Asianet Suvarna News Asianet Suvarna News

ಮೋದಿ, ಶಾ ಕೋಟೆಗೆ ಕೇಜ್ರೀ ಲಗ್ಗೆ: ಮಹತ್ವದ ಘೋಷಣೆ ಮಾಡಿದ AAP!

* ಮೋದಿ, ಅಮಿತ್ ಶಾ ಭದ್ರಕೋಟೆ ಗುಜರಾತ್‌ಗೆ ಆಮ್‌ ಆದ್ಮಿ ಎಂಟ್ರಿ

* ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ ಕೇಜ್ರೀವಾಲ್

* ಎಲ್ಲಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಆಮ್‌ ಆದ್ಮಿ ಪಕ್ಷ

AAP To Contest All Seats In Gujarat Next Year Popular Anchor Joins Team pod
Author
Bangalore, First Published Jun 14, 2021, 3:43 PM IST

ಅಹಮದಾಬಾದ್(ಜೂ.14): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತ್ತೊಂದು ಬಾರಿ ದೆಹಲಿಯಿಂದ ಹೊರಗೆ ಪಕ್ಷ ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆ ಸೋಮವಾರ ಮಹತ್ವದ ನಿರ್ಧಾರ ಪ್ರಕಟಿಸಿದ ಕೇಜ್ರೀವಾಲ್ 2022ರ ಗುಜರಾಥ್ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಇಲ್ಲಿನ ಎಲ್ಲಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದಿದ್ದಾರೆ.

ಇಂದು ಗುಜರಾತ್‌ನ ಕೆಟ್ಟ ಪರಿಸ್ಥಿತಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯೇ ಕಾರಣ. ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿದೆ. ಆದರೆ ಎರಡು ಪಕ್ಷಗಳ ಸ್ನೇಹವೂ ಇಲ್ಲಿ 27 ವರ್ಷದಿಂದ ನಡೆದುಕೊಂಡು ಬಂದಿದೆ. ಇಲ್ಲಿ ಕಾಂಗ್ರೆಸ್‌ ಬಿಜೆಪಿಯ ಜೇಬಿನೊಳಗಿದೆ ಎನ್ನಲಾಗುತ್ತದೆ ಎಂದಿದ್ದಾರೆ.

ಗುಜರಾತ್‌ನಲ್ಲಿ ಉಚಿತ ವಿದ್ಯುತ್ ಸೌಲಭ್ಯ ಏಕಿಲ್ಲ?

ಚುನಾವಣೆ ವಿಚಾರವಾಗಿ ಮತ್ತಷ್ಟು ಮಾಹಿತಿ ನೀಡಿದ ಅರವಿಂದ ಕೇಜ್ರೀವಾಲ್ ದೆಹಲಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯವಿದೆ, ಆದರೆ ನಮ್ಮಲ್ಲೇಕೆ ಇಲ್ಲ ಎಂದು ಗುಜರಾತಿಗರು ಯೋಚಿಸುತ್ತಿದ್ದಾರೆ. ಹೀಗಾಗೇ ಇಲ್ಲಿ ಕಳೆದ 70 ವರ್ಷದಿಂದ ಆಸ್ಪತ್ರೆ ಕಂಡೀಷನ್ ಕೂಡಾ ಬದಲಾಗಿಲ್ಲ ಎಂದಿದ್ದಾರೆ.

ಗುಜರಾತ್ ಪ್ರವಾಸದಲ್ಲಿ ಕೇಜ್ರೀ

ಆಮ್‌ ಆದ್ಮಿ ಪಕ್ಷ ಈಗಾಗಲೇ ಗುಜರಾತ್ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಪಕ್ಷ ಇಲ್ಲಿನ ಪ್ರಾದೇಶಿಕ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನಿಡಿತ್ತು. ಈ ನಿಟ್ಟಿನಲ್ಲಿ ಸೋಮವಾರ ಕೇಜ್ರೀವಾಲ್ ಗುಜರಾತ್ ಪ್ರವಾಸ ಜಕೈಗೊಂಡು, ಇಲ್ಲಿನ AAP ಪ್ರಾದೇಶಿಕ ಕಚೇರಿ ಉದ್ಘಾಟನೆ ಮಾಡಿದ್ದಾರೆ.

Follow Us:
Download App:
  • android
  • ios