Asianet Suvarna News Asianet Suvarna News

ಇದೇ ಮೊದಲ ಬಾರಿ ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರು, ಮುಸಲ್ಮಾನರಿಗೆ ಅವಕಾಶ!

* ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರ ಬೆಳವಣಿಗೆ

* ರಾಜ್ಯಪಾಲರ ನೇಮಕದಲ್ಲಿ SC/ST, OBC ಹೊರತುಪಡಿಸಿ ಮಹಿಳೆಯರು ಹಾಗೂ ಮುಸ್ಲಿಂ ಸಮುದಾಯಕ್ಕೂ ಅವಕಾಶ

* ಯಾವ ರಾಜ್ಯಪಾಲ ಯಾವ ಸಮುದಾಯದವರು? ಇಲ್ಲಿದೆ ವಿವರ
 

Appointment Of Governors Priority Given To All Communities pod
Author
Bangalore, First Published Jul 6, 2021, 2:48 PM IST

ನವದೆಹಲಿ(ಜು.06): ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಹಾಗೂ ವಿಶೇಷ ವಿಚಾರವೆನ್ನಬಹುದೇನೋ, ಯಾಕೆಂದರೆ ಈಗ ರಾಜ್ಯಪಾಲರ ನೇಮಕದಲ್ಲಿ ಪ್ರತಿ ಸಮುದಾಯ ಅಂದರೆ SC/ST, OBC ಹೊರತುಪಡಿಸಿ ಮಹಿಳೆಯರು ಹಾಗೂ ಮುಸ್ಲಿಂ ಸಮುದಾಯದವರಿಗೂ ಸಮಾನಾದ ಅವಕಾಶ ಸಿಗುತ್ತಿದೆ. ಖುದ್ದು ರಾಷ್ಟ್ರಪತಿ ಕೋವಿಂದ್ ದಲಿತ ಸಮುದಾಯದವರಾಗಿದ್ದು, ರಾಜ್ಯಪಾಲರ ನೇಮಕದಲ್ಲೂ ಸಾಮಾಜಿಕ ಸಾಮರಸ್ಯದ ವಿಶಿಷ್ಟ ಸಂಗಮ ಕಂಡು ಬಂದಿದೆ. ಹಾಗಾದ್ರೆ ಯಾವ ರಾಜ್ಯಪಾಲ ಯಾವ ಸಮುದಾಯದವರು? ಇಲ್ಲಿದೆ ವಿವರ

ಮೋದಿ ಸರ್ಕಾರದ ಅವಧಿಯಲ್ಲಿ ರಾಜ್ಯಪಾಲರ ನೇಮಕಾತಿಯಲ್ಲಿ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ಹೊರತುಪಡಿಸಿ ಮಹಿಳೆಯರನ್ನೂ ನೇಮಿಸಲಾಗಿದೆ.

ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರು!

ಥಾವರ್‌ಚಂದ್ ಗೆಹ್ಲೋಟ್: ಬಿಜೆಪಿಯ ಓರ್ವ ಹಿರಿಯ ದಲಿತ ನಾಯಕ ಹಾಗೂ ಮಾಜಿ ಕ್ಯಾಬಿನೆಟ್ ಸಚಿವ. ಇನ್ಮುಂದೆ ಅವರು ಕರ್ನಾಟಕ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬುಡಕಟ್ಟು ಸಮುದಾಯಗಳTribal communities)  ರಾಜ್ಯಪಾಲರು: ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿರುವ ಮಂಗುಭಾಯ್ ಪಟೇಲ್, ಗುಜರಾತ್‌ನ ನಾಯಕರಾಗಿದ್ದ ಅವರು ಬುಡಕಟ್ಟು ಸಮುದಾಯಗಳ ನಾಯಕರಾಗಿಯೂ ಸೇನೆ ಸಲ್ಲಿಸಿದ್ದಾರೆ. ಇನ್ನು ಇದೇ ಸಮುದಾಯದ ನಾಯಕಿ ಅನುಸೂಯಾ ಅವರು ಛತ್ತೀಸ್‌ಗಢದ ರಾಜ್ಯಪಾಲೆಯಾಗಿದ್ದಾರೆ.

