Asianet Suvarna News Asianet Suvarna News

ವಿದೇಶಿ ವೈದ್ಯಕೀಯ ಸಲಕರಣೆ ಹಂಚಿಕೆ; ಪಾರದರ್ಶಕತೆ ಆರೋಪಕ್ಕೆ ಜರ್ಮನ್ ರಾಯಭಾರಿ ತಿರುಗೇಟು!

ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ 40ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ನೆರವು ನೀಡಿದೆ. ಆಕ್ಸಿಜನ್ ಪೂರೈಕೆ ಸೇರಿದಂತೆ ವೈದ್ಯಕೀಯ ಸಲಕರಣೆ ಹಂಚುವಿಕೆಯಲ್ಲಿ ಪಾರದರ್ಶಕತೆ ಇಲ್ಲ ಅನ್ನೋ ಆರೋಪ ಕೇಂದ್ರ ಸರ್ಕಾರದ ಮೇಲಿದೆ. ಈ ಕುರಿತು ಇದೀಗ ಜರ್ಮನಿ ರಾಯಭಾರಿ  ಖಡಕ್ ಉತ್ತರ ನೀಡಿದ್ದಾರೆ.

German Ambassador hits out those who questions india for transparency in foreign aid distribution ckm
Author
Bengaluru, First Published May 6, 2021, 3:29 PM IST

ನವದೆಹಲಿ(ಮೇ.06): ಕೊರೋನಾ ವೈರಸ್ ನಿಯಂತ್ರಣಕ್ಕೆ  ಭಾರತ ವಿದೇಶಗಳಿಂದ ನೆರವು ಪಡೆದುಕೊಂಡಿದೆ. 40ಕ್ಕೂ ಹೆಚ್ಚು ರಾಷ್ಟ್ರಗಳು ಭಾರತಕ್ಕೆ ಆಕ್ಸಿಜನ್, ಲಸಿಕೆ, ಸಿರಿಂಜ್, ವೈದ್ಯಕೀಯ ಸಲಕರಣೆಗಳನ್ನು ಪೂರೈಕೆ ಮಾಡುತ್ತಿದೆ. ಆದರೆ  ಕೇಂದ್ರ ಸರ್ಕಾರ ಮೇಲೆ ವಿದೇಶಗಳಿಂದ ಬಂದ ವಸ್ತುಗಳನ್ನು ಹಂಚುವಲ್ಲಿ ಪಾರದರ್ಶಕತೆ ಇಲ್ಲ ಎಂಬ ಆರೋಪ ಕೇಳಿಬಂದಿದೆ. ವಿರೋಧ ಪಕ್ಷ ಸೇರಿದಂತೆ ಕೆಲ ರಾಷ್ಟ್ರಗಳು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಆದರೆ ಈ ಆರೋಪಗಳಿಗೆ ಜರ್ಮನಿ ರಾಯಭಾರಿ ವಾಲ್ಟರ್ ಜೆ ಪ್ರಶ್ನಿಸಿದ್ದಾರೆ. 

ಒಂದೇ ಸಲಕ್ಕೆ 200 ಬೆಡ್‌ಗೆ ಆಕ್ಸಿಜನ್: ರಷ್ಯಾದಿಂದ ಸ್ಪೆಷಲ್ ಟ್ರಕ್ಸ್.

ಭಾರತದಲ್ಲಿನ ಆಕ್ಸಿಜನ್ ಕೊರತೆ ನೀಗಿಸಲು ಜರ್ಮನಿ 4,00,000 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಘಟಕವನ್ನು ಭಾರತಕ್ಕೆ ಸಾಲ ನೀಡಿದೆ. ಇದರಿಂದ ಆಕ್ಸಿಜನ್ ರೀಫಿಲ್ ಮಾಡಲು ಹಾಗೂ ದೆಹಲಿ ಸೇರಿದಂತೆ ದೇಶದ ಇತರೆಡೆಗೆ ಆಕ್ಸಿಜನ್ ಪೂರೈಕೆ ಮಾಡಲು ನೆರವಾಗಲಿದೆ. DRDO ಈ ಘಟಕವನ್ನು ಸರ್ದಾರ್ ಪಟೇಲ್ ಕೋವಿಡ್ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡುತ್ತಿದೆ. ಆಕ್ಸಿಜನ್ ಪ್ಲಾಂಟ್ ನೀಡಿದ ಬಳಿಕ ಮಾತನಾಡಿದ ವಾಲ್ಟರ್ ಜೆ, ಭಾರತ ಸರ್ಕಾರವನ್ನು ಪಾರದರ್ಶಕತೆ ಹೆಸರಿನಲ್ಲಿ ಪ್ರಶ್ನೆ ಮಾಡುವುದು ಸರಿಯಲ್ಲ. ಜೊತೆಗೆ ಇದು ಸಮಯವೂ ಅಲ್ಲ. ತಾಳ್ಮೆ ಅಗತ್ಯ ಎಂದು ತಿರುಗೇಟು ನೀಡಿದ್ದಾರೆ.

