭಿಷೇಕ್ ಐಶ್ವರ್ಯಾ ಡಿವೋರ್ಸ್ ರೂಮರ್ಸ್ ಮಧ್ಯೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಆ ಬಗ್ಗೆ ಒಂದುವ ವರದಿ ಇಲ್ಲಿದೆ.

ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಸೌಂದರ್ಯದ ಖನಿಯಾದ ಐಶ್ವರ್ಯಾ ರೈ ಅತ್ತೆ ಮಾವನ ಪ್ರೀತಿಯ ಸೊಸೆಯೂ ಹೌದು. 2007ರಲ್ಲಿ ಅಭಿಷೇಕ್ ಬಚ್ಚನ್ ಪ್ರೀತಿಸಿ ಮದುವೆಯಾದ ಐಶ್ವರ್ಯಾ ರೈ 2011ರಲ್ಲಿ ಮಗಳು ಆರಾಧ್ಯಾ ಬಚ್ಚನ್‌ಗೆ ಜನ್ಮ ನೀಡಿದ್ದರು. ಇದೆಲ್ಲದರ ಮಧ್ಯೆ ಕೆಲ ದಿನಗಳಿಂದ ಈ ಕುಟುಂಬದಲ್ಲಿ ಯಾವುದೂ ಸರಿ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ.
ಈ ಊಹಾಪೋಹಗಳ ನಡುವೆಯೇ ಐಶ್ವರ್ಯಾ ಅವರ ನಾದಿನಿ(ಅತ್ತಿಗೆ) ಶ್ವೇತಾ ಬಚ್ಚನ್ ಮತ್ತು ಪತಿ ಅಭಿಷೇಕ್ ಬಚ್ಚನ್ ಮಾಜಿ ಪ್ರೇಯಸಿ ಕರೀಷ್ಮಾ ಕಪೂರ್ ಅವರ ನಡುವೆ ಒಡನಾಟ ಹಿಂದೆಂದಿಗಿಂತಲೂ ಈಗ ಉತ್ತಮವಾಗಿದೆ. ಇವರ ಎಂದೂ ಇರದ ಈ ಒಡನಾಟ ಡಿವೋರ್ಸ್ ರೂಮರ್ಸ್ ನಂತರ ಹೆಚ್ಚಾಗಿದ್ದು, ಇದು ಅಭಿಷೇಕ್ ಪತ್ನಿ ಎನಿಸಿರುವ ಐಶ್ವರ್ಯಾ ರೈ ಬಚ್ಚನ್‌ಗೆ ಇರಿಸುಮುರಿಸಾಗುವಂತಹ ಸಂದರ್ಭವೊಂದು ಎದುರಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
2018ರಲ್ಲಿ ಅಭಿಷೇಕ್ ಬಚ್ಚನ್ ಸೋದರಿ ಶ್ವೇತಾ ಬಚ್ಚನ್ ನಂದಾ ಅವರು ತಮ್ಮ ಡಿಸೈನರ್ ಮೊನಿಶಾ ಜೈಸಿಂಗ್ ಜತೆಗೂಡಿ ಮ್ಯಾಕ್ಸ್ ಸಹಯೋಗದಲ್ಲಿ ಸ್ವಂತ ಉಡುಪುಗಳ ಬ್ರಾಂಡ್‌ವೊಂದನ್ನು ಹೊರತಂದಿದ್ದರು. ಇದಕ್ಕಾಗಿ ಅವರು ಬಾಲಿವುಡ್ ತಾರೆಗಳೇ ಮೇಳೈಸಿದ್ದ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ಬಹುತೇಕ ಬಾಲಿವುಡ್ ತಾರೆಯರು ತಮ್ಮದೇ ಸ್ಟೈಲ್‌ನಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್ ಮಾಜಿ ಗೆಳತಿ ಕರೀಷ್ಮಾ ಕಪೂರ್ ಕೂಡ ಆಗಮಿಸಿದ್ದರು. ಇದು ಅನೇಕರ ಹುಬ್ಬುಗಳನ್ನು ಮೇಲೇರುವಂತೆ ಮಾಡಿದ್ದವು. ಅಭಿಷೇಕ್ ಹಾಗೂ ಕರೀಷ್ಮಾ ನಡುವಿನ ಈ ಬ್ರೇಕಪ್ ನಂತರ ಬಚ್ಚನ್ ಕುಟುಂಬದ ಯಾರೊಬ್ಬರೂ ಕೂಡ ಕರೀಷ್ಮಾ ಜೊತೆ ಮಾತನಾಡಿರಲಿಲ್ಲ ಹೀಗಾಗಿ ಈ ಕಾರ್ಯಕ್ರಮದಲ್ಲಿ ದಿಢೀರ್ ಕರೀಷ್ಮಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
Aishwarya Rai
