5 ನಿಮಿಷ, 2 ಕೋಟಿಯಿಂದ 18 ಕೋಟಿ: ರಾಮಮಂದಿರ ಜಮೀನು ಖರೀದಿಯಲ್ಲಿ ಅಕ್ರಮ ಆರೋಪ!
* ರಾಮಮಂದಿರ ಜಮೀನು ಖರೀದಿಯಲ್ಲಿ ಅಕ್ರಮ: ಆಪ್, ಎಸ್‌ಪಿ ಆರೋಪ
* 2 ಕೋಟಿ ರು. ಮೌಲ್ಯದ ಜಮೀನೊಂದನ್ನು 18.5 ಕೋಟಿ ರು.ಗೆ ಖರೀದಿಸಿ ಭಾರೀ ಅಕ್ರಮ ಎಸಗಿರುವ ಆರೋಪ
* ಆಮ್ ಆದ್ಮಿ ಪಾರ್ಟಿ ಸಂಸದ ಸಂಜಯ ಸಿಂಗ್ ಹಾಗೂ ಸಮಾಜವಾದಿ ಪಾರ್ಟಿ ಮುಖಂಡ ಪವನ್ ಪಾಂಡೇಯ ಆರೋಪ
ಅಯೋಧ್ಯೆ(ಜೂ.14): ರಾಮಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮಮಂದಿರ ನಿರ್ಮಾಣದ 2 ಕೋಟಿ ರು. ಮೌಲ್ಯದ ಜಮೀನೊಂದನ್ನು 18.5 ಕೋಟಿ ರು.ಗೆ ಖರೀದಿಸಿ ಭಾರೀ ಅಕ್ರಮ ಎಸಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಸಂಸದ ಸಂಜಯ ಸಿಂಗ್ ಹಾಗೂ ಸಮಾಜವಾದಿ ಪಾರ್ಟಿ ಮುಖಂಡ ಪವನ್ ಪಾಂಡೇಯ ಆರೋಪ ಮಾಡಿದ್ದಾರೆ.
ಭಾನುವಾರ ಲಕ್ನೋದಲ್ಲಿ ಆಪ್ ಶಾಸಕ ಸಂಜಯ್ ಸಿಂಗ್ ಮತ್ತು ಅಯೋಧ್ಯೆಯಲ್ಲಿ ಸಮಾಜವಾದಿ ನಾಯಕ ಪವನ್ ಪಾಂಡೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಈ ವಿಚಾರವಾಗಿ ಕೇಂದ್ರ ಸರ್ಕಾರ ಸಿಬಿಐ ಮತ್ತು ಇಡಿ ತನಿಖೆಗೆ ಆದೇಶ ನೀಡಬೇಕು. ಟ್ರಸ್ಟ್ ನ್ನು ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನ ಮೇಲೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
93ರ ಹರೆಯದಲ್ಲಿ ರಾಮಲಲ್ಲಾಗೆ ಸುಪ್ರೀಂನಲ್ಲಿ ನ್ಯಾಯ ಒದಗಿಸಿದ ವಕೀಲ ಇವರೇ ನೋಡಿ!
ಸಂಜಯ್ ಸಿಂಗ್ ಹೇಳಿದ್ದೇನು?
ಲಕ್ನೋದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಆಪ್ ನಾಯಕ ಸಂಜಯ್ ಸಿಂಗ್, ಅಯೋಧ್ಯೆಯಲ್ಲಿ ಸುಮಾರು 5.80 ಕೋಟಿ ರೂಪಾಯಿ ಬೆಲೆಯ ಭೂಮಿಯನ್ನು ಕುಸುಮ್ ಪಾಠಕ್ ಮತ್ತು ಹರೀಶ್ ಪಾಠಕ್ ಎಂಬುವವರು ಸುಲ್ತಾನ್ ತಿವಾರಿ ಮತ್ತು ರವಿ ಮೋಹನ್ ತಿವಾರಿ ಎಂಬುವವರಿಗೆ 2 ಕೋಟಿ ಬೆಲೆಗೆ ಕಳೆದ ಮಾರ್ಚ್ 18ರಂದು ಸಾಯಂಕಾಲ ಮಾರಾಟ ಮಾಡಿದ್ದರು. ಆದರೆ ಸಾಯಂಕಾಲ 7 ಗಂಟೆ 10 ನಿಮಿಷಕ್ಕೆ, ಅಂದರೆ ಭೂಮಿ ಮಾರಾಟವಾದ ಕೇವಲ 5 ನಿಮಿಷದಲ್ಲಿ ಜಮೀನು ಕೊಂಡುಕೊಂಡ ಅನ್ಸಾರಿ ಮತ್ತು ತಿವಾರಿಯ ಅದೇ ಭೂಮಿಯನ್ನು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ 18.50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮಾರಾಟ ಮೊತ್ತದಲ್ಲಿ 17 ಕೋಟಿ ರೂಪಾಯಿ ಆರ್ ಟಿಜಿಎಸ್ ಮೂಲಕ ಪಾವತಿ ಮಾಡಿದ್ದಾರೆ. ಭಾರತ ಬಿಡಿ, ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಒಂದು ತುಂಡು ಜಮೀನಿನ ಬೆಲೆ ಇಷ್ಟೊಂದು ಇರುವುದು ಎಲ್ಲಾದರೂ ಕೇಳಿದ್ದೀರಾ, ನೋಡಿದ್ದೀರಾ ಎಂದು ಸಿಂಗ್ ಪ್ರಶ್ನಿಸಿದ್ದಾರೆ. ಅಲ್ಲದೇ ಎರಡೂ ಭೂಮಿ ಖರೀದಿಯ ದಾಖಲಾತಿಗೆ ಸಾಕ್ಷಿಯಾಗಿ ಇರುವುದು ಅಯೋಧ್ಯೆಯ ಮೇಯರ್ ರಿಶಿಕೇಶ್ ಉಪಾಧ್ಯ ಮತ್ತು ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಎಂದಿದ್ದಾರೆ.
