ಭಿನ್ನ ಮತಗಳ ಮದುವೆಯಲ್ಲಿ ಮಕ್ಕಳು ಮುಸ್ಲಿಂಗಳಾಗೋದ್ಯಾಕೆ ? ಕಂಗನಾ ಪ್ರಶ್ನೆ
- ಬಾಲಿವುಡ್ ಜೋಡಿ ಅಮೀರ್-ಕಿರಣ್ ಡಿವೋರ್ಸ್ ಬಗ್ಗೆ ಕಂಗನಾ ಮಾತು
- ಅಂತರ್‌ಧರ್ಮ ವಿವಾಹದಲ್ಲಿ ಮಕ್ಕಳ್ಯಾಕೆ ಯಾವಾಗಲೂ ಮುಸ್ಲಿಂಗಳಾಗಿರ್ತಾರೆ ಎಂದ ಕ್ವೀನ್
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನೆ ಬಗ್ಗೆ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಶೇರ್ ಮಾಡಿದ ನಟಿ ಅಂತರ್ ಧರ್ಮ ವಿವಾಹದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಒಂದು ಸಮಯದಲ್ಲಿ ಪಂಜಾಬ್‌ನಲ್ಲಿ ಒಂದು ಮಗುವನ್ನು ಹಿಂದು ಇನ್ನೊಂದು ಮಗುವನ್ನು ಸಿಖ್ಖ್ ಆಗಿ ಬೆಳೆಸುತ್ತಿದ್ದರು.
ಆದರೆ ಹಿಂದೂ-ಮುಸ್ಲಿಂ ಅಥವಾ ಸಿಖ್ಖ್ ಮುಸ್ಲಿಮರ ಮಧ್ಯೆ ಈ ಟ್ರೆಂಡ್ ಯಾವತ್ತೂ ಕಂಡು ಬಂದಿಲ್ಲ. ಅಥವಾ ಮುಸ್ಲಿಮರನ್ನು ಮದಯವೆಯಾದ ಬೇರೆ ಯಾವುದೆ ಧರ್ಮದ ಫ್ಯಾಮಿಯಲ್ಲೂ ಈ ಟ್ರೆಂಡ್ ಇಲ್ಲ. ಅಮೀರ್ ಖಾನ್ ಅವರ ಎರಡನೇ ವಿಚ್ಛೇದನೆ ನಂತರ ನನಗೆ ಆಶ್ಚರ್ಯವಾದ ವಿಷಯವಿದು. ಅಂತರ್ ಧರ್ಮ ವಿವಾಹದಲ್ಲಿ ಮಕ್ಕಳು ಮುಸ್ಲಿಂಗಳಾಗಿ ಮಾತ್ರ ಗುರುತಿಸಲ್ಪಡೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
15 ವರ್ಷದ ವೈವಾಹಿಕ ಜೀವನದ ನಂತರ ಬೇರಾಗುತ್ತಿದ್ದಾರೆ ಅಮೀರ್-ಕಿರಣ್
ಮಹಿಳೆ ಹಿಂದೂಗಳಾಗಿರಲು ಏಕೆ ಸಾಧ್ಯವಿಲ್ಲ? ಬದಲಾಗುತ್ತಿರುವ ಸಮಯದೊಂದಿಗೆ ನಾವು ಇದನ್ನು ಬದಲಾಯಿಸಬೇಕು, ಈ ಪದ್ಧತಿ ಹಳೆಯದಾಗಿದೆ. ಒಂದು ಕುಟುಂಬದಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್, ರಾಧಸ್ವಾಮಿ ಮತ್ತು ನಾಸ್ತಿಕರು ಒಟ್ಟಿಗೆ ಬದುಕಲು ಸಾಧ್ಯವಾದರೆ ಮುಸ್ಲಿಮರನ್ನು ಮದುವೆಯಾಗಲು ಒಬ್ಬರ ಧರ್ಮವನ್ನು ಏಕೆ ಬದಲಾಯಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಮದ್ವೆಗಿಂತ ಹೆಚ್ಚು ಡಿವೋರ್ಸ್ ಸೆಲೆಬ್ರೇಟ್ ಮಾಡಬೇಕು ಎಂದ ನಿರ್ದೇಶಕ
ಅಮೀರ್ ಮತ್ತು ಕಿರಣ್ ಮದುವೆಯಾದ 15 ವರ್ಷಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ವಿಚ್ಛೇದನೆ ಪ್ರಕಟಿಸಿದ್ದಾರೆ. “ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ - ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿ ಮುಂದುವರಿಯಲಿದ್ದೇವೆ. ನಮ್ಮ ಮಗ ಆಜಾದ್‌ಗೆ ಪೋಷಕರಾಗಿ ಉಳಿದಿದ್ದೇವೆ, ಅವನನ್ನು ನಾವು ಒಟ್ಟಿಗೆ ಬೆಳೆಸುತ್ತೇವೆ ಎಂದಿದ್ದಾರೆ.