ಚೆನೈ ರಸ್ತೆ ಬೀದಿಯಲ್ಲಿ ಅಲೆದಾಡುತ್ತಾ, ಮಡಿಕೇರಿಯಲ್ಲಿ ಕಾರಿನ ಗ್ಲಾಸ್ ಒಡೆದು ಹಾಕುತ್ತಾ ಹುಚ್ಚಾಟ ಮಾಡುತ್ತಿರುವ ಕನ್ನಡ ಚಿತ್ರರಂಗದ ನಿರ್ದೇಶಕ, ನಟ ವೆಂಕಟ್‌ ಬಗ್ಗೆ ಬಿಗ್‌ ಬಾಸ್ ಪ್ರಥಮ್ ಬರೆದಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೆಂಕಟರಾಮ್ ಲಕ್ಷ್ಮಣ್ ಅಲಿಯಾಸ್ ಹುಚ್ಚ ವೆಂಕಟ್‌ ಸ್ಯಾಂಡಲ್‌ವುಡ್ ನಿರ್ದೇಶಕ ನಿರ್ಮಾಪಕ, ನಟ ಹಾಗೂ ಗಾಯಕ. ತನ್ನದೇ ಸೇನೆಯೊಂದನ್ನು ನಿರ್ಮಾಣ ಮಾಡಿ ಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡಿದ್ದಾರೆ.

ವೆಂಕಟ್‌ ಅವರನ್ನು ತುಂಬಾ ಹತ್ತಿರದಿಂದ ನೋಡಿದವರು ಬಿಗ್‌ ಬಾಸ್ ಭುವನ್ ಹಾಗೂ ಒಳ್ಳೆ ಹುಡುಗ ಪ್ರಥಮ್. ವೆಂಕಟ್‌ ಗೆ ಸಹಾಯ ಮಾಡಬೇಕೆಂದು ಪ್ರಥಮ್‌ಗೆ ಸ್ನೇಹಿತರೊಬ್ಬರು ಕರೆ ಮಾಡಿದ ಸಂಗತಿಯನ್ನು ಪತ್ರದ ರೀತಿಯಲ್ಲಿ ಬರೆದುಕೊಂಡು ಸಾಮಾಜಿಕ ಸಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಿಲ್ಲದ ವೆಂಕಟ್ ಹುಚ್ಚಾಟ.. ಅಣ್ಣಾ ಎಂದು ಬಂದವನ ಮೇಲೆಯೂ ಹಲ್ಲೆ..! ವಿಡಿಯೋ

'ನಿನ್ನೆ ರಾತ್ರಿ ನನ್ನ ಗೆಳೆತಿಯೊಬ್ಬರು ಮೆಸೇಜ್ ಮಾಡಿ 'ಪ್ರಥಮ್ ಹಚ್ಚ ವೆಂಕಟ್‌ಗೆ ಹೆಲ್ಪ್ ಮಾಡಿ ಪಾಪ ಅಂದ್ರು. ತಕ್ಷಣ ನಾನು ಹೇಳಿದೆ ಇಷ್ಟೇನಾ? ಹೌದು ವೆಂಕಟ್‌ರಿಗೆ ಹೆಲ್ಪ್ ಮಾಡ್ತೀನಿ. ಆಗಲೇ ಮಾಡಿದ್ದೀನಿ ಅಂದೆ. ಯಾವಾಗ ಮಾಡಿದ್ರಿ ಹೆಲ್ಪ್ ಅಂದ್ರು. ನಾನು ಅವರನ್ನು ವೆಂಕಟ್ ಅಂತ ಕರೆಯೋದೆ ಅವ್ರಿಗೆ ಮಾಡೋ ಸಹಾಯ. ಅವ್ರನ್ನ ಹುಚ್ಚ ವೆಂಕಟ್ ಅಂತ ಪ್ರಚೋದಿಸುವ ಬದಲು ವೆಂಕಟ್ ಆಗಿ ಬಿಟ್ಟು ಬಿಡೋದೆ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ ಎಂದರು.

View post on Instagram

ನಾನು ಇನ್ಮೇಲೆ ಅವ್ರನ್ನ ವೆಂಕಟ್ ಆಗಿಯೇ ನೋಡ್ತೀನಿ. ನಾವೆಲ್ಲರೂ ಅವರನ್ನ ವೆಂಕಟ್ ಆಗಿಯೇ ನೋಡೋಣ. ವೆಂಕಟ್‌ರಿಗೆ ಅನುಕಂಪ ತೋರಿಸೋ ಬದಲು ಅವಮಾನ ಮಾಡದೇ ಅವ್ರನ್ನ ಅವರಷ್ಟಕ್ಕೆ ಬಿಡೋಣ. ಇದೆ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ' ಎಂದು ಪತ್ರದಲ್ಲಿ ಸಾರ್ವಜನಿಕರಿಗೆ ವಿನಂತಿ ಮಾಡಿಕೊಂಡಿದ್ದಾರೆ.

ಹುಚ್ಚ ವೆಂಕಟ್ ಎಲ್ಲಿ ಕಂಡರೂ ಹೊಡಿಬೇಡಿ; ಸಾರ್ವಜನಿಕರಲ್ಲಿ ಭುವನ್ ಮನವಿ

ಕೆಲವರಿಗೆ ಅವರಿಗೇಕೆ ಹುಚ್ಚ ಹೆಸರು ಬಂತು ಅನ್ನುವ ಡೌಟ್‌ ಇನ್ನು ಕ್ಲಿಯರ್ ಆಗಿಲ್ಲ! ಕಾರಣ ಇಷ್ಟೇ. ಅವರು ಮಾಡಿರುವ ಸಿನಿಮಾಗಳ ಹೆಸರು ಪೊರ್ಕಿ ಹುಚ್ಚ ವೆಂಕಟ್, ತಿಕ್ಲ ಹುಚ್ಚ ವೆಂಕಟ್, ಆ ನಂತರ ದುರಹಂಕಾರಿ ಹುಚ್ಚ ವೆಂಕಟ್‌ ಅಂತ ಹೆಸರು ಇಟ್ಟಿರುವುದೇ ಅವರಿಗೂ ಆ ಹೆಸರು ಬರಲು ಕಾರಣವಾಗಿದೆ.