ಮುಂಬೈ(ಸೆ.29): ನಟಿ ಕಂಗನಾ ರಾಣಾವತ್‌ಗೆ ಸೇರಿದ ಮನೆಯ ಅಕ್ರಮ ಭಾಗ ಧ್ವಂಸ ಪ್ರಕರಣದಲ್ಲಿ ಬೃಹನ್ಮುಂಬೈ ಪಾಲಿಕೆಯ ನಡೆಯನ್ನು ಬಾಂಬೆ ಹೈಕೋರ್ಟ್‌ ಮತ್ತೊಮ್ಮೆ ಬಲವಾಗಿ ಶಂಕಿಸಿದೆ.

ಮನೆ ಧ್ವಂಸ ಪ್ರಶ್ನಿಸಿ ಮತ್ತು ಅದಕ್ಕೆ 2 ಕೋಟಿ ಪರಿಹಾರ ಕೋರಿ ಕಂಗನಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರವೂ ಮುಂದುವರೆಸಿದ ನ್ಯಾಯಾಲಯ, ಪಾಲಿಕೆಯ ಈ ನಡವಳಿಕೆ ಅನುಮಾನಸ್ಪದವಾಗಿದೆ ಎಂದು ಹೇಳಿದೆ.

ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

ಮನೆ ಧ್ವಂಸ ವೇಳೆ ಬಿಎಂಸಿ ಪಾಲಿಸುವ ಕೆಲ ನಿಯಮಗಳನ್ನು ಈ ಪ್ರಕರಣದಲ್ಲಿ ಮುರಿಯಲಾಗಿದೆ ಎಂದು ಕೋರ್ಟ್‌ ಹೇಳಿದೆ. ಅಕ್ರಮವಾಗಿ ನಿರ್ಮಾಣ ಮಾಡಿದ ಕಟ್ಟಡಗಳ ಧ್ವಂಸಕ್ಕೂ ಮುನ್ನ ಫೋಟೋ ಸಹಿತ ನೀಡಲಾಗುವ ಕೆಲಸ ತಡೆ ನೋಟಿಸು, ಧ್ವಂಸಕ್ಕೂ ಮುನ್ನ ಕಾಲವಕಾಶ ನೀಡುವುದು ಮುಂತಾದ ಪದ್ಧತಿಯನ್ನು ಈ ಪ್ರಕರಣದಲ್ಲಿ ಪಾಲಿಸಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ ಎಂದು ಕೋರ್ಟ್‌ ಹೇಳಿದೆ.