ಮೇ.12ರಿಂದ ಹೊಸ ರೂಲ್ಸ್, ಸುರಕ್ಷತೆಗೆ ಆದ್ಯತೆ ನೀಡಿದ ಸೂಪರ್ ಕಿಂಗ್ಸ್; ಮೇ.6ರ ಟಾಪ್ 10 ಸುದ್ದಿ!
ಜನತಾ ಕರ್ಫ್ಯೂ ಮುಗಿದ ಬೆನ್ನೆಲ್ಲೆ, ಮೇ.12ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿ ಮಾಡುವ ಕುರಿತು ಸರ್ಕಾರ ಚಿಂತಿಸುತ್ತಿದೆ. ಇದರ ನಡುವೆ ವಿದೇಶಗಳಿಂದ ಆಗಮಿಸಿರುವ ಸಲಕರಣೆ ಹಂಚಿಕೆ ಕುರಿತು ಆರೋಪಗಳಿಗೆ ಜರ್ಮನಿ ರಾಯಭಾರಿ ಉತ್ತರ ನೀಡಿದ್ದಾರೆ. ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳನ್ನು ಮರುನೇಮಕ ಮಾಡಿದ ಮಮತಾ, ಆಟಗಾರರಿಗೆ ಧೈರ್ಯ ತುಂಬಿದ ಧೋನಿ ಸೇರಿದಂತೆ ಮೇ.6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಸಿಎಂ ಆದ ಬೆನ್ನಲ್ಲೇ ವಾಪಸ್ ಕರೆಸಿದ ಮಮತಾ!...
ಪಶ್ಚಿಮ ಬಂಗಾಳ ಚುನಾವಣೆ ವೇಳೆ ನಡೆದ ಹಿಂಸಾಚಾರ ಹಾಗೂ ಪ್ರಾಥಮಿಕ ತನಿಖಾ ವರದಿ ಆಧರಿಸಿ ಚುನಾವಣಾ ಆಯೋಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಆದರೆ ಆಪ್ತರನ್ನು ಮಮತಾ ಬ್ಯಾನರ್ಜಿ 3ನೇ ಬಾರಿಗೆ ಅಧಿಕಾರಕ್ಕೇರಿದ ಬೆನ್ನಲ್ಲೇ ವಾಪಸ್ ಕರೆಯಿಸಿಕೊಂಡಿದ್ದಾರೆ.
ಮೇ.12ರಿಂದ ಕರ್ನಾಟಕ ಲಾಕ್? : ಚರ್ಚಿಸಿ ಶೀಘ್ರ ನಿರ್ಧಾರವೆಂದ ಡಿಸಿಎಂ...
ದಿನವೂ ಸೋಂಕಿತರ ಸಂಖ್ಯೆ ಏರುತ್ತಲಿದ್ದು, ಮರಣ ಪ್ರಮಾಣವು ಏರಿದ್ದು ಆತಂಕ ಸೃಷ್ಟಿ ಮಾಡಿದೆ. ಇದೇ ವೇಳೆ ಮತ್ತೆ ಲಾಕ್‌ಡೌನ್ ಬಗ್ಗೆ ಅಶ್ವತ್ಥ್ ನಾರಾಯಣ್ ಸುಳಿವನ್ನು ನೀಡಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.
ವಿದೇಶಿ ವೈದ್ಯಕೀಯ ಸಲಕರಣೆ ಹಂಚಿಕೆ; ಪಾರದರ್ಶಕತೆ ಆರೋಪಕ್ಕೆ ಜರ್ಮನ್ ರಾಯಭಾರಿ ತಿರುಗೇಟು!...
ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ 40ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ನೆರವು ನೀಡಿದೆ. ಆಕ್ಸಿಜನ್ ಪೂರೈಕೆ ಸೇರಿದಂತೆ ವೈದ್ಯಕೀಯ ಸಲಕರಣೆ ಹಂಚುವಿಕೆಯಲ್ಲಿ ಪಾರದರ್ಶಕತೆ ಇಲ್ಲ ಅನ್ನೋ ಆರೋಪ ಕೇಂದ್ರ ಸರ್ಕಾರದ ಮೇಲಿದೆ. ಈ ಕುರಿತು ಇದೀಗ ಜರ್ಮನಿ ರಾಯಭಾರಿ ಖಡಕ್ ಉತ್ತರ ನೀಡಿದ್ದಾರೆ.
ಎಲ್ಲಾ ಆಟಗಾರರನ್ನು ತವರಿಗೆ ಕಳಿಸಿ ಕೊನೆಗೆ ವಿಮಾನವೇರಲಿರುವ ಧೋನಿ..!...
ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಡೆಲ್ಲಿಯಿಂದ ಎಲ್ಲಾ ಆಟಗಾರರನ್ನು ಸುರಕ್ಷಿತವಾಗಿ ಅವರ ತವರಿಗೆ ಕಳಿಸಿದ ಬಳಿಕ ಕೊನೆಯವರಾಗಿ ರಾಂಚಿಯತ್ತ ಮುಖ ಮಾಡಲು ತೀರ್ಮಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮತ್ತೆ ಕರಣಿ ಹಿಡಿದು ಗಾರೆ ಕೆಲಸಕ್ಕೆ ನಿಂತ ನಟ ಚಿಕ್ಕಣ್ಣ...
