ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ಮಾಡೋರಿಗೆ ಎಚ್ಚರಿಕೆ… ಕಾಡುತ್ತೆ ಗೋನೋರಿಯ ಎಂಬ ಮಹಾ ಸೋಂಕು!
ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ಮಾಡೋದರಿಂದ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹಲವು ರೋಗಗಳು ಕಾಡುತ್ತೆ, ಅದರಲ್ಲಿ ಒಂದು ಗೋನೋರಿಯ ಎನ್ನುವ ಲೈಂಗಿಕ ಕಾಯಿಲೆ. ಈ ಸೋಂಕಿಗೆ ತುತ್ತಾದ್ರೆ ನರಕ ಖಂಡಿತಾ.
ಲೈಂಗಿಕವಾಗಿ ಹರಡುವ ರೋಗಗಳು (sexual disease) ಸಹ ಒಂದು ರೀತಿಯ ಸೋಂಕಾಗಿದ್ದು, ರೋಗಾಣುಗಳ ಮೂಲಕ ಹರಡುತ್ತವೆ ಮತ್ತು ಈ ಸೋಂಕುಗಳ ಹರಡುವಿಕೆಗೆ ಕಾರಣ ಲೈಂಗಿಕ ಸಂಭೋಗ. ಈ ಎಲ್ಲಾ ಸೋಂಕುಗಳು ಮತ್ತು ರೋಗಗಳಲ್ಲಿ, ಕೆಲವು ತ್ವರಿತವಾಗಿ ಗುಣಮುಖವಾಗುತ್ತವೆ ಮತ್ತು ಅವುಗಳಿಗೆ ಚಿಕಿತ್ಸೆ ನೀಡಬಹುದು, ಆದರೆ ಕೆಲವು ಲೈಂಗಿಕವಾಗಿ ಹರಡುವ ರೋಗಗಳು ತುಂಬಾ ಅಪಾಯಕಾರಿ ಮತ್ತು ಗಂಭೀರವಾಗಿವೆ, ಅವುಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಲ್ಲ ಸಾಧ್ಯವಾಗೋದಿಲ್ಲ.
ಅಂತಹ ರೋಗಗಳಲ್ಲಿ ಒಂದು ಗೋನೋರಿಯ (Gonorrhea). 2018 ರ ಆರಂಭದಲ್ಲಿ, ಸೂಪರ್ ಗೊನೊರಿಯಾ ತಳಿಗಳು (Cultivars) ಅನೇಕ ದೇಶಗಳಲ್ಲಿ ಕಂಡುಬಂದವು. ಮೊದಲಿಗೆ ಇದು ಕಂಡು ಬಂದಿದ್ದು, ವಿದೇಶದಲ್ಲಿ ಸೆಕ್ಸ್ ಕಾರ್ಯಕಾರ್ತೆ ಜೊತೆ ಲೈಂಗಿಕ ಕ್ರಿಯೆ ಮಾಡಿ ಬಂದ ಒಬ್ಬ ವ್ಯಕ್ತಿಯಲ್ಲಿ. ಆತ ವಾಪಾಸ್ ಭಾರತಕ್ಕೆ ಬಂದ ನಂತರ, ಮೂತ್ರ ವಿಸರ್ಜನೆ ಮಾಡೋವಾಗ ನೋವು, ರಕ್ತಸ್ರಾವ, ಹೀಗೆ ಹಲವು ಸಮಸ್ಯೆಗಳು ಕಂಡು ಬಂದಿದೆ. ಏನಿದು ಗೊನೊರಿಯಾ ಅನ್ನೋದನ್ನ ನೋಡೋಣ.
ಗೊನೊರಿಯಾ ಎಂದರೇನು?
ಗೊನೊರಿಯಾ ಲೈಂಗಿಕವಾಗಿ ಹರಡುವ ಒಂದು ಸೋಂಕು. ಇದು ನೈಸೆರಿಯಾ ಗೊನೊರಿಯಾ ಅಥವಾ ಗೊನೊಕೊಕಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದನ್ನು ದಿ ಕ್ಲಾಪ್ ಎಂದೂ ಕೂಡ ಕರೆಯುತ್ತಾರೆ. ಇದು ಗಂಡು ಮತ್ತು ಹೆಣ್ಣಿನ ನಡುವೆ ಲೈಂಗಿಕ ಕ್ರಿಯೆಯಿಂದ ಈ ಸೋಂಕು ಹರಡುತ್ತದೆ.
ಗೊನೊರಿಯಾ ಲೈಂಗಿಕವಾಗಿ ಹರಡುವ ಸೋಂಕು ಆಗಿದ್ದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದರಿಂದ ಸೋಂಕಿಗೆ ಒಳಗಾಗಬಹುದು. ಗೊನೊರಿಯಾ ಹೆಚ್ಚಾಗಿ ಮೂತ್ರನಾಳ, ಗುದನಾಳ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಇದು ಮಹಿಳೆಯರಲ್ಲಿ ಗರ್ಭಾಶಯ ಅಥವಾ ಗರ್ಭಕಂಠದ ಮೇಲೂ ಪರಿಣಾಮ ಬೀರಬಹುದು.
ಗೊನೊರಿಯಾ ಹೆಚ್ಚಾಗಿ ಯೋನಿ, ಮೌಖಿಕ ಅಥವಾ ಗುದ ಸಂಭೋಗದ ಮೂಲಕ ಹರಡುತ್ತದೆ ಮತ್ತು ಸೋಂಕಿತ ತಾಯಿಯಿಂದ ಮಗುವಿಗೆ ಹರಡಬಹುದು. ಮಕ್ಕಳಲ್ಲಿ ಗೊನೊರಿಯಾದಿಂದಾಗಿ, ಅದರ ಪರಿಣಾಮವು ಕಣ್ಣುಗಳ ಮೇಲೆ ಸಹ ಪರಿಣಾಮ ಬೀರುತ್ತದೆ.