ಕಾಲಚಕ್ರದ ಉರುಳಲ್ಲಿ ರಾಮಮಂದಿರದ ಹೆಜ್ಜೆ ಗುರುತುಗಳು!
ಪವನ್ ಪಾಂಡೆ ಹೇಳಿದ್ದೇನು?
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದ ಪವನ್ ಪಾಂಡೆ ನಾನು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದೇನೆ. ಹತ್ತು ನಿಮಿಷದಲ್ಲಿ ಆ ಜಮೀನಿನಲ್ಲಿ ಅದ್ಯಾವ ಚಿನ್ನ ಬೆಳೆಯಲಾಯಿತು. ಕೇವಲ ಹತ್ತು ನಿಮಿಷದಲ್ಲಿ ಎರಡು ಕೋಟಿ ಬೆಲೆಯ ಜಮೀನು ಹದಿನೆಂಟು ಕೋಟಿಗೆ ಹೆಗೆ ಮಾತರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದೇ ವೇಳೆ ಟ್ರಸ್ಟಿ ವಿರುದ್ಧ ಆರೋಪ ಮಾಡಿರುವ ಪಾಂಡೆ ಇದರರ್ಥ ಪತ್ರವನ್ನು ಮಾಡಿದಾಗ ಟ್ರಸ್ಟಿಗಳು ಸಾಕ್ಷಿಗಳಾಗಿದ್ದರು, ನೋಂದಾಯಿತ ಒಪ್ಪಂದಕ್ಕೆ ಸಹಿ ಹಾಕಿದಾಗ ಟ್ರಸ್ಟಿಗಳು ಸಾಕ್ಷಿಗಳಾಗಿದ್ದರು. ಇದರರ್ಥ ಟ್ರಸ್ಟ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದಿದ್ದಾರೆ.
ರಾಮ ಮಂದಿರದ ಲೇಟೆಸ್ಟ್ ಫೋಟೋ: ಒಳಗಿಂದ ಹೀಗಿರುತ್ತೆ ಭವ್ಯ ದೇಗುಲ!
ಆರೋಪ ತಳ್ಳಿ ಹಾಕಿದ ಚಂಪತ್ ರಾಯ್
ಇನ್ನು ತಮ್ಮ ಮತ್ತು ದೇವಸ್ಥಾನದ ಟ್ರಸ್ಟ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಮ ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಟ್ರಸ್ಟ್ ಸಭೆಯಲ್ಲಿ ಏನಾಯಿತು ಎಂದು ನಾನು ಹೇಳುತ್ತೇನೆ. ಆರೋಪಗಳು ಮಾಡುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪ ಒಳಗೊಂಡಂತೆ 100 ವರ್ಷಗಳಿಂದ ನಮ್ಮ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ.ನೀವು, ಪತ್ರಕರ್ತರು ಇಂದು ದೇವಾಲಯ ನಿರ್ಮಾಣ ಸಂಬಂಧಿತ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರೆ, ನಾನು ಅದರ ಬಗ್ಗೆ ವಿವರ ನೀಡುತ್ತೇನೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!
ಡಿಸೆಂಬರಲ್ಲಿ ಅಯೋಧ್ಯೆ ರಾಮ ಮಂದಿರ ಕಲ್ಲಿನ ಕೆಲಸ ಆರಂಭ: ಟ್ರಸ್ಟ್
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಕಲ್ಲುಗಳ ಜೋಡಣೆ ಕೆಲಸ ಡಿಸೆಂಬರ್‌ನಿಂದ ಆರಂಭವಾಗಲಿದೆ ಎಂದು ರಾಮಜನ್ಮಭೂಮಿ ಟ್ರಸ್ಟ್ ತಿಳಿಸಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಅಡಿಪಾಯದ ಕೆಲಸ ಪೂರ್ಣಗೊಳ್ಳಲಿದೆ. ಡಿಸೆಂಬರ್ ನಂತರ 2ನೇ ಹಂತದಲ್ಲಿ ಕಲ್ಲುಗಳ ಜೋಡಣೆ, ವಾಸ್ತುಶಿಲ್ಪ ಕೆತ್ತನೆ ಕಾಮಗಾರಿಗಳು ಆರಂಭವಾಗುತ್ತದೆ. ಇದೇ ವೇಳೆ ಮಿರ್ಜಾಪುರದ ಗುಲಾಬಿ ಕಲ್ಲುಗಳಿಂದ ಆಧಾರಸ್ತಂಭದ ರಚನೆ ಆರಂಭವಾಗಲಿದೆ. ಗುಲಾಬಿ ಕಲ್ಲುಗಳಿಗೆ ಈಗಾಗಲೇ ಆರ್ಡರ್ ನೀಡಲಾಗಿದೆ. ತಲಾ 12 ಗಂಟೆಗಳ ಪಾಳಿಯಲ್ಲಿ ದೇಗುಲ ನಿರ್ಮಾಣ ಕಾರ‍್ಯ ನಡೆಯುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ.