ಕೋವಿಡ್ ವ್ಯಾಕ್ಸಿನ್ ತಗೊಂಡವರು ಎಣ್ಣೆ ಐ ಮೀನ್ ಆಲ್ಕೋಹಾಲ್ ತಗೊಳ್ಳುವಂತಿಲ್ಲ ಎಂದು ಕೆಲವರು ಹೇಳಿ ತೀರ್ಥಪ್ರಿಯರಲ್ಲಿ ಗಾಬರಿ ಹುಟ್ಟಿಸಿ ಬಿಟ್ಟಿದ್ದರು. ಆದರೆ ಹೊಸ ಸುದ್ದಿಯ ಪ್ರಕಾರ ಅವರು ನಿರಾಳರಾಗಬಹುದು.

ಏನು ಹೊಸ ಸುದ್ದಿ? ಒಂದು ಮೀಡಿಯಂ ಪ್ರಮಾಣದಲ್ಲಿ ಆಲ್ಕೋಹಾಲ್ ತೆಗೆದುಕೊಳ್ತಾ ಇದ್ದರೆ ಕೋವಿಡ್‌ ವ್ಯಾಕ್ಸಿನ್ ತಗೊಂಡಿದ್ದರೂ ಏನೂ ಸಮಸ್ಯೆ ಆಗೋದಿಲ್ಲ. ಇನ್‌ ಫ್ಯಾಕ್ಟ್, ಅದೇ ನಿಮ್ಮ ಇಮ್ಯುನಿಟಿ ಹೆಚ್ಚಿರಲೂ ಕಾರಣವಾಗಿದ್ದೀತು! ಅದೇ ನೀವು ಪ್ರತಿದಿನ ಫುಲ್ ಚಿತ್ ಆಗಿಯೇ ಮಲಗಬೇಕು ಅಂದುಕೊಂಡವರಾಗಿದ್ದರೆ ಮಾತ್ರ ಅಪಾಯ ಇದೆ. ಇದು ತಜ್ಞರು ಹೇಳಿದ ಮಾತು.

ಈ ಬಗ್ಗೆ ರಷ್ಯದಲ್ಲಿ ದೊಡ್ಡ ಕೋಲಾಹಲವೇ ನಡೆದುಹೋಯಿತು. ಅಲ್ಲಿ ಯಾರೋ ತಜ್ಞರು, ಕೋವಿಡ್ ವ್ಯಾಕ್ಸಿನ್‌ ತಗೊಳ್ಳುವುದಕ್ಕೂ ಮೊದಲು ಹದಿನೈದು ದಿನ, ನಂತರದ ಒಂದೂವರೆ ತಿಂಗಳು ಲಿಕ್ಕರ್ ಸೇವಿಸಬಾರದು ಎಂದು ಹೇಳಿಬಿಟ್ಟಿದ್ದರು. ಇದರಿಂದ ಅಲ್ಲಿನ ತೀರ್ಥರೂಪರೆಲ್ಲ ರೊಚ್ಚಿಗೇ ಎದ್ದುಬಿಟ್ಟರು. ಯಾಕೆಂದರೆ ರಷ್ಯಾ, ಅತ್ಯಂತ ಹೆಚ್ಚು ಆಲ್ಕೋಹಾಲ್ ಸೇವಿಸುವವರು ಇರುವ ದೇಶ. ಅಲ್ಲಿ ಲಿಕ್ಕರ್ ಸೇವಿಸಬೇಡಿ ಎಂದರೆ ನಡೆದೀತೆ? ಆದರೆ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ತಜ್ಞರು ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದರು. ಆಲ್ಕೋಹಾಲ್ ಸೇವಿಸುವುದರಿಂದ ವ್ಯಾಕ್ಸಿನ್‌ ಎಫೆಕ್ಟ್ ಕಡಿಮೆಯಾದ ಯಾವುದೇ ಉದಾಹರಣೆಗಳು ಇಲ್ಲ. ಹೀಗಾಗಿ ಅದನ್ನು ಪೂರ್ತಿಯಾಗಿ ಬಿಡಬೇಕೆಂದೇನೂ ಇಲ್ಲ. ಆದರೆ ಒಂದು ಮಿತಿಯಲ್ಲಿ ಸೇವಿಸಬೇಕು. ನೀವು ಭಾರಿ ಎಣ್ಣೆ ಸೇವಿಸುವವರಾದರೆ ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ 6 ಅದ್ಭುತ ಚಹಾಗಳು ...

