ರಾಜ್ಯದಲ್ಲಿ ಕೆಲ ದಿನ ಹೊಸ ಟ್ರಾಫಿಕ್ಸ್ ರೂಲ್ಸ್ ಅನ್ವಯಿಸಲ್ಲ: ಹೊಡೀರಿ ಹಲಗಿ
ಕೇಂದ್ರ ಸರ್ಕಾರ, ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದು, ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಹೊಸ ನಿಯಮ ಜಾರಿಗೆ ತಂದಿದ್ದು, ಇಂದಿನಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ. ಆದ್ರೆ ಈ ಹೊಸ ನಿಯಮ ರಾಜ್ಯದಲ್ಲಿ ಕೆಲ ದಿನ ಅನ್ವಯಿಸುವುದಿಲ್ಲ. ಯಾಕಂತೀರಾ? ಮುಂದಿದೆ ಓದಿ
ಬೆಂಗಳೂರು, (ಸೆ.01): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರ್ ಕಾಯ್ದೆ ಹೊಸ ರೂಲ್ಸ್ ಇಂದಿನಿಂದ (ಸೆಪ್ಟೆಂಬರ್ 01)ರಿಂದ ಜಾರಿಗೆ ಬಂದಿದೆ. ಆದ್ರೆ ಕರ್ನಾಟಕದಲ್ಲಿ ಇನ್ನು ಮೂರು ದಿನ ಟ್ರಾಫಿಕ್ ಪೊಲೀಸರಿಗೆ ದುಬಾರಿ ದಂಡ ಕಟ್ಟುವ ತಲೆನೋವಿಲ್ಲ.
ಮೋಟಾರು ಕಾಯ್ದೆ ಅಧಿಸೂಚನೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಇನ್ನೂ ತಲುಪಿಲ್ಲದ ಕಾರಣ ಮುಂದಿನ ಮೂರು ದಿನ ನಿಯಮ ಉಲ್ಲಂಘಿಸುವವರಿಗೆ ಸದ್ಯಕ್ಕೆ ಹೊಸ ದಂಡ ವಿಧಿಸದಿರಲು ತೀರ್ಮಾನಿಸಲಾಗಿದೆ.
ಇಂದಿನಿಂದ ಕುಡಿದು ವಾಹನ ಓಡಿಸಿದರೆ 10000 ರು.ದಂಡ
ಆದೇಶ ಬಂದ ಬಳಿಕವೂ ಹೊಸ ದಂಡದ ಮೊತ್ತವನ್ನು ಅಳವಡಿಸಿಕೊಳ್ಳಬೇಕಾದ ಕಾರಣ ಹೊಸ ದಂಡದ ನಿಯಮ ಜಾರಿಗೊಳ್ಳಲು ಸ್ವಲ್ಪ ಕಾಲ ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ಹೀಗಾಗಿ ಸದ್ಯಕ್ಕೆ ಹಳೆ ಟ್ರಾಫಿಕ್ಸ್ ನಿಯಮವನ್ನೇ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕೆಲ ಕಾಲದ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ.
ಹೊಸ ರೂಲ್ಸ್ ಪ್ರಕಾರ ದಂಡದ ವಿವರ
ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ ಕುಡಿದು ವಾಹನ ಚಲಾಯಿಸುವವರಿಗೆ 10 ಸಾವಿರ ರು. ದಂಡ ವಿಧಿಸಲಾಗುತ್ತದೆ. ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಿದರೆ 5 ಸಾವಿರ ರು, ಲೈಸೆನ್ಸ್ ಇಲ್ಲದೆ ಗಾಡಿ ಓಡಿಸಿದರೆ 5 ಸಾವಿರ ರು, ಕಾರಿನಲ್ಲಿ ಸೀಟ್ ಬೆಲ್ಟ್ ಅಥವಾ ಬೈಕ್ನಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದರೆ 1 ಸಾವಿರ ರು. ದಂಡ ನಿಗದಿಪಡಿಸಲಾಗಿದೆ.