1 ಜಮೀರ್ ಕೈಯಲ್ಲಿ ಕಂತೆ ಕಂತೆ ಹಣ: ಇಷ್ಟೊಂದು ಹಣ ಯಾಕಣ್ಣ?

ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಚೀಲದಲ್ಲಿ ಹಣ ಹಂಚುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಬರೋಬ್ಬರಿ 20 ಲಕ್ಷ ರೂಪಾಯಿ ತುಂಬಿ ಕೊಂಡು ಬಂದ ಜಮೀರ್, ದುಡ್ಡು ಹಂಚುತ್ತಿರುವ ದೃಶ್ಯ ಇದೀಗ ಭಾರಿ ಸದ್ದು ಮಾಡುತ್ತಿದೆ. ಜಮೀರ್ ದುಡ್ಡು ಹಂಚಿದ್ದು ಯಾರಿಗೆ? ಇಷ್ಟೊಂದು ದುಡ್ಡ ಎಲ್ಲಿಂದ ಬಂತು ಅನ್ನೋ ಪ್ರಶ್ನೆಗಳೂ ಮೂಡಿದೆ.


2 ಭಾರತೀಯರ ಸ್ವಿಸ್‌ ಬ್ಯಾಂಕ್‌ ಖಾತೆ ರಹಸ್ಯ ಬಯಲು!

ಕಪ್ಪುಹಣದ ವಿರುದ್ಧ ಭಾರತ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಭಾನುವಾರದಿಂದ ಇನ್ನಷ್ಟುಬಲ ಸಿಗಲಿದೆ. ಕಾರಣ, ತೆರಿಗೆ ವಂಚಕರ ಸ್ವರ್ಗವೆಂದೇ ಬಣ್ಣಿತ ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಎಲ್ಲಾ ಬ್ಯಾಂಕ್‌ ಖಾತೆಗಳ ಮಾಹಿತಿ ಭಾನುವಾರದಿಂದ ಭಾರತದ ತೆರಿಗೆ ಅಧಿಕಾರಿಗಳಿಗೆ ಲಭ್ಯವಾಗಲಿದೆ.


3 ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ಮತ್ತೊಂದು ಎಲೆಕ್ಷನ್ : ಭವಿಷ್ಯ!

ಶೀಘ್ರ ರಾಜ್ಯದಲ್ಲಿ ಮತ್ತೊಂದು ಚುನಾವಣೆ ಬರಲಿದೆ. ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್‌ಗೆ ಹೊಸ ಹುರುಪು ನೀಡಿದರೆ, ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.


4 ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರು: ಯಾರಿಗೆ ಯಾವ ಸೂರು?

ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶ ಮಹಾರಾಷ್ಟ್ರ ರಾಜಸ್ಥಾನ ಸೇರದಿಂತೆ ಒಟ್ಟು 5 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. 5 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.


5 'ಹುಚ್ಚ' ವೆಂಕಟ್‌ಗೆ ನಾನು ಮಾಡಿದ ದೊಡ್ಡ ಉಪಕಾರವಿದು: ಪ್ರಥಮ್

ಚೆನೈ ರಸ್ತೆ ಬೀದಿಯಲ್ಲಿ ಅಲೆದಾಡುತ್ತಾ, ಮಡಿಕೇರಿಯಲ್ಲಿ ಕಾರಿನ ಗ್ಲಾಸ್ ಒಡೆದು ಹಾಕುತ್ತಾ ಹುಚ್ಚಾಟ ಮಾಡುತ್ತಿರುವ ಕನ್ನಡ ಚಿತ್ರರಂಗದ ನಿರ್ದೇಶಕ, ನಟ ವೆಂಕಟ್‌ ಬಗ್ಗೆ ಬಿಗ್‌ ಬಾಸ್ ಪ್ರಥಮ್ ಬರೆದಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

6 'ಪರಿಮಳ ಲಾಡ್ಜ್'ನಲ್ಲಿ ಸಿಕ್ತು ದರ್ಶನ್ ತಂದೆಯ ಫೋಟೋ!