ಮಿತಿಯಲ್ಲಿ ಅಂದರೆ ಎಷ್ಟು? ಅದೇ ಇಲ್ಲಿ ಸ್ವಾರಸ್ಯ. ಗಂಡಸರಿಗಾದರೆ ದಿನಕ್ಕೆ ಒಂದು ಅಥವಾ ಎರಡು ಡ್ರಿಂಕ್. ಮಹಿಳೆಯರಿಗಾದರೆ ದಿನಕ್ಕೆ ಒಂದು ಡ್ರಿಂಕ್. ದಿನಕ್ಕೆ ಮೂರೋ ನಾಲ್ಕೋ ಅಥವಾ ಅದಕ್ಕಿಂತ ಹೆಚ್ಚು ಬಾರಿ ಡ್ರಿಂಕ್ ಮಾಡುವವರನ್ನು ಹೆವ್ವಿ ಡ್ರಿಂಕರ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಒಂದು ಸ್ಟಾಂಡರ್ಡ್ ಡ್ರಿಂಕ್ ಅಂದರೆ 5 ಔನ್ಸ್‌ನಷ್ಟು ವೈನ್, ವ್ಹಿಸ್ಕಿಯಂಥ ಡಿಸ್ಟಿಲ್ಡ್ ಸ್ಪಿರಿಟ್ ಆದರೆ ಕೇವಲ 1.5 ಔನ್ಸ್, ಬಿಯರ್ ಆದರೆ 15 ಔನ್ಸ್‌ವರೆಗೂ ಒಂದು ಡ್ರಿಂಕ್ ಎಂದು ಪರಿಗಣನೆ. ಅರ್ಥವಾಯಿತಲ್ಲ.

ಅತೀ ಲಿಕ್ಕರ್ ಸೇವನೆ ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಕಡಿಮೆ ಮಾಡುವುದು ನಿಜ. ಅದರಿಂದ ದೇಹದಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ವೇಗದಲ್ಲಿ ಹರಡುವ ಸಾಧ್ಯತೆ ಹೆಚ್ಚು. ಯಾಕೆಂದರೆ ರಕ್ತದಲ್ಲಿರುವ ಇಮ್ಯೂನ್ ಜೀವಕೋಶಗಳು ಎಣ್ಣೆ ಏಟಿನಿಂದಾಗಿ, ಸೋಂಕಿಗೊಳಗಾದ ಭಾಗಕ್ಕೆ ಚಲಿಸುವುದು ನಿಧಾನವಾಗಿಬಿಡುತ್ತೆ. ಹೀಗಾಗಿ ಸೋಂಕು ಹರಡಬಹುದು. ಆದರೆ, ಒಂದು ಮಿತಿಯಲ್ಲಿ ತೆಗೆದುಕೊಳ್ಳುವ ಆಲ್ಕೋಹಾಲ್ ನಿಮ್ಮ ಮೆದುಳನ್ನೂ ರಕ್ತಪರಿಚಲನೆಯನ್ನೂ ಚುರುಕಾಗಿಡುವುದರಿಂದ, ಅಂಥ ಯಾವುದೇ ಅಪಾಯ ಇಲ್ಲ.

ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಮೆಸ್ಸೌದಿ ಎಂಬ ತಜ್ಞರು ಈ ಬಗ್ಗೆ ಒಂದು ಸ್ವಾರಸ್ಯಕರ ಸಂಶೋಧನೆಯನ್ನೂ ನಡೆಸಿದರು. ಅವರು ಒಂದಷ್ಟು ಮಂಗಗಳ ಮೇಲೆ ಈ ಕುರಿತು ಪ್ರಯೋಗ ನಡೆಸಿದರು. ಈ ಮಂಗಗಳಿಗೆ ಆಲ್ಕೋಹಾಲ್ ನೀಡಲು ಶುರುಮಾಡಿದರು. ಮನುಷ್ಯರಮತೆಯೇ ಇವರಲ್ಲಿ ಕೆಲವು ಮಂಗಗಳು ಇವುಗಳನ್ನು ತುಂಬಾ ಇಷ್ಟಪಟ್ಟವು; ಬರಬರುತ್ತಾ ಭಯಂಕರ ಕುಡುಕರಾದವು. ಕೆಲವು ಮಂಗಗಳು ಅಷ್ಟೇನೂ ಇಷ್ಟಪಡಲಿಲ್ಲ, ಇಂಥವು ಒಂದು ಮಿತಿಯಲ್ಲಿ ಸೇವಿಸಿದವು. ನಂತರ ಇವುಗಳ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಿ ನೋಡಲಾಯಿತು. ಎಣ್ಣೆ ಏಟಿನಿಂದ ಚಿತ್ತಾಗಿ ಬಿದ್ದಿರುತ್ತಿದ್ದ ಮಂಗಗಳಲ್ಲಿ ಬಹುತೇಕ ಇಮ್ಯುನಿಟಿ ಇರಲೇ ಇಲ್ಲ. ಇತರ ಮಂಗಗಳು ಸಾಕಷ್ಟು ಇಮ್ಯುನಿಟಿ ಬೆಳೆಸಿಕೊಂಡಿದ್ದವು.

#WorkfromHome: ಒತ್ತಡ ರಹಿತ ಬದುಕಿಗೆ ಮಹಿಳೆಯರಿಗೆ ಟಿಪ್ಸ್ ...

