Asianet Suvarna News Asianet Suvarna News

IPL ಸಿಕ್ಸರ್‌ನಲ್ಲಿ ಮಿಂದೆದ್ದ ಫ್ಯಾನ್ಸ್, ಸಾಲಗಾರರಿಗೆ ಸಿಗುತ್ತಾ ಗುಡ್‌ ನ್ಯೂಸ್?ಸೆ.29ರ ಟಾಪ್ 10 ಸುದ್ದಿ!

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ ನೀಡುವ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಮೋಟಾರು ವಾಹನ ತಿದ್ದುಪಡಿ ಮೂಲಕ ಇದೀಗ ಹೊಸ ನಿಯಮ ಜಾರಿಯಾಗುತ್ತಿದೆ. ಡ್ರಗ್ ಕೇಸ್‌ನಲ್ಲಿ ಜೈಲು ಸೇರಿರುವ ಸಂಜನಾ ಖತರ್ನಾಕ್ ಕೆಲಸ ಮಾಡಿದ್ಧಾರೆ. ಐಪಿಎಲ್ ಟೂರ್ನಿಯಲ್ಲಿ ಸಿಕ್ಸರ್ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖಷಿಯಾಗಿದ್ದಾರೆ. RR ನಗರ ಅಭ್ಯರ್ಥಿ ಆಯ್ಕೆ ಕುತೂಹಲ,ಕಂಗನಾ ಮನೆ ಧ್ವಂಸಗೈದ ಬಿಎಂಸಿ ನಡೆ ಬಗ್ಗೆ ಅನುಮಾನ ಸೇರಿದಂತೆ ಸೆಪ್ಟೆಂಬರ್ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

IPL 2020 Six to Emi Moratorium top 10 news of September 29 ckm
Author
Bengaluru, First Published Sep 29, 2020, 4:47 PM IST

ನಮ್ಮ ನೌಕಾಶಕ್ತಿ ಅನಾವರಣಕ್ಕೆ ಯುಎಸ್‌, ಜಪಾನ್‌ ಸಾಥ್; ಥರಗುಟ್ಟಿದ ಚೀನಾ!...

IPL 2020 Six to Emi Moratorium top 10 news of September 29 ckm

ಜಪಾನ್ ಮತ್ತು ಅಮೆರಿಕದೊಂದಿಗೆ ಸೇರಿ ಭಾರತೀಯ ನೌಕಾದಳ ನವೆಂಬರ್‌ನಲ್ಲಿ ತರಬೇತಿ ಪ್ರದರ್ಶನ ನೀಡಲಿದೆ.  ಆಸ್ಟ್ರೇಲಿಯಾ ಸಹ ನೌಕಾ ವ್ಯಾಯಾಮದ ಒಂದು ಭಾಗವಾಗಲಿದೆ.  ಚೀನಾ ಮತ್ತು ಪ್ರಪಂಚಕ್ಕೆ ಭಾರತದ ನೌಕಾಶಕ್ತಿಯ  ದರ್ಶನವಾಗಲಿದೆ. 

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ? ಸಾಲಗಾರರಿಗೆ ಸಿಗುತ್ತಾ ಗುಡ್‌ ನ್ಯೂಸ್?...

IPL 2020 Six to Emi Moratorium top 10 news of September 29 ckm

ಕೊರೋನಾ ವೈರಸ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಲದ ಮಾಸಿಕ ಕಂತು (ಇಎಂಐ) ಪಾವತಿಯಿಂದ ಸಾಲಗಾರರಿಗೆ ವಿನಾಯ್ತಿ ನೀಡಿದ್ದ ಆರು ತಿಂಗಳ ಅವಧಿಗೆ ಬಡ್ಡಿ ಮತ್ತು ಚಕ್ರಬಡ್ಡಿ ವಿಧಿಸುವ ಅಥವಾ ವಿಧಿಸದಿರುವ ನೀಡುವ ಕುರಿತು 2-3 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ವಿಷಯವನ್ನು ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ಸೋಮವಾರ ತಿಳಿಸಿದೆ.

24 ಗಂಟೆಗಳ ಭೂಕಂಪಕ್ಕೆ ಬೆಚ್ಚಿದ ಲಡಾಖ್!...

IPL 2020 Six to Emi Moratorium top 10 news of September 29 ckm

ಲಡಾಖ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಲಘು ಭೂಕಂಪ ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ. ಭೂಕಂಪ ನಡೆದ 24 ಗಂಟೆಗಳ ವರೆಗೂ ಕಂಪನದ ಅನುಭವವಾಗಿದ್ದಾಗಿ ಸ್ಥಳೀಯರು ಹೇಳಿದ್ದಾರೆ.

ಐಪಿಎಲ್ 2020: ಸಿಕ್ಸರ್‌ಗಳ ಸುರಿಮಳೆ; 10 ಪಂದ್ಯಗಳಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳೆಷ್ಟು..?...

IPL 2020 Six to Emi Moratorium top 10 news of September 29 ckm

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಾರಂಭಿಸಿದ್ದಾರೆ. ಯುಎಇಯ ಮೂರು ಮೈದಾನಗಳು ಮಿಲಿಯನ್ ಡಾಲರ್ ಟೂರ್ನಿಗೆ ಆತಿಥ್ಯ ವಹಿಸಿದ್ದು ಇದುವರೆಗೂ 10 ಪಂದ್ಯಗಳು ಜರುಗಿವೆ. 

ಕಂಗನಾ ಮನೆ ಧ್ವಂಸಗೈದ ಬಿಎಂಸಿ ನಡೆ ಬಗ್ಗೆ ಸಾಕಷ್ಟು ಅನುಮಾನ!...