'ಪರಿಮಳ ಲಾಡ್ಜ್‌' ಹೆಸರು ಕೇಳುತ್ತಿದ್ದಂತೆ ಗೊಂದಲ ಶುರುವಾಗುವುದು ಗ್ಯಾರಂಟಿ. ದರ್ಶನ್‌ ತಂದೆಗೂ, ಈ ಲಾಡ್ಜ್ ಗೂ ಏನ್ ಸಂಬಂಧ? ಪೋಟೋ ಯಾಕೆ ಅಲ್ಲಿ ಸಿಗುತ್ತೆ ಅಂತ ಕನ್ಫ್ಯೂಸ್ ಆಗಬೇಡಿ. ಈ ಸುದ್ದಿ ನಿಮ್ಮ ಗೊಂದಲಗಳಿಗೆ ಉತ್ತರ ನೀಡಲಿದೆ. 

7 ಸುಳ್ಳು ಮಾಹಿತಿ ನೀಡಿ ಪಡೆದ BPL ಕಾರ್ಡ್‌ ಹಿಂದಿರುಗಿಸದಿದ್ದಲ್ಲಿ ಕೇಸ್

ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡಿರುವ ಸದೃಢರು ಸೆ.30ರೊಳಗೆ ಬಿಪಿಎಲ್‌ ಕಾರ್ಡ್‌ ಅನ್ನು ಹಿಂದಿರುಗಿಸುವಂತೆ ಆಹಾರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ. 


8 ವಿನಯ್ ಕುಮಾರ್ ಬಳಿಕ ಮತ್ತೊರ್ವ ಕ್ರಿಕೆಟಿಗ ಕರ್ನಾಟಕಕ್ಕೆ ಗುಡ್‌ಬೈ!

ಕರ್ನಾಟಕ ತಂಡದಿಂದ ಹಿರಿಯ ಕ್ರಿಕೆಟಿಗರು ವಲಸೆ ಹೋಗುತ್ತಿರುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಕರ್ನಾಟಕವನ್ನು ಚಾಂಪಿಯನ್ ತಂಡವನ್ನಾಡಿ ಮಾಡಿದ ನಾಯಕ ವಿನಯ್ ಕುಮಾರ್, ತವರಿಗೆ ಗುಡ್‌ಬೈ ಹೇಳಿ ಪುದುಚೇರಿ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊರ್ವ ಕ್ರಿಕೆಟಿಗ ಕರ್ನಾಟಕಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.

 

9 ಜಾವಗಲ್ ಶ್ರೀನಾಥ್ ಹುಟ್ಟುಹಬ್ಬ: ಆ ದಿನಗಳನ್ನು ನೆನಪಿಸಿಕೊಂಡ ಸಚಿನ್

ಟೀಂ ಇಂಡಿಯಾದ ಕಂಡ ಅತ್ಯಂತ ಯಶಸ್ವಿ ಬೌಲರ್, ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಕನ್ನಡಿಗ ಜಾವಗಲ್ ಶ್ರೀನಾಥ್ ಶನಿವಾರ 50ನೇ ವಸಂತಕ್ಕೆ ಕಾಲಿರಿಸಿದ್ದಾರೆ. 1969ರಲ್ಲಿ ಜನಿಸಿದ ಶ್ರೀನಾಥ್, 1991ರಿಂದ 2003ರ ವರೆಗೆ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಶ್ರೀನಾಥ್ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ವಿನೂತನವಾಗಿ ಶುಭಕೋರಿದ್ದಾರೆ.


10 ರಾಜ್ಯದಲ್ಲಿ ಕೆಲ ದಿನ ಹೊಸ ಟ್ರಾಫಿಕ್ಸ್‌ ರೂಲ್ಸ್ ಅನ್ವಯಿಸಲ್ಲ!

ಕೇಂದ್ರ ಸರ್ಕಾರ, ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದು, ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಹೊಸ ನಿಯಮ ಜಾರಿಗೆ ತಂದಿದ್ದು, ಇಂದಿನಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ. ಆದ್ರೆ ಈ ಹೊಸ ನಿಯಮ ರಾಜ್ಯದಲ್ಲಿ ಕೆಲ ದಿನ ಅನ್ವಯಿಸುವುದಿಲ್ಲ.