ಮಹೀಂದ್ರಾ ಕಂಪನಿ ಯಾವಾಗಲೂ ಸಮಾಜಮುಖಿಯಾಗುವುದರಲ್ಲಿ ಒಂದು ಹೆಜ್ಜೆ ಮುಂದಿರುತ್ತದೆ. ಕೊರೋನಾ ತೀವ್ರ ತೊಂದರೆಯನ್ನು ಅನುಭಿಸುತ್ತಿರುವ ಮಹಾರಾಷ್ಟ್ರಕ್ಕೆ ಮಹೀಂದ್ರಾ ಕಂಪನಿಯು ಆಮ್ಲಜನಕವನ್ನು ಪೂರೈಸಲು ಮುಂದಾಗಿದೆ. ಇದಕ್ಕಾಗಿ ಕಂಪನಿ ಆಕ್ಸಿಜನ್ ಆನ್ ವೀಲ್ಸ್ ಅಭಿಯಾನವನ್ನು ಆರಂಭಿಸಿದೆ.

ಮಹೀಂದ್ರಾ ಟೆಕ್‌ಕಂಪನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಷ್ಟ ಎಂದವರಿಗೆ ಯಾವಾಗಲೂ ಸಹಾಯ ಹಸ್ತ ಚಾಚುತ್ತಾರೆ ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ಮಹೀಂದ್ರಾ .ಸದಾ ಸೋಷಿಯಲ್‌ಮೀಡಿಯಾಗಳಲ್ಲಿ ಫುಲ್‌ಆಕ್ಟೀವ್‌ ಆಗಿರ್ತಾರೆ ಆನಂದ್‌ ಮಹೀಂದ್ರ. ಯಾರಾದರೂ ಕಷ್ಟದಲ್ಲಿದ್ದಾರೆ, ಬಡತನದಲ್ಲೇ ಹುಟ್ಟಿ ಬೆಳೆದು ಸಾಧನೆ ಮಾಡುತ್ತಿದ್ದಾರೆ ಅಂದ್ರೆ ಅಂಥವರಿಗೆ ಆನಂದ್‌ ಮಹೀಂದ್ರಾ ನೆರವಿನ ಹಸ್ತ ಚಾಚುತ್ತಾರೆ. ಇದೀಗ ಕೊರೊನಾ ಆರ್ಭಟದಿಂದಾಗಿ ಇಡೀ ದೇಶವೇ ಆಕ್ಸಿಜನ್‌ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಸಂದರ್ಭದಲ್ಲೂ ಆನಂದ್‌ ಮಹೀಂದ್ರಾ, ಆಮ್ಲಜನಕ ಪೂರೈಸಲು ಮುಂದೆ ಬಂದಿದ್ದಾರೆ. ಅದಕ್ಕಾಗಿ "ಆಕ್ಸಿಜನ್‌ ಆನ್‌ ವೀಲ್ಸ್‌" ಅಭಿಯಾನ ಶುರು ಮಾಡಿದ್ದಾರೆ.

ಕೊರೊನಾ ವಿಪರೀತವಾಗಿರುವ ಮಹಾರಾಷ್ಟ್ರದಲ್ಲಿ ಆನಂದ್‌ ಮಹೀಂದ್ರಾ, "ಆಕ್ಸಿಜನ್‌ ಆನ್‌ವೀಲ್ಸ್‌" ಅಭಿಯಾನ ಆರಂಭಿಸಿದ್ದಾರೆ. ಮುಂಬೈ, ಥಾಣೆ, ಪುಣೆ, ಪಿಂಪ್ರಿ-ಚಿಂಚ್ವಾಡ್, ಚಕನ್, ನಾಸಿಕ್ ಮತ್ತು ನಾಗ್ಪುರದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಆಕ್ಸಿಜನ್‌ಪೂರೈಕೆಗಾಗಿ ೧೦೦ ಮಹೀಂದ್ರಾ ವೆಹಿಕಲ್ಸ್‌ಗಳನ್ನ ಬಿಡಲಾಗಿದೆ. ಮಹೀಂದ್ರಾ ತನ್ನ ಬೊಲೆರೊ ಪಿಕಪ್ ಟ್ರಕ್ ಮೂಲಕ ಮಹಾರಾಷ್ಟ್ರದಾದ್ಯಂತ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಲಿದೆ. ಮಹೀಂದ್ರಾ ವಾಹನಗಳು ಆಮ್ಲಜನಕವನ್ನು ಆಸ್ಪತ್ರೆಗಳು ಮತ್ತು ಅಗತ್ಯವಿರುವವರ ಮನೆ ಬಾಗಿಲಿಗೆ ತಲುಪಿಸಲಿದೆ.