IPL 2020 Six to Emi Moratorium top 10 news of September 29 ckm

ಕಂಗನಾ ರಾಣಾವತ್‌ಗೆ ಸೇರಿದ ಮನೆಯ ಅಕ್ರಮ ಭಾಗ ಧ್ವಂಸ ಪ್ರಕರಣದಲ್ಲಿ ಬೃಹನ್ಮುಂಬೈ ಪಾಲಿಕೆಯ ನಡೆಯನ್ನು ಬಾಂಬೆ ಹೈಕೋರ್ಟ್‌ ಮತ್ತೊಮ್ಮೆ ಬಲವಾಗಿ ಶಂಕಿಸಿದೆ.

ರಚಿತಾ ರಾಮ್ ಹೊಸ ಕ್ರಶ್: ನನ್ ಲಿಪ್ಸ್‌ ನೋಡಿ ಎಂದ ರಚ್ಚು...

IPL 2020 Six to Emi Moratorium top 10 news of September 29 ckm

ನಟಿ ರಚಿತಾ ರಾಮ್ ಮನಸು ಕದ್ದಿದ್ದಾನೆ ಈ ಚೆಲುವ. ನಟಿ ರಚ್ಚು ಹೊಸ ಕ್ರಶ್ ಅಂದ್ರೂ ತಪ್ಪಿಲ್ಲ. ನನ್ನ ಲಿಪ್ಸ್ ನೋಡಿ ಅಂತಿದ್ದಾರೆ ಬುಲ್ ಬುಲ್ ರಚಿತಾ. ಇತ್ತೀಚೆಗೆ ನಟಿ ರಚಿತಾ ರಾಮ್ ಹೊಸ ಲಿಪ್‌ಸ್ಟಿಕ್ ತಗೊಂಡಿದ್ದಾರೆ.

ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರಗಳಿಗೆ ಹೊಸ ನಿಯಮ; ಅ.1 ರಿಂದ ಜಾರಿ!...

IPL 2020 Six to Emi Moratorium top 10 news of September 29 ckm

ಮೋಟಾರು ವಾಹನ ತಿದ್ದುಪಡಿ ಮೂಲಕ ಇದೀಗ ಹೊಸ ನಿಯಮ ಜಾರಿಯಾಗುತ್ತಿದೆ. ಅಕ್ಟೋಬರ್ 1 ರಿಂದ ನೂತನ ನಿಯಮ ಜಾರಿಯಾಗುತ್ತಿದ್ದು, ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರದ ನಿಯಮದಲ್ಲಿ ಕೆಲ ಬದಲಾವಣೆಯಾಗಿದೆ.

ಗರಿಗೆದರಿದ ರಾಜಕೀಯ ಚಟುವಟಿಕೆ: RR ನಗರ ಅಭ್ಯರ್ಥಿ ಆಯ್ಕೆ ಕುತೂಹಲ...

IPL 2020 Six to Emi Moratorium top 10 news of September 29 ckm

ಬೆಂಗಳೂರಿನ RR ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಪ್ರಟಕವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯ ಚಟುವಟಿಕೆಗಳು  ಗರಿಗೆದರಿವೆ. ಅಲ್ಲದೇ ಟಿಕೆಟ್ ಫೈಟ್‌ ಸಹ ಶುರುವಾಗಿದೆ. 

ಡವ್ ರಾಣಿ ಸಂಜನಾ ಡ್ರಗ್ಸ್ ಮಾತ್ರವಲ್ಲ, ಈ ಖತರ್ನಾಕ್ ಕೆಲಸವನ್ನೂ ಮಾಡ್ತಿದ್ರಂತೆ..!...

IPL 2020 Six to Emi Moratorium top 10 news of September 29 ckm

ಡ್ರಗ್ ಕೇಸ್‌ನಲ್ಲಿ ಜೈಲು ಸೇರಿರುವ ಸಂಜನಾ ಖತರ್ನಾಕ್ ಕೆಲಸ ಮಾಡಿದ್ಧಾರೆ. ಈಕೆಯ ಮೊಬೈಲ್ ಚಾಟ್ ಟ್ಯ್ರಾಕ್ ಮಾಡುವಾಗ ಕೆಲವೊಂದು ವಿಚಾರ ಬಹಿರಂಗವಾಗಿದೆ. 

ಬೆಳಿಗ್ಗೆ ಸ್ಪಾದಲ್ಲಿ ಕೆಲಸ, ರಾತ್ರಿ ಡ್ರಗ್ಸ್ ಪಾರ್ಟಿ; ಪೆಡ್ಲರ್ ಕಿಶೋರ್ ಶೆಟ್ಟಿ ಸ್ನೇಹಿತೆ ಅರೆಸ್ಟ್...

IPL 2020 Six to Emi Moratorium top 10 news of September 29 ckm

ಡ್ರಗ್ಸ್ ಜಾಲದಲ್ಲಿ ನಶೆ ರಾಣಿಯೊಬ್ಬರು ಅರೆಸ್ಟ್ ಆಗಿದ್ದಾರೆ. ಪೆಡ್ಲರ್ ಕಿಶೋರ್ ಶೆಟ್ಟಿ ಸ್ನೇಹಿತೆ ಆಸ್ಕಾರನ್ನು ಬಂಧಿಸಲಾಗಿದೆ. ಈಕೆ ಮಣಿಪುರ ಮೂಲದವಳು. 

Follow Us:
Download App:
  • android
  • ios