ಇತ್ತೀಚೆಗಷ್ಟೇ ಲಾಂಚ್ ಆಗಿರುವ ಕ್ಲಬ್‌ಹೌಸ್ ಎಂಬ ಆಡಿಯೋ ಆಧರಿತ ಇನ್ವೈಟ್ ಓನ್ಲೀ ಸೋಷಿಯಲ್ ನೆಟ್‌ವರ್ಕಿಂಗ್ ಆಪ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಾರತದಲ್ಲೂ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಫೇಸ್‌ಬುಕ್, ಟ್ವಿಟರ್‌ನಂಥ ತಾಣಗಳಿಗೂ ಈ ಕ್ಲಬ್‌ಹೌಸ್ ಸ್ಪರ್ಧೆ ನೀಡುತ್ತಿದೆ.

ದೇಶದಲ್ಲಿ ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳು ಡಿಜಿಟಲ್ ನಿಯಮಗಳನ್ನು ಪಾಲಿಸಬೇಕೆ, ಬೇಡವೇ ಚರ್ಚೆ ನಡೆಯುತ್ತಿರುವಾಗಲೇ, ಕ್ಲಬ್ ಹೌಸ್ ಎಂಬ ಆಡಿಯೋ ಸೋಷಿಯಲ್ ನೆಟ್‌ವರ್ಕಿಂಗ್ ಆಪ್, ಕೋಟ್ಯಂತರ ಬಳಕೆದಾರರನ್ನು ಸೆಳೆದುಕೊಂಡಿದೆ.

ಬೆಂಗಳೂರು ಮಟ್ಟಿಗೆ ಕ್ಲಬ್‌ಹೌಸ್ ಮಾತ್ರ ಹೊಸ ಸೆನ್ಸೇಷನ್. ಅತಿ ಕಡಿಮೆ ಅವಧಿಯಲ್ಲಿ ಕೋಟ್ಯಂತರ ಬಳಕೆದಾರರು ಕ್ಲಬ್‌ಹೌಸ್ ಸೇರಿದ್ದಾರೆ. ಫೇಸ್‌ಬುಕ್, ಟ್ವಿಟರ್ ಖಾಲಿ ಸೈಟ್‌ಗಳಾಗುತ್ತಿದ್ದು, ಕ್ಲಬ್‌ಹೌಸ್ ಹೌಸ್ ಫುಲ್ ಆಗುತ್ತಿದೆ. ಆಡಿಯೋ ವೇದಿಕೆಯಾಗಿರುವ ಈ ಆಪ್‌ನಲ್ಲಿರುವ ಚಾಟ್ ರೂಮ್‌ಗಳಲ್ಲಿ ಎಷ್ಟು ಬೇಕಾದರೂ ಜನರು ಭಾಗವಹಿಸಬಹುದು. ವಿಚಾರ ಸಮೃದ್ಧ ಚರ್ಚೆಗಳನ್ನು ಮಾಡಬಹುದು. ಹಾಡು ಹೇಳೋಣ ಬನ್ನಿಯಂಥ ಹರಟೆಗಳನ್ನು ಹೊಡೆಯಬಹುದು ಇಲ್ಲಿ.

ಆ್ಯಪ್ಸ್ ಸಹಾಯದಿಂದ ಹೋಮ್‌ವರ್ಕ್, ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಮಾಹಿತಿ!

ಇದು ಇನ್ವೈಟ್ ಓನ್ಲೀ ಆಪ್ ಸೋಷಿಯಲ್ ಆಡಿಯೋ ಆಪ್ ಆಗಿದ್ದು, 2020ರಲ್ಲಿ ಐಫೋನ್ ಬಳಕೆದಾರರಿಗೆ ಮಾತ್ರವೇ ಈ ಆಪ್ ಲಾಂಚ್ ಮಾಡಲಾಗಿತ್ತು. ಈಗ ಆಂಡ್ರಾಯ್ಡ್ ಸಾಧನಗಳಲ್ಲೂ ಈ ಆಪ್ ಲಭ್ಯವಿದೆ. 

ಕ್ಲಬ್ ಹೌಸ್ ಎಂಬ ಆಫ್ ವಾಯ್ಸ್ ಆಧಾರಿತ ಸೋಷಿಯಲ್ ಮೀಡಿಯಾ app ಆಗಿದೆ. ಈ ಮೊದಲು ಈ app ಐಫೋನ್ ಬಳಕೆದಾರರಿಗೆ ಮಾತ್ರವೇ ಲಭ್ಯವಿತ್ತು. ಈಗ ಆಂಡ್ರಾಯ್ಡ್ ಬಳಕೆದಾರರಿಗೂ ಸಿಗುತ್ತಿದೆ. ಕ್ಲಬ್‌ಹೌಸ್ ಎಂಬುದು ಆಡಿಯೋ ಸರ್ವರ್ ರೀತಿಯಂಥದ್ದು, ನೀವು 5,000 ಬಳಕೆದಾರರವರೆಗೂ ವಿಸ್ತರಿಸಬಹುದು. ಒಮ್ಮೆ ಬಳಕೆದಾರರು ಇದರೊಳಗೆ ಪ್ರವೇಶ ಪಡೆದುಕೊಂಡರೆ, ಬಳಕೆದಾರರು ರೂಮ್ಸ್‌ ಹೋಗಬಹುದು. ನಿಮ್ಮ ಆಸಕ್ತಿಗೆ ಅನುಗುಣವಾಗಿ ನೀವು ಯಾವುದೇ ರೂಮ್ಸ್‌ಗೆ ಹೋಗಿ ಅಲ್ಲಿ ನಡೆಯುವ ಚರ್ಚೆಯಲ್ಲಿ ಕೇಳಬಹುದು, ಇಲ್ಲವೇ ಭಾಗವಹಿಸಬುಹದು. 