ಕೋವಿಡ್ ನಿರ್ವಹಣೆ ಟೀಕೆ: 100ಕ್ಕೂ ಹೆಚ್ಚು ಪೋಸ್ಟ್ ಡಿಲಿಟ್ ಮಾಡಿದ ಟ್ವಿಟರ್, ಫೇಸ್‌ಬುಕ್!

ಮಹೀಂದ್ರಾ ಬೊಲೆರೊ ಟ್ರಕ್‌ಗಳು ಆಕ್ಸಿಜನ್ ಸಿಲಿಂಡರ್‌ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲಿವೆ. ಈ ಉಚಿತ ಸೇವೆಯನ್ನು ಮುಖ್ಯವಾಗಿ ತೀವ್ರ ಕೊರತೆ ಎದುರಿಸುತ್ತಿರುವ ದೆಹಲಿ ಸೇರಿದಂತೆ ಇತರೆ ನಗರಗಳಿಗೆ ವಿಸ್ತರಿಸಲು ನಾಗರಿಕ ಆಡಳಿತ ಮತ್ತು ಸರ್ಕಾರಿ ಇಲಾಖೆಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ. ಕಳೆದ 48 ಗಂಟೆಗಳಿಗೂ ಮುನ್ನ ತಿಳಿಸಿದ್ರೆ, ಆಮ್ಲಜನಕ ಸಿಲಿಂಡರ್‌ಗಳನ್ನು ನೇರವಾಗಿ ರೋಗಿಗಳ ಮನೆಗಳಿಗೆ ತಲುಪಿಸಲಾಗುತ್ತದೆ. ಮಹೀಂದ್ರಾ ಲಾಜಿಸ್ಟಿಕ್‌ಕಂಪನಿ, ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳಿಗೆ ಜೀವ ಉಳಿಸುವ ಆಮ್ಲಜನಕ ಪೂರೈಕೆಯನ್ನು ಸುರಕ್ಷಿತ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಸಾಗಿಸುವ ಕೆಲಸ ಮಾಡುತ್ತಿದೆ. ಈ ಆಕ್ಸಿಜನ್‌ ಆನ್‌ ವೀಲ್‌ ಅಭಿಯಾನವನ್ನ ಮೇಲ್ವಿಚಾರಣೆ ಮಾಡಲು ಮಹೀಂದ್ರಾ ಕಂಪನಿಯು ಆಪರೇಷನ್ಸ್‌ಕಂಟ್ರೋಲ್‌ರೂಮ್‌ಸ್ಥಾಪಿಸಲಿದೆ. ಸಿಎಂ ಉದ್ದವ್‌ಠಾಕ್ರೆ ಜೊತೆ ಆನಂದ್‌ಮಹೀಂದ್ರಾ ಸಂಭಾಷಣೆ ನಡೆಸಿದ 48 ಗಂಟೆಯೊಳಗೆ ಈ ಪ್ರಾಜೆಕ್ಟ್‌ಅನ್ನು ಪ್ರಾರಂಭಿಸಲಾಗಿದೆ.

ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಇಂದು ಆಮ್ಲಜನಕ ಮುಖ್ಯವಾಗಿದೆ. ಸಮಸ್ಯೆ ಇರೋದು ಆಮ್ಲಜನಕದ ಉತ್ಪಾದನೆಯಲ್ಲ, ಉತ್ಪಾದನಾ ಘಟಕಗಳಿಂದ ಆಸ್ಪತ್ರೆಗಳು ಮತ್ತು ಮನೆಗಳಿಗೆ ಸಾಗಿಸುವುದರಲ್ಲಿದೆ. ಹೀಗಾಗಿ ಮಹೀಂದ್ರಾ ಲಾಜಿಸ್ಟಿಕ್ಸ್ ಮೂಲಕ ಆಕ್ಸಿಜನ್ ಆನ್ ವೀಲ್ಸ್ ಯೋಜನೆ ಜಾರಿಗೆ ತಂದಿದ್ದು, ಆಕ್ಸಿಜನ್ ತಲುಪಿಸುವ ಕಾರ್ಯ ನಡೆಯಲಿದೆ. ಸದ್ಯಕ್ಕೆ ಈ ಸೇವೆ ಮಹಾರಾಷ್ಟ್ರದಲ್ಲಿ ಆರಂಭಿಸಲಾಗಿದೆ. ಶೀಘ್ರದಲ್ಲೇ ದೇಶದ ಇತರ ರಾಜ್ಯಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಹೀಂದ್ರಾ ಗ್ರೂಪ್‌ಮೊದಲಿಂದಲೂ ಮುಂಚೂಣಿಯಲ್ಲಿದೆ. ಐಸಿಯು ಹಾಸಿಗೆಗಳು, ತುರ್ತು ಕ್ಯಾಬ್ ಸೇವೆಗಳು, ಸಂಪರ್ಕ ಕೇಂದ್ರಗಳು, ದೀನದಲಿತರಿಗೆ ಹಣದ ಬೆಂಬಲ ನೀಡುವುದು, ಬಡವರಿಗೆ ಪಡಿತರ ಒದಗಿಸುವುದು, ಕೊರೊನಾ ವೈರಸ್‌ವಿರುದ್ಧದ ಹೋರಾಟಕ್ಕೆ ನೆರವಾಗಲು ಹೆಚ್ಚು ಅಗತ್ಯವಿರುವ ಪಿಪಿಇ ಕಿಟ್, ಫೇಸ್ ಶೀಲ್ಡ್‌ಗಳು, ಫೇಸ್ ಮಾಸ್ಕ್ ಒದಗಿಸುವುದು ಹಾಗೂ ಸರ್ಕಾರದ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸುವುದು ಇತ್ಯಾದಿ ಸಾಮಾಜಿಕ ಕಾರ್ಯಗಳನ್ನ ನಡೆಸುತ್ತಲೇ ಬಂದಿದೆ.

ಇದಿಷ್ಟೇ ಅಲ್ಲ, ಆಮ್ಲಜನಕ ಘಟಕಗಳು ಮತ್ತು ಪ್ರತ್ಯೇಕ ಕೇಂದ್ರಗಳನ್ನು ನಿರ್ಮಿಸಲು ಮಹೀಂದ್ರಾ ಗ್ರೂಪ್‌, ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಎಂ&ಎಂ ಘಟಕಗಳು ಮತ್ತು ಅದರ ಪೂರೈಕೆದಾರರು ಯಾವುದೇ ಕೈಗಾರಿಕಾ ಚಟುವಟಿಕೆಗಳಿಗೆ ಆಮ್ಲಜನಕವನ್ನು ಬಳಸುತ್ತಿಲ್ಲ. ಟೆಕ್ ಮಹೀಂದ್ರಾ, ನರ್ಸಿಂಗ್ ಅಕಾಡೆಮಿಯ ಸಿಬ್ಬಂದಿಯನ್ನು ಬೆಂಬಲಿಸಿ ವಿವಿಧ ಆಸ್ಪತ್ರೆಗಳಲ್ಲಿ ಸಹಾಯ ಮಾಡಲು ಪ್ರೋತ್ಸಾಹಿಸಿದೆ. ವ್ಯಾಕ್ಸಿನೇಷನ್‌ಕೂಡ ಮಹೀಂದ್ರಾ ಗ್ರೂಪ್‌ನ ಪ್ರಮುಖ ಆದ್ಯತೆಯಾಗಿದ್ದು, ತಮ್ಮ ಎಲ್ಲಾ ಸಹವರ್ತಿಗಳು ಮತ್ತು ಅವರ ಕುಟುಂಬಗಳಿಗೆ ಶೇಕಡಾ 100ರಷ್ಟು ವ್ಯಾಕ್ಸಿನೇಷನ್‌ಗೆ ಒತ್ತು ನೀಡಲಾಗಿದೆ.

ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೋನು ಸೂದ್ ಮನವಿ

ಇದೀಗ ಮಹೀಂದ್ರಾ ‘ಆಕ್ಸಿಜನ್ ಆನ್ ವೀಲ್ಸ್’ ಅಭಿಯಾನದೊಂದಿಗೆ ಮುಂಬೈ, ಥಾಣೆ, ಪುಣೆ, ಪಿಂಪ್ರಿ-ಚಿಂಚ್‌ವಾಡ್, ಚಕನ್, ನಾಸಿಕ್ ಮತ್ತು ನಾಗ್ಪುರಗಳಲ್ಲಿ ತ್ವರಿತವಾಗಿ ಆಮ್ಲಜನಕದ ಪೂರೈಕೆ ಮಾಡೋ ಮೂಲಕ ಮತ್ತೊಂದು ಹೊಸ ದಿಟ್ಟ ಹೆಜ್ಜೆಯನ್ನಿಟ್ಟಿದೆ.