ಸಿಂಗರ್ ಬಾದ್‌ಶಾ ರೆಸ್ಟೋರೆಂಟ್ ಸ್ಫೋಟದ ಹೊಣೆಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್!
ಮುಂಬೈ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಲವರ ನಿದ್ದಿಗೆಡಿಸಿದೆ. ಇದೀಗ ಸಿಂಗರ್ ಬಾದ್‌ಶಾ ಮಾಲೀಕತ್ವದ ಬಾರ್ ಅ್ಯಂಡ್ ರೆಸ್ಟೋರೆಂಟ್ ಪಕ್ಕದಲ್ಲಿ ನಡೆದ ಸ್ಫೋಟ ಪ್ರಕರಣದ ಹೊಣೆಯನ್ನೂ ಇದೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.
ಚಂಡಿಘಡ(ನ.26) ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಆತಂಕ ಹಲವರಲ್ಲಿ ಹೆಚ್ಚಾಗುತ್ತಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯರ ದಾಳಿ ಹೆಚ್ಚಾಗುತ್ತಿದೆ. ಮುಂಬೈನಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕ್ಕಿ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇದೀಗ ಮತ್ತೊಂದು ಪ್ರಕರಣದ ಹೊಣೆ ಹೊತ್ತುಕೊಂಡಿದೆ. ಬಾಲಿವುಡ್ ಸಿಂಗರ್, ರ್ಯಾಪರ್ ಬಾದ್‌ಶಾ ಒಡೆತದನ ರೆಸ್ಟೋರೆಂಟ್ ಹೊರಭಾಗದಲ್ಲಿ ನಡೆದ ಸ್ಫೋಟ ಪ್ರಕರಣದ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾನೆ.
ಚಂಡೀಘಡದಲ್ಲಿರುವ ಬಾದ್ ಶಾ ಒಡೆತದನ ಎರಡು ರೆಸ್ಟೋರೆಂಟ್ ಹೊರಭಾಗದಲ್ಲಿ ಸ್ಫೋಟ ಸಂಭವಿಸಿತ್ತು. ಮಂಗವಾಳ ಮುಂಜಾನೆ ಇಬ್ಬರು ಅಪರಿಚಿತರು ಆಗಮಿಸಿ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಈ ಬಾಂಬ್ ಸ್ಫೋಟಗೊಂಡಿದೆ. ಅದೃಷ್ಠವಶಾತ್ ಯಾರೂ ಗಾಯಗೊಂಡಿಲ್ಲ. ರೆಸ್ಟೋರೆಂಟ್ ಸುತ್ತ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟದ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಗೋಲ್ಡಿ ಬ್ರಾರ್ ಈ ಸ್ಫೋಟದ ಹೊಣೆ ಹೊತ್ತುಕೊಂಡ ಪೋಸ್ಟ್ ವೈರಲ್ ಆಗಿದೆ.
ಜೈಲಿನಿಂದ ಹೊರಬರ್ತಿರೋ ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿ ಭೇಟಿಗೆ ಹೋಗಿದ್ರಾ? ವಿಡಿಯೋ ಅಸಲಿಯತ್ತೇನು?
ಲಾರೆನ್ಸ್ ಬಿಷ್ಣೋಯ್ ಗ್ರೂಪ್ ಸದಸ್ಯರಾದ ನಾನು ಗೋಲ್ಡಿ ಬ್ರಾರ್ ಹಾಗೂ ರೋಹಿತ್ ಗೊದರಾ ಚಂಡಿಘಡದಲ್ಲಿ ನಡೆದ ಎರಡು ಸ್ಫೋಟದ ರೂವಾರಿ. ಈ ಸ್ಫೋಟವನ್ನು ನಾವು ಮಾಡಿದ್ದೇವೆ. ಬಾದ್ ಶಾ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಸಂಭವಿಸಿದೆ. ನಮ್ಮ ಕರೆಯನ್ನು ನಿರ್ಲಕ್ಷಿಸಿದರೆ, ಕರೆಯ ರಿಂಗ್ ಕೇಳಿಸಿದಿರುವ ಮಾಲೀಕರಿಗೆ ಈ ಸ್ಫೋಟದ ಶಬ್ಧ ಕೇಳಿಸಿರುತ್ತದೆ ಎಂದು ಗೋಲ್ಡಿ ಬ್ರಾರ್ ಸಂದೇಶ ರವಾನಿಸಿದ್ದಾನೆ.
ಸ್ಫೋಟದ ಸ್ಥಳ ಸುತ್ತುವರಿದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫೊರೆನ್ಸಿಕ್ ತಜ್ಞರು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಣೆಹೊತ್ತುಕೊಂಡ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆದರೆ ಹಲವರಿಗೆ ಇದೀಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರ ಆತಂಕ ಕಾಡುತ್ತಿದೆ.
ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ಕಿ ಹತ್ಯೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದೇಶಾದ್ಯಂತ ಮಾತ್ರವಲ್ಲ ವಿದೇಶದಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯರು ಬಾಬಾ ಸಿದ್ದಿಕ್ಕಿಯನ್ನು ಪುತ್ರನ ಕಚೇರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಾಬಾ ಸಿದ್ದಿಕಿ ಹೆಚ್ಚಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ನೆರವು ನೀಡುತ್ತಿದ್ದಾರೆ ಅನ್ನೋ ಆರೋಪಕ್ಕೆ ಈ ಹತ್ಯೆ ನಡೆದಿತ್ತು ಎಂದು ಬಿಷ್ಣೋಯ್ ಗ್ಯಾಂಗ್ ಹೇಳಿತ್ತು. ಕೃಷ್ಣಮೃಗ ಬೇಟೆ ಆರೋಪಿ ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯದ ಕ್ಷಮೆ ಯಾಚಿಸಬೇಕು ಅನ್ನೋ ಆಗ್ರಹಕ್ಕೆ ಸೊಪ್ಪು ಹಾಕದ ಕಾರಣ ಸಲ್ಮಾನ್ ವಿರುದ್ದ ವೈರತ್ವ ಮತ್ತಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಬಾಬಾ ಸಿದ್ದಿಕಿ ಹತ್ಯೆ ಹಾಗೂ ಸಲ್ಮಾನ್ ಹತ್ಯೆಗೆ ಪ್ರಯತ್ನಗಳು ಬಾಲಿವುಡ್ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು.
ಇದಕ್ಕೂ ಮೊದಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಾಂಗ್ರೆಸ್ ನಾಯಕ, ಸಿಂಗರ್ ಸಿಧು ಮೂಸೆವಾಲ ಹತ್ಯೆ ಮಾಡಿತ್ತು. ಸಿಧು ಮೂಸೆವಾಲ ಖಲಿಸ್ತಾನಿ ಉಗ್ರ ಬಿಂದ್ರನ್‌ವಾಲೆಗೆ ಪರ ಹಾಗೂ ಖಲಿಸ್ತಾನ ಪರ ಇದ್ದಾರೆ ಅನ್ನೋ ಕಾರಣ ನೀಡಿ ಈ ಹತ್ಯೆ ಮಾಡಲಾಗಿತ್ತು.