ಈ ಕ್ಲಬ್‌ಹೌಸ್‌ಗೆ ನೇರವಾಗಿ ಸೇರಲಾಗುವುದಿಲ್ಲ. ಈಗಾಗಲೇ ಕ್ಲಬ್ ಹೌಸ್ ಬಳಸುತ್ತಿರುವ ಬಳಕೆದಾರರು ನಿಮ್ಮನ್ನು ಇನ್ವೈಟ್‌ ಮಾಡಬೇಕು. ಆಗ ನೀವು ನಿಮ್ಮ ಖಾತೆಯನ್ನು ತೆರೆಯಬಹುದು. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಿಂದ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಕತೆಗಳನ್ನು, ವಿಚಾರ ವಿನಿಮಯ, ಸ್ನೇಹ ಸಂಪಾದನೆ, ಹೊಸ ವ್ಯಕ್ತಿಗಳನ್ನು ಈ ಮೂಲಕ ಭೇಟಿ ಮಾಡಬಹುದು.

ಟಿಕ್ ಟಾಕ್ ನಿಷೇಧ ತೆರವು ಮಾಡಿದ ಅಮೆರಿಕ, ಭಾರತದಲ್ಲೂ ರದ್ದಾಗುತ್ತಾ?

ಒಮ್ಮೆ ನೀವು ಕ್ಲಬ್‌ಹೌಸ್‌ನಲ್ಲಿ ಖಾತೆ ತೆರೆದು ಪ್ರವೇಶ ಪಡೆಯಲು ಸಾಧ್ಯವಾದರೆ, ಈಗಾಗಲೇ ಅಲ್ಲಿರುವ ಜನರನ್ನು, ಸೆಲೆಬ್ರಿಟಿಗಳನ್ನು ನೀವು ಫಾಲೋ ಮಾಡಬಹುದು. ಅಥವಾ ಕ್ಲಬ್, ಅಥವಾ ನಿರ್ದಿಷ್ಟ ವಿಷಯಗಳ್ನು ಮಾತನಾಡುವವರನ್ನು ನೀವು ಫಾಲೋ ಮಾಡಬಹುದು. ನೀವು ಯಾವುದೇ ರೂಮ್ಸ್‌ಗೆ ಎಂಟ್ರಿ ಪಡೆದ ತಕ್ಷಣವೇ ಫೋನ್ ಆಡಿಯೋ ಆಟೋಮ್ಯಾಟಿಕ್ ಆಗಿ ಆನ್ ಆಗುತ್ತದೆ. ಆಗ ಈ ರೂಮ್‌ನಲ್ಲಿ ಮಾತನಾಡುತ್ತಿರುವವರ ಧ್ವನಿ ನಿಮಗೆ ಕೇಳಿಸುತ್ತದೆ. 

ಯಾರು ರೂಮ್ ಕ್ರಿಯೆಟ್ ಮಾಡಿರುತ್ತಾರೋ ಅವರೇ ಆ ರೂಮ್‌ ಅಂತಿಮ ನಿರ್ಧಾರ ಕೈಗೊಳ್ಳುವ ವ್ಯಕ್ತಿಯಾಗಿರುತ್ತಾರೆ. ಒಂದು ವೇಳೆ, ನೀವೇನಾದರೂ ಅಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದ್ದರೆ, ಹ್ಯಾಂಡ್ಸ್ ಅಪ್ ಐಕಾನ್ ಬಳಸಿಕೊಳ್ಳಬೇಕು. ಹಾಗಿದ್ದೂ, ಯಾರು ಮಾತನಾಡಬೇಕು ಎಂಬ ನಿರ್ಧಾರವನ್ನು ರೂಮ್ ಕ್ರಿಯೇಟ್ ಮಾಡಿವರೇ ಕೈಗೊಳ್ಳುತ್ತಾರೆ.

ಸದ್ಯಕ್ಕೆ ಭಾರತದಲ್ಲಂತೂ ಈ ಕ್ಲಬ್ ಹೌಸ್ ಆಫ್ ಹೆಚ್ಚು ಜನಪ್ರಿಯವಾಗುತ್ತದೆ. ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ. ಹೀಗಿದ್ದೂ, ಆ ಆಪ್ ಬಗ್ಗೆ ಒಂದಿಷ್ಟು ವಿವಾದಗಳಿವೆ, ಸುರಕ್ಷತೆಯ ಹಿನ್ನೆಲೆಯಲ್ಲಿ ಹಲವು ದೇಶಗಳು ಈ ಆಪ್ ಅನ್ನು ನಿಷೇಧಿಸಿವೆ. ಓಮನ್, ಜೋರ್ಡನ್ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಈ ಆಪ್ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿವೆ. 

ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

ಈ ಆಪ್‌ ಜನಪ್ರಿಯತೆಯನ್ನು ಕಂಡು ದಂಗಾಗಿರುವ ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳ ಇಂಥದ್ದೇ ಆಪ್ ಪರಿಚಯಸಲು ಮುಂದಾಗಿವೆ. ಫೇಸ್‌ಬುಕ್, ಟ್ವಿಟರ್, ಟ್ವಿಟರ್, ಡಿಸ್ಕಾರ್ಡ್, ರೆಡಿಟ್, ಸ್ಲ್ಯಾಕ್ ನಂಥ ಆಪ್‌ಗಳು ಧ್ವನಿಯಾಧರಿತ ಸೇವೆ ನೀಡಲು ಯೋಜಿಸುತ್ತಿವೆ.