ಕೇಂದ್ರದ ವಿರುದ್ಧ ಸಮರ ಸಾರಿದ್ದ ಟ್ವಿಟರ್‌ಗೆ ಹಿನ್ನಡೆ; ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಎಂದ ಕೋರ್ಟ್!

  • ನೂತನ ಐಟಿ ನಿಯಮ ಪಾಲಿಸಲು ಹಿಂದೇಟು ಹಾಕಿದ್ದ ಟ್ವಿಟರ್‌ಗೆ ಸಂಕಷ್ಟ
  • ಹೈಕೋರ್ಟ್ ಮೆಟ್ಟಿಲೇರಿದ್ದ ಟ್ವಿಟರ್‌ಗೆ ಎಚ್ಚರಿಕೆ ನೀಡಿದ ಕೋರ್ಟ್
  • ಭಾರತ ನಿಯಮ ಪಾಲಿಸಿ, ಇಲ್ಲ ಕಠಿಣ ಕ್ರಮ ಎದುರಿಸಿ, ಕೋರ್ಟ್ ಎಚ್ಚರಿಕೆ
Either comply with Indian law and file a convincing reply or face trouble High court tells twitter ckm

ನವದೆಹಲಿ(ಜು.06): ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಜಟಾಪಟಿ ಹೈಕೋರ್ಟ್ ಮೆಟ್ಟಿಲೇರಿ ಹಲವು ದಿನಗಳೇ ಉರುಳಿದೆ. ಕೇಂದ್ರಕ್ಕೆ ಸೆಡ್ಡು ಹೊಡೆದಿದ್ದ ಟ್ವಿಟರ್‌ಗೆ ಇದೀಗ ಹೈಕೋರ್ಟ್ ಚಾಟಿ ಬೀಸಿದೆ. ಟ್ವಿಟರ್ ನಡೆ ಭಾರತದ ಕಾನೂನನ್ನು ಧಿಕ್ಕರಿಸಿದಂತೆ ತೋರುತ್ತಿದೆ. ನಿಯಮ ಪಾಲಿಸಲು ಟ್ವಿಟರ್ ತನಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್ ಮೇಲೆ 4ನೇ ಕೇಸ್ ದಾಖಲು; ಈ ಬಾರಿ ಸಂಕಷ್ಟ ಡಬಲ್!..

ರೇಖಾ ಪಲ್ಲಿ ನೇತೃತ್ವದ ಏಕ ಸದಸ್ಯ ಪೀಠ ಟ್ವಿಟರ್ ಕುರಿತು ಅರ್ಜಿ ವಿಚಾರಣೆ ನಡೆಸಿ ಈ ಮಹತ್ವದ ಸೂಚನೆ ನೀಡಿದೆ.  ನೂತನ ಐಟಿ ನಿಯಮ ಪಾಲನೆ ಹಾಗೂ ಕುಂದುಕೊರತೆ ಅಧಿಕಾರಿ ನೇಮಕ ಕುರಿತು ಟ್ವಿಟರ್ ನಿಲುವನ್ನು ಸ್ಪಷ್ಟಪಡಿಸುವಂತೆ ಕೋರ್ಟ್ ಸೂಚಿಸಿದೆ.

ಟ್ವಿಟರ್ ಸಲ್ಲಿಸಿದ ಅಫಿಡವಿತ್‌ನಲ್ಲಿ ಕುಂದುಕೊರತೆ ಅಧಿಕಾರಿ ನೇಮಕ ಮಾಡಲಿದೆ ಅನ್ನೋ ಕುರಿತು ಯಾವುದೇ ಸ್ಪಷ್ಟತೆ ನೀಡಿಲ್ಲ ಎಂದು ನ್ಯಾಪೀಠ ಹೇಳಿದೆ. ಈ ವಿಚಾರ ಕುರಿತು ಕೋರ್ಟ್, ಮಧ್ಯಂತರ ಕುಂದು ಕೊರತೆ ಅಧಿಕಾರಿ ಧರ್ಮೇಂದ್ರ ಚತುರ್ ರಾಜೀನಾಮೆ ನೀಡಿ 15 ದಿನ ಕಳೆದಿದೆ. ಇನ್ನೂ ಕೂಡ ಅಧಿಕಾರಿ ನೇಮಕವಾಗಿಲ್ಲ. ಓರ್ವ ಅಧಿಕಾರಿ ನೇಮಕ ಮಾಡಲು ಎಷ್ಟು ಸಮಯ ಬೇಕು ಎಂದು ಕೋರ್ಟ್ ಪ್ರಶ್ನಿಸಿದೆ. 

ಭಾರತೀಯರ ಕೆರಳಿಸಿದ ಟ್ವಿಟರ್; ಇಂಡಿಯಾ ಮ್ಯಾಪ್‌ನಿಂದ ಜಮ್ಮು ಕಾಶ್ಮೀರ, ಲಡಾಖ್ ಮಾಯ!

ಈ ಮೊದಲು ಟ್ವಿಟರ್ ಮಧ್ಯಂತರ ಕುಂದು ಕೊರತೆ ಅಧಿಕಾರಿ ಎಂದು ಹೇಳದೆ ಕೋರ್ಟ್ ದಾರಿ ತಪ್ಪಿಸುವ ಯತ್ನ ಮಾಡಿದೆ. ತಕ್ಷಣವೇ ಟ್ವಿಟರ್ ಕೇಂದ್ರ ಕಚೇರಿಯ ಕಾನೂನು ತಂಡದಿಂದ ಪ್ರತಿಕ್ರಿಯೆ ನೀಡುವಂತೆ ಕೋರ್ಟ್ ಸೂಚಿಸಿತ್ತು. ಈ ವೇಳೆ ಟ್ವಿಟರ್ ಕೇಂದ್ರ ಕಚೇರಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದೆ. ಈಗ ಮಧ್ಯರಾತ್ರಿ ಆಗಿರುವುದರಿಂದ ವಿಚಾರಣೆ ಮುಂದೂಡುವಂತೆ ಟ್ವಿಟರ್ ಮನವಿ ಮಾಡಿತ್ತು. ಇದಕ್ಕೆ ಸಮ್ಮತಿಸಿದ ಕೋರ್ಟ್ ಜುಲೈ 8 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಆದರೆ ಆ ವೇಳೆಗೆ ಟ್ವಿಟರ್ ಭಾರತದ ಕಾನೂನನ್ನು ಪಾಲಿಸಬೇಕು ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 

ಟ್ವಿಟರ್ ಇಂಡಿಯಾ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹಾಜರಾಗಿದ್ದರು. ಟ್ವಿಟರ್ ಕುಂದು ಕೊರತೆ ಅಧಿಕಾರಿ ನೇಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನು ಅರ್ಜಿದಾರರು ಸಮಸ್ಯೆಗಳನ್ನು ಸಮಯಕ್ಕೆ ತಕ್ಕಂತೆ ಪರಿಹರಿಸಲಾಗಿದೆ ಎಂದು ಪೂವಯ್ಯ ಕೋರ್ಟ್‌ಗೆ ಹೇಳಿದರು. ಆದರೆ ಟ್ವಿಟರ್ ಹೇಳಿಕೆಗೂ ಸಲ್ಲಿಸಿದ ಅಫಿದವಿತ್‌ನಲ್ಲಿನ ಅಂಶಗಳಿಗೂ ವ್ಯತ್ಯಾಸ ಕಾಣುತ್ತಿದೆ ಎಂದು ಕೋರ್ಟ್ ತಿರುಗೇಟು ನೀಡಿದೆ.

Latest Videos
Follow Us:
Download App:
  • android
  • ios