ಗೊನೊರಿಯಾ ರೋಗದ ಲಕ್ಷಣಗಳು
ಅನೇಕ ಸಂದರ್ಭಗಳಲ್ಲಿ, ಗೊನೊರಿಯಾ ಸೋಂಕಿನ ಯಾವುದೇ ಲಕ್ಷಣಗಳು ಗೋಚರಿಸೋದಿಲ್ಲ. ಆದಾಗ್ಯೂ, ಇದರ ರೋಗಲಕ್ಷಣಗಳನ್ನು ನಿಮ್ಮ ದೇಹದ ವಿವಿಧ ಭಾಗಗಳಲ್ಲಿ ಕಾಣಬಹುದು, ಆದರೆ ಸಾಮಾನ್ಯವಾಗಿ ಅದರ ರೋಗಲಕ್ಷಣಗಳು ಜನನಾಂಗದಲ್ಲಿ ಕಂಡುಬರುತ್ತವೆ.
ಗೊನೊರಿಯಾದ ಮುಖ್ಯ ಲಕ್ಷಣಗಳು ಯೋನಿ ಮತ್ತು ಶಿಶ್ನದಿಂದ ಕಡು ಹಸಿರು ಅಥವಾ ಹಳದಿ ಸ್ರವಿಸುವಿಕೆ, ಮೂತ್ರ ವಿಸರ್ಜಿಸುವಾಗ ನೋವು ಕಾಣಿಸಿಕೊಳ್ಳವುದು. ಆ ಸಮಯದಲ್ಲಿ, ಮಹಿಳೆಯರಲ್ಲಿ ಯೋನಿ ಡಿಸ್ಚಾರ್ಜ್ ಹೆಚ್ಚಾಗಿರುತ್ತದೆ.
ಈ ರೋಗಲಕ್ಷಣಗಳು ಪುರುಷರಲ್ಲಿ ಕಾಣಿಸಿಕೊಳ್ಳುತ್ತವೆ
- ಮೂತ್ರ ವಿಸರ್ಜಿಸುವಾಗ ನೋವು
- ಖಾಸಗಿ ಭಾಗದಿಂದ ಕೀವು ತರಹದ ವಿಸರ್ಜನೆ
- ವೃಷಣಗಳ ಸುತ್ತ ನೋವು ಮತ್ತು ಊತ
ಈ ರೋಗಲಕ್ಷಣಗಳು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತವೆ
- ಅತಿಯಾದ ಯೋನಿ ವಿಸರ್ಜನೆ
- ಮೂತ್ರ ವಿಸರ್ಜಿಸುವಾಗ ನೋವು
- ಸಂಭೋಗದ ಸಮಯದಲ್ಲಿ ಯೋನಿ ರಕ್ತಸ್ರಾವ
- ಕಿಬ್ಬೊಟ್ಟೆ ಮತ್ತು ಪೆಲ್ವಿಕ್ ಫ್ಲೋರ್ ನೋವು
ದೇಹದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ರೋಗಲಕ್ಷಣಗಳು
ಗುದನಾಳ: ಗುದದ್ವಾರದಲ್ಲಿ ತುರಿಕೆ, ಗುದದ್ವಾರದಿಂದ ಕೀವು ತರಹದ ವಿಸರ್ಜನೆ ಮತ್ತು ರಕ್ತಸ್ರಾವ ಗೊನೊರಿಯಾದ ಲಕ್ಷಣಗಳಾಗಿವೆ.
ಕಣ್ಣುಗಳು: ಗೊನೊರಿಯಾದ ಲಕ್ಷಣಗಳು ಕಣ್ಣುಗಳ ಮೇಲೂ ಕಾಣಿಸಿಕೊಳ್ಳುತ್ತವೆ, ಇದರಿಂದಾಗಿ ಕಣ್ಣು ನೋವು, ಬೆಳಕಿಗೆ ಕಣ್ಣಿನ ಸೂಕ್ಷ್ಮತೆ ಮತ್ತು ಕಣ್ಣುಗಳಿಂದ ಕೀವು ವಿಸರ್ಜನೆ ಸೇರಿವೆ.
ಗಂಟಲು- ಈ ಕಾರಣದಿಂದಾಗಿ, ಗಂಟಲಿನಲ್ಲಿ ನೋವು ಮತ್ತು ಊತ ಉಂಟಾಗುತ್ತದೆ.
ಗೊನೊರಿಯಾಕ್ಕೆ ಕಾರಣಗಳು
ಲೈಂಗಿಕವಾಗಿ ಸಕ್ರಿಯವಾಗಿರುವ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಮತ್ತು ಇತರ ಪುರುಷರೊಂದಿಗೆ ಸಂಬಂಧ ಹೊಂದಿರುವ ಪುರುಷರು ಗೊನೊರಿಯಾಕ್ಕೆ ತುತ್ತಾಗುವ ಹೆಚ್ಚಿನ ಅಪಾಯದಲ್ಲಿದ್ದಾರೆ.
ಗೊನೊರಿಯಾ ಕೂಡ ಈ ಕಾರಣಗಳಿಂದ ಉಂಟಾಗುತ್ತದೆ
- ಹೊಸ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು
- ಅನೇಕ ಸಂಗಾತಿಗಳನ್ನು ಹೊಂದಿರುವ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರುವುದು.
- ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು.