ಶೀಘ್ರ ರಾಜ್ಯದಲ್ಲಿ ಮತ್ತೊಂದು ಚುನಾವಣೆ ಬರಲಿದೆ. ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಮೈಸೂರು [ಸೆ.01] : ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಮತ್ತೊಂದು ಚುನಾವಣೆ ಬರಲಿದೆ ಸಿದ್ಧರಾಗಿ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಸಿದ್ಧರಾಮಯ್ಯ ನಾವೆಲ್ಲರೂ ಉಪ ಚುನಾವಣೆಗೆ ಸಿದ್ಧರಾಗಿದ್ದೇವೆ. ಇದರ ಜೊತೆಗೆ ಮಧ್ಯಂತರ ಚುನಾವಣೆಗೆ ತಯಾರಾಗಿ ಎಂದು ಕಾರ್ಯರ್ತರಿಗೆ ಹೇಳಿದ್ದೇನೆ ಎಂದು ಸಿದ್ಧರಾಮಯ್ಯ ಹೇಳಿದರು. 

ನಿನ್ನೆ ದಕ್ಷಿಣ ಕನ್ನಡಕ್ಕೂ ಹೋಗಿದ್ದೆ. ಆಗ ನಮ್ಮ ಕಾರ್ಯಕರ್ತರಿಗೆ ಡಿಸೆಂಬರ್‌ಗೆ ಜನರಲ್ ಎಲೆಕ್ಷನ್ ಬರಬಹುದು ರೆಡಿಯಾಗಿ ಎಂದು ಹೇಳಿದ್ದೇನೆ. ಯಾಕೆಂದರೆ ಈ ಸರ್ಕಾರ ನೋಡಿದರೆ ಇವರು ಸೂಕ್ತವಾಗಿ ಅಧಿಕಾರ ನಡೆಸಿಕೊಂಡು ಹೋಗುತ್ತಾರೆ ಎನಿಸುತ್ತಿಲ್ಲ. ಆದ್ದರಿಂದ ಡಿಸೆಂಬರ್‌ಗೆ ಜನರಲ್ ಎಲೆಕ್ಷನ್ ಬರತ್ತೆ ರೆಡಿ ಆಗಿ ಎಂದಿದ್ದೇನೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶನಿವಾರವಷ್ಟೇ ದಕ್ಷಿಣ ಕನ್ನಡಕ್ಕೆ ತೆರಳಿದ್ದ ವೇಳೆಯೂ ರಾಜ್ಯದಲ್ಲಿ ಶೀಘ್ರ ಚುನಾವಣೆ ಬರಲಿದೆ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಚುನಾವಣೆಗೆ ಬಗ್ಗೆ ಮಾತನಾಡಿದ್ದಾರೆ.