ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರಗಳಿಗೆ ಹೊಸ ನಿಯಮ; ಅ.1 ರಿಂದ ಜಾರಿ!
ಮೋಟಾರು ವಾಹನ ತಿದ್ದುಪಡಿ ಮೂಲಕ ಇದೀಗ ಹೊಸ ನಿಯಮ ಜಾರಿಯಾಗುತ್ತಿದೆ. ಅಕ್ಟೋಬರ್ 1 ರಿಂದ ನೂತನ ನಿಯಮ ಜಾರಿಯಾಗುತ್ತಿದ್ದು, ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್, ವಿಮೆ ಸೇರಿದಂತೆ ವಾಹನ ದಾಖಲೆ ಪತ್ರದ ನಿಯಮದಲ್ಲಿ ಕೆಲ ಬದಲಾವಣೆಯಾಗಿದೆ.
ನವದೆಹಲಿ(ಸೆ.29): ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ 1989ಕ್ಕೆ ತಿದ್ದು ಮಾಡಿದೆ. ಈ ಮೂಲಕ ಅಕ್ಟೋಬರ್ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ವಾಹನ ಸವಾರರು ನೂತನ ನಿಯಮದ ಕುರಿತು ತಿಳಿಯುವುದು ಅಗತ್ಯವಾಗಿದೆ. ಅಕ್ಟೋಬರ್ 1 ರಿಂದ ವಾಹನ ಸವಾರರು ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕಾಗಿದೆ.
2 ಆ್ಯಪ್ ನಿಮ್ಮಲ್ಲಿದ್ದರೆ, ದುಬಾರಿ ದಂಡದಿಂದ ಬಚಾವ್!.
ಅಕ್ಟೋಬರ್ 1 ರಿಂದ ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಾಹನ ದಾಖಲೆಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿದೆ. ಕೇಂದ್ರ ಸರ್ಕಾರದ ಸೂಚಿವಿ ಡಿಜಿ ಲಾಕರ್ ಸೇರಿದಂತೆ ಅಧೀಕೃತ ಆ್ಯಪ್ ಮೂಲಕ ದೃಢೀಕರಿಸಿದ ಇ ದಾಖಲೆ ಪತ್ರ ಶೇಖರಿಸಿಕೊಟ್ಟುಕೊಂಡರೆ, ದಾಖಲೆಗಳ ಪ್ರತಿಗಳನ್ನು ಇಟ್ಟುಕೊಳ್ಳಬೇಕಿಲ್ಲ.
ವಾಹನ ಸವಾರರಿಗೆ ಸಿಹಿ ಸುದ್ದಿ: ಡಿಜಿಲಾಕರ್ ಅಧಿಕೃತಗೊಳಿಸಿದ ಕೇಂದ್ರ!.
ಅಕ್ಟೋಬರ್ 1 ರಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್ ಹಾಗೂ ಏಕರೂಪದ ವಾಹನ ರಿಜಿಸ್ಟ್ರೇಶನ್ ನಿಯಮ ಜಾರಿಯಾಗುತ್ತಿದೆ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಶನ್ ಕಾರ್ಡ್‌ನಲ್ಲಿ ಹೊಸ ಚಿಪ್ ಅಳವಡಿಸಲಾಗುತ್ತಿದೆ. ಈ ಮೂಲಕ ಪೊಲೀಸರಿಗೆ ಕ್ಯೂಆರ್ ಕೋಡ್ ಹಾಗೂ ಚಿಪ್ ಮೂಲಕ ವಾಹನದ ದಾಖಲೆ, ಸವಾರನ ದಾಖಲೆಗಳು ಕುರಿತು ಪರಿಶೀಲನೆಗೆ ಸಾಧ್ಯವಾಗಲಿದೆ. ಇದರಿಂದ ನಕಲಿ, ಹಾಗೂ ಪೊಲೀಸರಿಗೆ ಯಾಮಾರಿಸುವ ಕಾರ್ಯಕ್ರೆ ಬ್ರೇಕ್ ಬೀಳಲಿದೆ.
ಹೊಸ ಕ್ಯೂಆರ್ ಕೋಡ್ ಹಾಗೂ ಚಿಪ್ ಸಹಾಯದಿಂದ ವಾಹನ ಸವಾರರ 10 ವರ್ಷಗಳ ದಾಖಲೆ ಶೇಖರಣೆ ಮಾಡಬಹುುದಾಗಿದೆ. ಹೀಗಾಗಿ ವಾಹನ ಸವಾರರ ಟ್ರಾಫಿಕ್ ನಿಯಮ ಉಲ್ಲಂಘನೆ, ವಿಮೆ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿ ಲಭ್ಯವಾಗಲಿದೆ. ಸಂಪೂರ್ಣ ಡಿಜಿಟಲ್ ಮಾಡಿರುವ ಕೇಂದ್ರ ಸರ್ಕಾರ, ಹಾರ್ಡ್ ಕಾಪಿ ಮಾದರಿಗೆ ಬ್ರೇಕ್ ಹಾಕಲು ಉದ್ದೇಶಿಸಿದೆ. ಇದಕ್ಕಾಗಿ ಇ ಡಾಕ್ಯುಮೆಂಟ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಲ್ಲಿ ಬದಲಾವಣೆ ಮಾಡಿರುವ ಮತ್ತೊಂದು ಪ್ರಮುಖ ಅಂಶ ಮೊಬೈಲ್ ಬಳಕೆ. ಚಾನಕ ನ್ಯಾವಿಗೇಶನ್ ಮೂಲಕ ಉದ್ದೇಶಿತ ಸ್ಥಳ ತಲುಪಲ ಮೊಬೈಲ್ ಬಳಸಲು ಅನುಮತಿ ನೀಡಿದೆ. ಆದರೆ ಆದರೆ ನ್ಯಾವಿಗೇಶನ್ ಮ್ಯಾಪ್ ಬಳಸುವಾಗ ಇತರ ಅಡೆತಡೆ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಚಾನಕನಿಗಿದೆ ಎಂದು ತಿದ್ದುಪಡಿಯಲ್ಲಿ ದಾಖಲಿಸಲಾಗಿದೆ.