Asianet Suvarna News

ಸಂಚಾರಿ ವಿಜಯ್‌ಗಾಗಿ ಪ್ರಾರ್ಥನೆ, ಶಕೀಬ್‌ಗೆ ಮುಳುವಾಯ್ತು ಅನುಚಿತ ವರ್ತನೆ; ಜೂ.14ರ ಟಾಪ್ 10 ಸುದ್ದಿ

ಅಪಘಾತದಿಂದ ತೀವ್ರಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯಗೊಂಡಿದೆ. ಆದೆರೆ ಉಸಿರಾಟ ನಿಲ್ಲಿಸಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮೋದಿ, ಶಾ ಭದ್ರಕೋಟೆಗೆ ಕೇಜ್ರಿವಾಲ್ ಲಗ್ಗೆ ಇಟ್ಟಿದ್ದಾರೆ. ಕೋಟಿ ಕೋಟಿ ಆದಾಯ ಹೆಚ್ಚಿಸಿದ್ದ ಅದಾನಿಗೆ ಹಿನ್ನಡೆಯಾಗಿದೆ. ಬಿಗ್‌ಬಾಸ್ ಕನ್ನಡ ಮತ್ತೆ ಆರಂಭ, ಶಕೀಬ್ ಅಲ್ ಹಸನ್‌ಗೆ ನಿಷೇಧ ಹೇರಿದ ಐಸಿಸಿ ಸೇರಿದಂತೆ ಜೂನ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Kannada actor sanchari vijay to Arvind kejriwal AAP top 10 news of June 14 ckm
Author
Bengaluru, First Published Jun 14, 2021, 4:43 PM IST
  • Facebook
  • Twitter
  • Whatsapp

ಮೋದಿ, ಶಾ ಕೋಟೆಗೆ ಕೇಜ್ರೀ ಲಗ್ಗೆ: ಮಹತ್ವದ ಘೋಷಣೆ ಮಾಡಿದ AAP!...

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತ್ತೊಂದು ಬಾರಿ ದೆಹಲಿಯಿಂದ ಹೊರಗೆ ಪಕ್ಷ ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆ ಸೋಮವಾರ ಮಹತ್ವದ ನಿರ್ಧಾರ ಪ್ರಕಟಿಸಿದ ಕೇಜ್ರೀವಾಲ್ 2022ರ ಗುಜರಾಥ್ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಇಲ್ಲಿನ ಎಲ್ಲಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದಿದ್ದಾರೆ.

ಸಂಚಾರಿ ವಿಜಯ್ ಇನ್ನೂ ಕೊನೆಯುಸಿರೆಳೆದಿಲ್ಲ: ವೈದ್ಯರು ಸ್ಪಷ್ಟಪಡಿಸಿದ್ದೇನು?...

ಅಪಘಾತದಿಂದ ಗಾಯಗೊಂಡು ಚಿಕಿತ್ಸೆ  ಪಡೆದುಕೊಳ್ಳುತ್ತಿರುವ ನಟ ಸಂಚಾರಿ ವಿಜಯ್ ಪರಿಸ್ಥಿತಿ ಗಂಭೀರವಾಗಿದೆ ಎಂಬ ವಿಚಾರವನ್ನು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.  ವಿಜಯ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಉಸಿರಾಡುತ್ತಿದ್ದಾರೆಂದು ವೈದ್ಯರು, ಡಿಸಿಎಂ ಸ್ಪಷ್ಟಪಡಿಸಿದ್ದಾರೆ. 

ಗೌತಮ್ ಅದಾನಿಗೆ ಬಿಗ್ ಶಾಕ್: 43,500 ಕೋಟಿ ರೂ. ಷೇರು ಫ್ರೀಜ್, ಶೇ. 20ರಷ್ಟು ಶೇರು ಕುಸಿತ!...

ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಗೆ ಬಹುದೊಡ್ಡ ಶಾಕ್ ಸಿಕ್ಕಿದೆ. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಮೂರು ವಿದೇಶೀ ಫಂಡ್ಸ್‌ಗಳಾದ Albula ಇನ್ವೆಸ್ಟ್‌ಮೆಂಟ್‌ ಫಂಡ್, ಕ್ರೆಸ್ಟಾ ಫಂಡ್ ಹಾಗೂ ಎಪಿಎಂಎಸ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ ಖಾತೆಗಳನ್ನು ಫ್ರೀಜ್ ಮಾಡಿದೆ. ಇವುಗಳ ಬಳಿ ಅದಾನಿ ಗ್ರೂಪ್‌ನ ನಾಲ್ಕು ಕಂಪನಿಯ 43,500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಶೇರು ಇದೆ. ಈ ಬೆಳವಣಿಗೆ ಬೆನ್ನಲ್ಲೇ ಅದಾನಿ ಗ್ರೂಪ್‌ನ ಷೇರುಗಳು ಕುಸಿಯಲಾರಂಭಿಸಿವೆ.

40,000 ಕೋಟಿ ಸಾಲವಿದ್ದರೂ, ಅಧಿಕಾರಿಗಳಿಗೆ 32 ಐಷಾರಾಮಿ ಕಾರು ಖರೀದಿಸಿದ ರಾಜ್ಯ!...

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತೆಲಂಗಾಣವು 32 ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ವತಿಯಿಂದ ಬೋನಸ್ ರೂಪದಲ್ಲಿ ಬಳಸಲು ಐಷಾರಾಮಿ ಕಾರುಗಳನ್ನು ಖರೀದಿಸಿದೆ. ಸದ್ಯ ಈ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅಧಿಕಾರಿಗಳಿಗಾಗಿ 32 ಕಿಯಾ ಕಾರ್ನಿವಲ್ ಕಾರುಗಳನ್ನು ಖರೀದಿಸಿದ್ದಾರೆ

5 ನಿಮಿಷ, 2 ಕೋಟಿಯಿಂದ 18 ಕೋಟಿ: ರಾಮಮಂದಿರ ಜಮೀನು ಖರೀದಿಯಲ್ಲಿ ಅಕ್ರಮ ಆರೋಪ!...

ರಾಮಜನ್ಮಭೂಮಿ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು ರಾಮಮಂದಿರ ನಿರ್ಮಾಣದ 2 ಕೋಟಿ ರು. ಮೌಲ್ಯದ ಜಮೀನೊಂದನ್ನು 18.5 ಕೋಟಿ ರು.ಗೆ ಖರೀದಿಸಿ ಭಾರೀ ಅಕ್ರಮ ಎಸಗಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಸಂಸದ ಸಂಜಯ ಸಿಂಗ್‌ ಹಾಗೂ ಸಮಾಜವಾದಿ ಪಾರ್ಟಿ ಮುಖಂಡ ಪವನ್‌ ಪಾಂಡೇಯ ಆರೋಪ ಮಾಡಿದ್ದಾರೆ. 

ಕಾಂಗ್ರೆಸ್‌ನಲ್ಲಿ ಭಾರೀ ಬದಲಾವಣೆ ಆಗಲೇಬೇಕು: ಸಿಬಲ್‌...

ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಪಕ್ಷದ ಹೈಕಮಾಂಡ್‌ ವಿರುದ್ಧ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಎಲ್ಲಾ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲೇ ಬೇಕಾದ ಅಗತ್ಯವಿದೆ. ಕಾಂಗ್ರೆಸ್‌ ಒಂದು ನಿಷ್ಕಿ್ರಯ ಪಕ್ಷವಾಗಿ ಇರದೇ ಬಿಜೆಪಿಗೆ ಪರ್ಯಾಯವಾಗಿ ಗುರುತಿಸಿಕೊಳ್ಳುವ ಅಗತ್ಯವಿದೆ ಎಂದು ಕಪಿಲ್‌ ಸಿಬಲ್‌ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅನುಚಿತ ವರ್ತನೆ: 3 ಪಂದ್ಯಗಳಿಗೆ ಶಕೀಬ್ ಅಲ್‌ ಹಸನ್‌ ಬ್ಯಾನ್...