ಈ ವೇಳೆ ಪ್ರಕಟವಾದ ಹಲವು ವರದಿಗಳು ಸ್ವತಃ ಶ್ವೇತಾ ಬಚ್ಚನ್ ಅವರೇ ತನ್ನ ಹಾಗೂ ಕರೀಷ್ಮಾ ನಡುವಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಈ ಪ್ರಯತ್ನ ಮಾಡಿದ್ದರು ಎಂದು ಮಾಹಿತಿ ನೀಡಿದ್ದವು. ಆದರೆ ತನ್ನ ಗಂಡನ ಮಾಜಿ ಪ್ರೇಯಸಿಯಾದ ಕರೀಷ್ಮಾ ಜೊತಗೆ ತನ್ನ ನಾದಿನಿ ಶ್ವೇತಾ ಬಚ್ಚನ್‌ಳ ಈ ಒಡನಾಟ ಮಾತ್ರ ಐಶ್ವರ್ಯಾ ರೈಯವರನ್ನು ಆ ಕಾರ್ಯಕ್ರಮದಲ್ಲಿ ತುಂಬಾ ಮುಜುಗರಕ್ಕೀಡು ಮಾಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
Aishwarya Rai
ಶ್ವೇತಾ ಬಚ್ಚನ್ ಹಾಗೂ ಅತ್ತಿಗೆ ಐಶ್ವರ್ಯಾ ರೈ ಬಚ್ಚನ್ ನಡುವಿನ ಸಂಬಂಧದ ಶೀತಲ ಸಮರದ ಬಗ್ಗೆ ಮಾಧ್ಯಮಗಳು ಈ ಹಿಂದೆಯೂ ಆಗಾಗ ವರದಿ ಮಾಡಿದ್ದವು. ಆ ಕಾರ್ಯಕ್ರಮದಲ್ಲೇ ಶ್ವೇತಾ ಬಚ್ಚನ್ ತನ್ನ ಅತ್ತಿಗೆಯನ್ನು ಹೊರತುಪಡಿಸಿ ಬೇರೆಲ್ಲಾ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು.
ಇದೇ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ತನ್ನ ಮಾಜಿ ಗೆಳತಿ ಕರೀಷ್ಮಾ ಕಪೂರ್‌ನ್ನು ನಿರ್ಲಕ್ಷಿಸಿದ್ದರು. ಐಶ್ವರ್ಯಾ ಹಾಗೂ ಅಭಿಷೇಕ್ ಪಾಪಾರಾಜಿಗಳಿಗೆ ಫೋಟೋಗೆ ಫೋಸ್ ನೀಡುವ ವೇಳೆಯೇ ಅಲ್ಲಿಗೆ ಕರೀಷ್ಮಾ ಬಂದಿದ್ದರು.
ಇದನ್ನು ನೋಡಿದ ಅಭಿಷೇಕ್ ಸೀದಾ ಕಾರ್ಯಕ್ರಮದ ಒಳಗೆ ಹೋದರೆ ಐಶ್ವರ್ಯಾ ಮಾತ್ರ ಅಲ್ಲೇ ನಿಂತು ಕರೀಷ್ಮಾಗೆ ವಿಶ್ ಮಾಡದೇ ಮುಂದೆ ಸಾಗಿದ್ದರು.
ಅದೇನೇ ಇರಲಿ ಒಂದು ಸಂಬಂಧ ಹಳಸಿದ ನಂತರ ಮತ್ತೆ ಮತ್ತೆ ಆ ವ್ಯಕ್ತಿಯ ಮುಖ ನೋಡಲು ಯಾರು ಬಯಸುವುದಿಲ್ಲ, ಇದೇ ಕಾರಣಕ್ಕೆ ಇಲ್ಲಿ ಐಶ್ವರ್ಯಾಗೆ ಮುಜುಗರವಾಗಿದ್ದರೆ, ಇತ್ತ ಅತ್ತಿಗೆ ಜೊತೆ ಸದಾ ಸ್ಪರ್ಧೆಯಲ್ಲಿದ್ದ ಶ್ವೇತಾ ಬಚ್ಚನ್ ಇದೇ ಕಾರಣಕ್ಕೆ ತನ್ನಣ್ಣನ ಮಾಜಿ ಗೆಳತಿಯ ಜೊತೆ ಒಡನಾಟ ಹೆಚ್ಚಿಸಿಕೊಳ್ಳಲು ಬಯಸಿದ್ದರು ಎಂದು ವರದಿಯಾಗಿತ್ತು
ಕೆಲ ವರದಿಗಳ ಪ್ರಕಾರ ಶ್ವೇತಾ ಬಚ್ಚನ್ ಗಂಡನ ಮನೆಗಿಂತ ಹೆಚ್ಚು ಕಾಲ ತನ್ನ ತವರು ಮನೆಯಲ್ಲಿರುವುದೇ ಐಶ್ವರ್ಯಾ ಹಾಗೂ ಅಭಿಷೇಕ್ ನಡುವೆ ಬಿರುಕು ಹೆಚ್ಚಲು ಕಾರಣ ಎಂದು ಈ ಹಿಂದೆ ವರದಿಗಳಾಗಿದ್ದವು. ಇನ್ನು ಕರೀಷ್ಮಾ ಜೊತೆಗಿನ ಅಭಿಷೇಕ್ ಸಂಬಂಧದ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಕರೀಷ್ಮಾ ಜೊತೆಗಿನ ವಿವಾಹ ನಿಶ್ಚಿತಾರ್ಥ ಮುರಿದುಕೊಂಡು ಅಭಿಷೇಕ ಐಶ್ವರ್ಯ ಜೊತೆ ಹಸೆಮಣೆ ಏರಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.