ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರಿಗೆ ಅವಕಾಶ, ಟ್ವಿಟರ್‌ಗೆ ಕೋರ್ಟ್ ಸಂಕಷ್ಟ; ಜು.6ರ ಟಾಪ್ 10 ಸುದ್ದಿ!
ಇದೇ ಮೊದಲ ಬಾರಿ ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರು, ಮುಸಲ್ಮಾನರಿಗೆ ಅವಕಾಶ ನೀಡಲಾಗಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಟ್ವಿಟರ್‌ಗೆ ಹಿನ್ನಡೆಯಾಗಿದೆ. ನಿಯಮ ಪಾಲಿಸಲು ಕೋರ್ಟ್ ವಾರ್ನಿಂಗ್ ನೀಡಿದೆ. ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ಇಲ್ಲವೇ ಈ ವಾರದ ಒಳಗಾಗಿ ನಡೆಯುವ ಸಾಧ್ಯತೆ ಇದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ 7 ಮಂದಿಗೆ ಪಾಸಿಟಿವ್, ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಪ್ರಕಟಿಸಿದ ಸಿದ್ದರಾಮಯ್ಯ ಸೇರಿದಂತೆ ಜುಲೈ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೇಂದ್ರದ ವಿರುದ್ಧ ಸಮರ ಸಾರಿದ್ದ ಟ್ವಿಟರ್‌ಗೆ ಹಿನ್ನಡೆ; ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಎಂದ ಕೋರ್ಟ್!...
ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಜಟಾಪಟಿ ಹೈಕೋರ್ಟ್ ಮೆಟ್ಟಿಲೇರಿ ಹಲವು ದಿನಗಳೇ ಉರುಳಿದೆ. ಕೇಂದ್ರಕ್ಕೆ ಸೆಡ್ಡು ಹೊಡೆದಿದ್ದ ಟ್ವಿಟರ್‌ಗೆ ಇದೀಗ ಹೈಕೋರ್ಟ್ ಚಾಟಿ ಬೀಸಿದೆ. ಟ್ವಿಟರ್ ನಡೆ ಭಾರತದ ಕಾನೂನನ್ನು ಧಿಕ್ಕರಿಸಿದಂತೆ ತೋರುತ್ತಿದೆ. ನಿಯಮ ಪಾಲಿಸಲು ಟ್ವಿಟರ್ ತನಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಇದೇ ಮೊದಲ ಬಾರಿ ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರು, ಮುಸಲ್ಮಾನರಿಗೆ ಅವಕಾಶ!...
ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಹಾಗೂ ವಿಶೇಷ ವಿಚಾರವೆನ್ನಬಹುದೇನೋ, ಯಾಕೆಂದರೆ ಈಗ ರಾಜ್ಯಪಾಲರ ನೇಮಕದಲ್ಲಿ ಪ್ರತಿ ಸಮುದಾಯ ಅಂದರೆ SC/ST, OBC ಹೊರತುಪಡಿಸಿ ಮಹಿಳೆಯರು ಹಾಗೂ ಮುಸ್ಲಿಂ ಸಮುದಾಯದವರಿಗೂ ಸಮಾನಾದ ಅವಕಾಶ ಸಿಗುತ್ತಿದೆ.
ರಷ್ಯಾದ 29 ಪ್ರಯಾಣಿಕರಿದ್ದ ವಿಮಾನ ಏಕಾಏಕಿ ಕಣ್ಮರೆ!...
ಸಿಬ್ಬಂದಿ ಸೇರಿ 28 ಮಂದಿ ಪ್ರಯಾಣಿಸುತ್ತಿದ್ದ ರಷ್ಯಾದ ಎಎನ್-26 ವಿಮಾನ ನಾಪತ್ತೆಯಾಗಿದೆ. ರಷ್ಯಾದ ಪೂರ್ವಭಾಗದಿಂದ ಮಂಗಳವಾರ ಈ ವಿಮಾನ ಕಣ್ಮರೆಯಾಗಿರುವುದಾಗಿ ಇಲ್ಲಿನ ತುರ್ತು ಸಚಿವಾಲಯ ಮಾಹಿತಿ ನೀಡಿದೆ.
ನಾಳೆ ಕೇಂದ್ರ ಸಂಪುಟ ವಿಸ್ತರಣೆ? ಹೊಸಮುಖ, ಟೆಕ್ನೋಕ್ರಾಟ್‌ಗಳಿಗೆ ಸ್ಥಾನ?...
ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ಇಲ್ಲವೇ ಈ ವಾರದ ಒಳಗಾಗಿ ನಡೆಯುವ ಸಾಧ್ಯತೆ ಇದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ 52 ಮಂದಿ ಸದಸ್ಯರಿದ್ದಾರೆ. ಗರಿಷ್ಠ 81 ಮಂದಿ ಸಚಿವರನ್ನು ಹೊಂದುವುದಕ್ಕೆ ಅವಕಾಶ ಇದೆ. ಆಡಳಿತದ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಿಂದ 20ರಿಂದ 22 ಸದಸ್ಯರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಕರ್ನಾಟಕಕ್ಕೂ ಒಂದರಿಂದ ಎರಡು ಸ್ಥಾನ ಲಭ್ಯವಾಗುವ ನಿರೀಕ್ಷೆ ಇದೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ 7 ಮಂದಿಗೆ ಕೋವಿಡ್ ಪಾಸಿಟಿವ್...
ಪಾಕಿಸ್ತಾನ ವಿರುದ್ದದ ಸರಣಿಗೆ ಸಜ್ಜಾಗುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಪಾಳಯದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಮೂವರು ಆಟಗಾರರು ಹಾಗೂ ನಾಲ್ವರು ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಭಿನ್ನ ಮತಗಳ ಮದುವೆಯಲ್ಲಿ ಮಕ್ಕಳು ಮುಸ್ಲಿಂಗಳಾಗೋದ್ಯಾಕೆ ? ಕಂಗನಾ ಪ್ರಶ್ನೆ...
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನೆ ಬಗ್ಗೆ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಶೇರ್ ಮಾಡಿದ ನಟಿ ಅಂತರ್ ಧರ್ಮ ವಿವಾಹದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಒಂದು ಸಮಯದಲ್ಲಿ ಪಂಜಾಬ್‌ನಲ್ಲಿ ಒಂದು ಮಗುವನ್ನು ಹಿಂದು ಇನ್ನೊಂದು ಮಗುವನ್ನು ಸಿಖ್ಖ್ ಆಗಿ ಬೆಳೆಸುತ್ತಿದ್ದರು.
ಮತ್ತೊಂದು ಇವಿ ದ್ವಿಚಕ್ರವಾಹನ ಲಾಂಚ್; ಗ್ರಾವ್ಟನ್ ಕ್ವಾಂಟಾ ಬೆಲೆ 99,000 ರೂ....
ಹಲವು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಈ ಸಾಲಿಗೆ ಹೈದ್ರಾಬಾದ್ ಮೂಲದ ಗ್ರಾವ್ಟನ್ ಕಂಪನಿಯ ಕ್ವಾಂಟಾ ಇವಿ ದ್ವಿಚಕ್ರವಾಹನ ಹೊಸದಾಗಿ ಸೇರಿದೆ. ಈ ಬೈಕ್‌ಗೆ ಬೇಕಾಗುವ ಬಹುತೇಕ ಬಿಡಿ ಭಾಗಗಳನ್ನು ಭಾರತದಲ್ಲೇ ವಿನ್ಯಾಸ ಮಾಡಿದವುಗಳನ್ನು ಬಳಸಿಕೊಳ್ಳಲಾಗಿದೆ.
ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಪ್ರಕಟಿಸಿದ ಸಿದ್ದರಾಮಯ್ಯ...
ಮುಂದಿನ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೇ ಮಾಡುತ್ತಾರೆ ಎನ್ನುವ ಗೊಂದಲಕ್ಕೆ ತೆರೆಬಿದ್ದಿದೆ.
6 ವರ್ಷದ ಬಾಲಕಿಯ 3 ವರ್ಷ ರೇಪ್ ಮಾಡಿ ಕೊಂದ CPI(M) ಕಾರ್ಯಕರ್ತ...
6 ವರ್ಷದ ಬಾಲಕಿಯನ್ನು ಮೂರು ವರ್ಷಗಳಿಂದ ರೇಪ್ ಮಾಡುತ್ತಿದ್ದ ಸಿಪಿಐ(ಎಂ) ಯುವ ಘಟಕದ ಕಾರ್ಯಕರ್ತನನ್ನು ಕೇರಳದಲ್ಲಿ ಬಂಧಿಸಲಾಗಿದೆ. ಮೂರು ವರ್ಷ ಅತ್ಯಾಚಾರ ಮಾಡಿ ನೇಣು ಹಾಕಿ ಕೊಲೆ ಮಾಡಿದ ಆರೋಪದ ಹಿನ್ನೆಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.