ವ್ಹಿಸ್ಕಿಪ್ರಿಯರಿಗೆ ಇನ್ನೂ ಒಂದು ಸಂತೋಷ ಕೊಡುವ ಸುದ್ದಿ ಎಂದರೆ, ಒಂದೆರಡು ಡ್ರಿಂಕ್ ತೆಗೆದುಕೊಳ್ಳುವವರಲ್ಲಿ ಇಮ್ಯುನಿಟಿ ಚೆನ್ನಾಗಿರುತ್ತದೆ ಎಂಬುದು. ಯಾವ ಲಿಕ್ಕರನ್ನೂ ಸೇವಿಸದ ಟೀಟೋಟಲರ್‌ಗಳಿಗಿಂತ ಇವರಲ್ಲಿ ಇಮ್ಯುನಿಟಿ ಸಾಕಷ್ಟು ಚೆನ್ನಾಗಿಯೇ ಇರುತ್ತದಂತೆ!

ಈ ನಡುವೆ 'ಕೊರೊನಾ ಪ್ರಿಯ'ರಿಗೆ ಕೆಟ್ಟ ಸುದ್ದಿ ಇದೆ. ಕೊರೊನಾ ಎಂಬ ಬಿಯರ್ ಇದೆಯಲ್ಲ, ಅದನ್ನು ಇಷ್ಟಪಡುತ್ತಿದ್ದವರು ತುಂಬಾ ಮಂದಿ ಇದ್ದರು. ಈ ಕೊರೊನಾ ಬಿಯರ್ ತಯಾರು ಮಾಡತ್ತಿದ್ದುದು ಒಂದು ಮೆಕ್ಸಿಕನ್ ಕಂಪನಿ. ಕಳೆದ ವರ್ಷ ಕೊರೊನಾ ಅಮೆರಿಕದಲ್ಲಿ ಜೋರಾದಾಗ ಈ ಕೊರೊನಾ ಬಿಯರ್ ಬಗ್ಗೆ ನಾನಾ ತಮಾಷೆಗಳೂ, ಮೀಮ್‌ಗಳೂ ಹುಟ್ಟಿಕೊಂಡಿದ್ದವು. ಕೊರೊನಾ ಬಿಯರ್ ಕುಡಿದರೆ ವೈರಸ್ ಬರೋಲ್ಲ ಅಂತ ಕೆಲವರು ಕಾಲೆಳೆದರು; ಕೊರೊನಾ ಬಿಯರ್‌ನಿಂದಲೇ ಕೊರೊನಾ ವೈರಸ್ ಬರ್ತಿದೆ ಅಂತ ನಂಬಿದವರೂ ಇದ್ದರು! ಗೂಗಲ್‌ಗೆ ಹೋಗಿ ನೀವು ಈಗಲೂ ಸರ್ಚ್ ಕೊಟ್ಟರೆ, ಕೊರೊನಾ ಬಿಯರ್ ವೈರಸ್ ಅಂತ ಹುಡುಕುವವರು ಸಾಕಷ್ಟು ಮಂದಿ ಇರುವುದು ತಿಳಿಯಬಹುದು. ಅಲ್ರೀ, ಈ ಕೊರೊನಾ ಬಿಯರ್ ಸ್ಥಾಪನೆಯಾಗಿದ್ದು 1998ರಲ್ಲಿ. ಅಂದಿನಿಂದ ಇದು ಅಮೆರಿಕದಲ್ಲಿ ಜನಪ್ರಿಯವಾದ ಪೇಯ. ಅದಕ್ಕೂ ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್‌ಗೂ ಏನ್ರೀ ಸಂಬಂಧ ಇರಲು ಸಾಧ್ಯ? ಆದರೆ ಇಂಥ ಕಾಮನ್ ಸೆನ್ಸ್ ಎಲ್ಲಾ ಪ್ಯಾಂಡೆಮಿಕ್ ಟೈಮಿನಲ್ಲಿ ಯಾರು ಕೇಳುತ್ತಾರೆ? ಕೊರೊನಾ ಬಿಯರ್‌ನ ಸೇಲ್ಸ್ ಕುಸಿಯಿತು. ಸದ್ಯಕ್ಕೆ ಮೆಕ್ಸಿಕನ್ ಕಂಪನಿ ಈ ಬಿಯರ್‌ನ ಉತ್ಪಾದನೆ ನಿಲ್ಲಿಸಿದೆ. ಸದ್ಯ ಯಾರಾದರೂ, ಕೊರೊನಾ ಸ್ಟ್ರಾಂಗ್ ಬಿಯರ್ ಕುಡಿದರೆ ಕೋವಿಡ್ ವೈರಸ್‌ಗೆ ಇಮ್ಯುನಿಟಿ ಸಿಗುತ್ತೆ ಅಂತ ಸುದ್ದಿ ಹಬ್ಬಿಸಿದರೆ, ಪಾಪ, ಆ ಕಂಪನಿ ಸ್ವಲ್ಪ ಲಾಭ ಮಾಡಿಕೊಳ್ಳಬಹುದೇನೋ.

ಉಗುರು ಬೆಚ್ಚಗಿನ ನೀರಿನಿಂದ ದಿನವನ್ನು ಆರಂಭಿಸಿ, ಉತ್ತಮ ಅರೋಗ್ಯ ನಿಮ್ಮದಾಗಿಸಿ ...