ಒಬಿಸಿಯ ರಾಜ್ಯಪಾಲರು: ರಾಜ್ಯಪಾಲ ಹುದ್ದೆಗಳಲ್ಲಿ ಒಬಿಸಿ ನಾಯಕರಿಗೆ ಸಂಪೂರ್ಣ ಗೌರವ ನೀಡಲಾಗಿದೆ. ಲೋನಿಯಾ ಸಮುದಾಯಕ್ಕೆ ಸೇರಿದ ಫಾಗು ಚೌಹಾನ್ ಬಿಹಾರದ ರಾಜ್ಯಪಾಲರಾಗಿದ್ದಾರೆ. ಇತ್ತ ರಮೇಶ್ ಬೈಸ್ ಈಗ ಜಾರ್ಖಂಡ್ ರಾಜ್ಯಪಾಲರಾಗಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಒಂದು ಅವಧಿ ಪೂರ್ಣಗೊಳಿಸಿರುವ ಬಂಡಾರು ದತ್ತಾತ್ರೇಯ ಅವರು ಹರ್ಯಾಣ ರಾಜ್ಯಪಾಲರಾಗಲಿದ್ದಾರೆ. ಗಂಗಾ ಪ್ರಸಾದ್ ಚೌರಾಸಿಯಾ ಸಿಕ್ಕಿಂನ ರಾಜ್ಯಪಾಲರಾಗಿದ್ದಾರೆ. ತಮಿಳುಸಾಯಿ ಸುಂದರರಾಜನ್ ತೆಲಂಗಾಣದಲ್ಲಿ ಪುದುಚೇರಿಯ ಹೆಚ್ಚುವರಿ ಹುದ್ದೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. 

ರಾಜ್ಯಪಾಲರ ನೇಮಕ ಬೆನ್ನಲ್ಲೇ ಸಚಿವರ ಜೊತೆಗಿನ ಪ್ರಧಾನಿ ಮೋದಿ ಸಭೆ ರದ್ದು!

ಜಾಟ್ ಸಮುದಾಯದ 3 ಗವರ್ನರ್‌ಗಳು: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಾಟ್ ಸಮುದಾಯಕ್ಕೆ ಸೇರಿದ 3 ಗವರ್ನರ್‌ಗಳ ನೇಮಕವಾಗಿದೆ. ಜಗದೀಪ್ ಧಂಕರ್ ರಾಜಕೀಯವಾಗಿ ಮಹತ್ವ ಪಡೆದುಕೊಂಡಿರುವ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಚಾರ್ಯ ದೇವವ್ರತ್ ಅವರು ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್ ರಾಜ್ಯಪಾಲರಾಗಿದ್ದಾರೆ. ಸತ್ಯ ಪಾಲ್ ಮಲಿಕ್ ಮೇಘಾಲಯ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಬ್ಬರು ಪ್ರಮುಖ ಮುಸ್ಲಿಂ ಬುದ್ಧಿಜೀವಿಗಳು: ಆರಿಫ್ ಮೊಹಮ್ಮದ್ ಖಾನ್ ಕೇರಳದ ರಾಜ್ಯಪಾಲರಾದರೆ, ನಜ್ಮಾ ಹೆಪ್ತುಲ್ಲಾ ಮಣಿಪುರದ ರಾಜ್ಯಪಾಲರಾಗಿದ್ದರೆ.

ಇಬ್ಬರು ತೆಲುಗು ರಾಜ್ಯಪಾಲರು: ಹರಿ ಬಾಬು ಕಂಭಂಪತಿ ಮತ್ತು ಬಂಡಾರು ದತ್ತಾತ್ರೇಯರಿಂದ ರಾಜ್ಯಪಾಲರ ಪಟ್ಟಿಯಲ್ಲಿ ತೆಲುಗು ನಾಯಕರ ಸಂಖ್ಯೆ 2ಕ್ಕೇರಿದೆ. 
 

Follow Us:
Download App:
  • android
  • ios