ಕೇಂದ್ರದ ಮೇಲಿನ ಆರೋಪಕ್ಕೆ ಜರ್ಮನ್ ರಾಯಭಾರಿ ಉತ್ತರ:
ವಿದೇಶಗಳಿಂದ ಭಾರತಕ್ಕೆ ಬಂದಿರುವ ಸುಮಾರು 300 ಟನ್ ವೈದ್ಯಕೀಯ ಸಲಕರಣೆಗಳ ಹಂಚಿಕೆ ಕುರಿತು ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಹಾಗೂ ಭಾರತದಲ್ಲಿನ ವಿರೋಧ ಪಕ್ಷದಗಳು ಪ್ರಶ್ನೆ ಎತ್ತಿದೆ. ಆದರೆ ವಿದೇಶದಿಂದ ಬಂದ ವೈದ್ಯಕೀಯ ಸಲಕರಣೆ  ಸೌಲಭ್ಯ ಪಡೆಯಲು ತಾಳ್ಮೆ ಅಗತ್ಯ. ಕಾರಣ ಉತ್ಪಾದನೆ ಘಟಕಗಳನ್ನು ಭಾರತದಲ್ಲಿ ಸ್ಥಾಪಿಸಿ ಅದರಿಂದ ಆಕ್ಸಿಜನ್ ಉತ್ಪಾದನೆ ಮಾಡುವಷ್ಟು ತಾಳ್ಮೆ ಅಗತ್ಯ. ಇನ್ನು ಇಷ್ಟು ಬೇಗ ಪಾರದರ್ಶಕತೆ ಆರೋಪಗ ಸೂಕ್ತವಲ್ಲ ಎಂದು ವಾಲ್ಟರ್ ಜೆ ಉತ್ತರ ನೀಡಿದ್ದಾರೆ.

ಬಹ್ರೇನ್‌ನಿಂದ 40 MT ಆಕ್ಸಿಜನ್, ರಾಜ್ಯದ ಪ್ರತಿ ಜಿಲ್ಲೆಗೂ ಪ್ರಾಣವಾಯು ಪೂರೈಕೆ!

ಅಸಹನೆ ಸಹಜ, ಸಹಕಾರ ಅಗತ್ಯ;
ಭಾರತದಲ್ಲಿನ ಪರಿಸ್ಥಿತಿ ಕುರಿತ ಚಿತ್ರಗಳು ಮನಸ್ಸು ಕದಡುತ್ತಿದೆ. ಆಸ್ಪತ್ರೆಗಾಗಿ ಅಲೆದಾಟ, ಆಕ್ಸಿಜನ್ ಇಲ್ಲದೆ ಸಾವು ಸೇರಿದಂತೆ ಅನೇಕ ಘಟನೆಗಳು ನಾವೆಂದೂ ಊಹಿಸಿರದ ಸ್ಥಿತಿಯಾಗಿದೆ. ಹೀಗಾಗಿ ಅಸಹನೆ ಸಹಜ. ಆಕ್ಸಿನ್ ಸೇರಿದಂತೆ ವೈದ್ಯಕೀಯ ಸೌಲಭ್ಯ ತ್ವರಿತಗತಿಯಲ್ಲಿ ಸಿಗಬೇಕು ಅನ್ನೋ ಚಡಪಡಿಕೆ ಸಹಜ. ಆದರೆ ಈ ಕಠಿಣ ಸಂರ್ಭದಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ವಾಲ್ಟರ್ ಜೆ ಹೇಳಿದ್ದಾರೆ.

ಜರ್ಮನ್ ರಾಯಭಾರಿ  ಅಧಿಕಾರಿಗಳ ಕೋರೊನಾ ಸೇವೆ:
ಜರ್ಮನಿ ರಾಯಭಾರಿ ಕಚೇರಿಯಲ್ಲಿ 150 ಮಂದಿ ಇದ್ದಾರೆ. ಇದರಲ್ಲಿ 30 ಮಂದಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೋರಾಟದಲ್ಲಿ ಇಬ್ಬರಿಗೆ ಕೊರೋನಾ ತಗುಲಿದ ಕಾರಣ ಆಸ್ಪತ್ರೆ ಸೇರಿಸುವುದೇ ಅತ್ಯಂತ ಸವಾಲಿನ ಕೆಲಸವಾಗಿತ್ತು. ಜರ್ಮನಿ ಪ್ರಜೆಗಳ ಸುರಕ್ಷತೆಗೆ ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡುತ್ತಿದ್ದೇವೆ ಎಂದು ವಾಲ್ಟರ್ ಜೆ ಹೇಳಿದ್ದಾರೆ.

Follow Us:
Download App:
  • android
  • ios