ಬಾಂಗ್ಲಾದೇಶ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್‌ ಹಸನ್ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಮೈದಾನದಲ್ಲೇ ಅನುಚಿತ ವರ್ತನೆ ಮಾಡಿದ ತಪ್ಪಿಗಾಗಿ 5,900 ಡಾಲರ್ ದಂಡ ಹಾಗೂ 3 ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. 

ಜೂನ್ ಕೊನೆಯಲ್ಲಿ ಅಥವಾ ಜುಲೈನಲ್ಲಿ ಬಿಗ್ ಬಾಸ್‌ ಸೀಸನ್ 8 ಮತ್ತೆ ಆರಂಭ?...

ಕೊರೋನಾ ವೈರಸ್ ಎರಡನೇ ಅಲೆಯಿಂದಾಗಿ ಅರ್ಧಕ್ಕೇ ನಿಂತಿದ್ದ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ಮತ್ತೆ ಆರಂಭಿಸುವುದಕ್ಕೆ ವಾಹಿನಿ ಮುಂದಾಗಿದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. 72 ದಿನಗಳ ಕಾಲ ಬಿಬಿ ಮನೆಯಲ್ಲಿದ್ದ ಸದಸ್ಯರು ಮತ್ತೆ ರೀ- ಎಂಟ್ರಿ ಕೊಟ್ಟು ಆಟ ಮುಂದುವರೆಸುತ್ತಾರಂತೆ!

ಇನ್ಫೋಸಿಸ್‌ ಫೌಂಡೇಷನ್‌ನಿಂದ ಅತ್ಯಾಧುನಿಕ ಆಂಬ್ಯುಲೆನ್ಸ್‌ ಕೊಡುಗೆ...

ಇನ್ಫೋಸಿಸ್‌ ಫೌಂಡೇಷನ್‌, ಸಮಾಜಸೇವಾ ಸಂಸ್ಥೆ ಮತ್ತು ಇನ್ಫೋಸಿಸ್‌ ಸಂಸ್ಥೆಯ ಸಿಎಸ್‌ಆರ್‌ ನಿಧಿಯಿಂದ ಇಂದು (ಸೋಮವಾರ) ನಾರಾಯಣ ಹೃದಯಾಲಯ ದತ್ತಿ ಟ್ರಸ್ಟ್ ಗೆ ಎರಡು ಆಂಬ್ಯುಲೆನ್ಸ್‌ ದಾನವಾಗಿ ನೀಡಲಾಯಿತು

ಹೊಸ ಸೆನ್ಸೇಷನ್, ಕ್ಲಬ್‌ಹೌಸ್ ಹೌಸ್‌ಫುಲ್; ಏನಿದು ಆ್ಯಪ್? ಹೇಗೆ ಕೆಲಸ ಮಾಡುತ್ತದೆ?...

ಇತ್ತೀಚೆಗಷ್ಟೇ ಲಾಂಚ್ ಆಗಿರುವ ಕ್ಲಬ್‌ಹೌಸ್ ಎಂಬ ಆಡಿಯೋ ಆಧರಿತ ಇನ್ವೈಟ್ ಓನ್ಲೀ ಸೋಷಿಯಲ್ ನೆಟ್‌ವರ್ಕಿಂಗ್ ಆಪ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಾರತದಲ್ಲೂ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಫೇಸ್‌ಬುಕ್, ಟ್ವಿಟರ್‌ನಂಥ ತಾಣಗಳಿಗೂ ಈ ಕ್ಲಬ್‌ಹೌಸ್ ಸ್ಪರ್ಧೆ ನೀಡುತ್ತಿದೆ.

Follow Us:
Download App:
  • android
  • ios