ಕನ್ನಡ ಚಿತ್ರರಂಗದ ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ. 'ರಾಜಹುಲಿ' ಚಿತ್ರದ ನಂತರ ಚಿಕ್ಕಣ್ಣ ಮಾಡಿರುವ ಸಿನಿಮಾಗಳು ಸ್ಟಾರ್ ನಟರ ಜೊತೆಗೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಚಿಕ್ಕಣ್ಣ ಇದ್ದರೆ ಸ್ಟಾರ್‌ಗಳ ಸಿನಿಮಾದ ಹಾಸ್ಯ ಭಾಗಕ್ಕೆ ಒಂದೊಳ್ಳೆ ಬೆಲೆ. ಜನತಾ ಕರ್ಫ್ಯೂನಿಂದ ಕನ್ನಡ ಚಿತ್ರರಂಗ ಸೆಲ್ಫ್ ಲಾಕ್‌ಡೌನ್ ವಿಧಿಸಿಕೊಂಡಿದೆ. ಹೀಗಾಗಿ ಚಿಕಣ್ಣ ತಮ್ಮ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಮುಂದುವರಿದಿದೆ ಚುನಾವಣೆ - ಪೆಟ್ರೋಲ್ ದರ ಏರಿಕೆ ಸಂಪ್ರದಾಯ; ಸತತ 3ನೇ ದಿನ ಬೆಲೆ ಏರಿಕೆ!...
ಸತತ 3ನೇ ದಿನ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇದೀಗ ದರ ಏರಿಕೆ ಆರಂಭಗೊಂಡಿದೆ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ, ಹಲವು ದಶಕಗಳ ಸಂಪ್ರದಾಯ ಈಗಲೂ ಅಷ್ಟೇ ಅಚ್ಚು ಕಟ್ಟಾಗಿ ಎಲ್ಲಾ ಸರ್ಕಾರಗಳು ಪಾಲಿಸುತ್ತಿದೆ.
Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ...
ಮಹೀಂದ್ರಾ ಕಂಪನಿ ಯಾವಾಗಲೂ ಸಮಾಜಮುಖಿಯಾಗುವುದರಲ್ಲಿ ಒಂದು ಹೆಜ್ಜೆ ಮುಂದಿರುತ್ತದೆ. ಕೊರೋನಾ ತೀವ್ರ ತೊಂದರೆಯನ್ನು ಅನುಭಿಸುತ್ತಿರುವ ಮಹಾರಾಷ್ಟ್ರಕ್ಕೆ ಮಹೀಂದ್ರಾ ಕಂಪನಿಯು ಆಮ್ಲಜನಕವನ್ನು ಪೂರೈಸಲು ಮುಂದಾಗಿದೆ. ಇದಕ್ಕಾಗಿ ಕಂಪನಿ ಆಕ್ಸಿಜನ್ ಆನ್ ವೀಲ್ಸ್ ಅಭಿಯಾನವನ್ನು ಆರಂಭಿಸಿದೆ.
ಅರೆ ಇಸ್ಕಿ..ವಿಸ್ಕಿ ತಗೊಳ್ಳೋದು ಕೋವಿಡ್ ವ್ಯಾಕ್ಸಿನ್ ಇಮ್ಯುನಿಟಿಗೆ ನಾಟ್ ರಿಸ್ಕಿ!...
ಒಂದು ಮಿತಿಯಲ್ಲಿ ಆಲ್ಕೋಹಾಲ್ ಸೇವಿಸುವುದು ಒಳ್ಳೆಯದೇ. ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳುವಾಗ ಇಮ್ಯುನಿಟಿ ವರ್ಧನೆಗೆ ಪುಷ್ಟಿಕೊಡುತ್ತದೆ ಎಂಬುದನ್ನು ನಾವು ಹೇಳುತ್ತಿಲ್ಲ. ತಜ್ಞರ ಮಾತುಗಳನ್ನು ಓದುತ್ತಾ..ನೆನಪಿಡಿ.. ಮಿತಿ ಮೀರಿದರೆ ಆಪತ್ತು. ಜೋಪಾನ
ಜನತಾ ಕರ್ಫ್ಯೂ: ಮನೆ ಬಾಗಿಲಿಗೆ ಪಡಿತರ ವಿತರಣೆ?...
ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಪಡಿತರವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕೊರೋನಾ ಅಬ್ಬರ: ಮೇ. 8ರಿಂದ ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್!...
ಕೊರೋನಾ ಅಬ್ಬರ, ಕೇರಳದಲ್ಲಿ ಹೆಚ್ಚುತ್ತಿದೆ ಸೋಂಕು| ಏರುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ದೇವರನಾಡಿನಲ್ಲಿ ಲಾಕ್‌ಡೌನ್ ಘೋಷಣೆ| ಲಾಕ್‌ಡೌನ್ ಘೋಷಿಸಿದ ಸಿಎಂ ಪಿಣರಾಯಿ ವಿಜಯನ್