ಜೈಲಿನಿಂದ ಸಿಎಂ ಪಟ್ಟಕ್ಕೆ: ಲಕ್ ತಿರುಗಿದ ರಾಜಕಾರಣಿಗಳು
ಕೆಲವು ರಾಜಕಾರಣಿಗಳಿಗೆ ಜೈಲಿಗೆ ಹೋಗಿ ಬಂದ ನಂತರ ಅವರ ಲಕ್ ತಿರುಗುತ್ತದೆ. ಜಯಲಲಿತಾ, ಹೇಮಂತ್ ಸೊರೇನ್, ಚಂದ್ರಬಾಬು ನಾಯ್ಡು, ಜಗನ್ ಮೋಹನ್ ರೆಡ್ಡಿ ಮತ್ತು ಡಿಕೆ ಶಿವಕುಮಾರ್ ಇದಕ್ಕೆ ಉದಾಹರಣೆಗಳು.
ಈ ಲಕ್ ಅನ್ನೋದು ಯಾವಾಗ ಹೇಗೆ ಬರುತ್ತೆ ಅನ್ನೋದನ್ನು ಯಾರು ಬಲ್ಲರು. ಕೆಲವರಿಗೆ ಕೆಲವು ಸಂದರ್ಭಗಳಲ್ಲಿ, ಸಮಯಗಳಲ್ಲಿ ಲಕ್ ತಿರುಗುತ್ತೆ. ಆದ್ರೆ ರಾಜಕಾರಣಿಗಳಿಗೆ ಮಾತ್ರ ಲಕ್ ಅನ್ನೋದು ಹೇಗೆ ತಿರುಗುತ್ತೆ ಗೊತ್ತಾ? ಯಾವುದಾದ್ರು ರಾಜಕಾರಣಿ ಜೈಲಿಗೆ ಹೋಗಿ ಬಂದ್ರೆ ಸಾಕು. ಅವರು ಜೈಲಿನಿಂದ ಹೊರ ಬರುವಾಗಲೇ ಲಕ್ ಅನ್ನೋದು ಅವರನ್ನು ಹಿಂಬಾಲಿಸಿಕೊಂಡು ಬರುತ್ತೆ. ಜೈಲಿಗೆ ಹೋಗಿ ಬಂದ್ಮೇಲೆ ಲಕ್ ತಿರುಗಿ ಸಿಎಂ ಆದ ರಾಜಕಾರಣಿಗಳ ಕುರಿತು ಇಲ್ಲಿದೆ.
ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗಲೇ ಜೈಲಿಗೆ ಹೋಗಿದ್ದರು. ಜೈಲಿಗೆ ಹೋಗಿ ಬಂದ ಮೇಲೆ ಅವರ ಲಕ್ ಕೂಡಾ ಬದಲಾಗಿತ್ತು. ಹೇಮಂತ್ ಸೊರೇನ್, ಚಂದ್ರಬಾಬು ನಾಯ್ಡು ಮತ್ತು ಜಗನ್ ಮೋಹನ್ ರೆಡ್ಡಿ. ದೇಶದ ರಾಜಕಾರಣದಲ್ಲಿ ಈ ಮೂವರು ಜೈಲಿಗೆ ಹೋಗಿ ಬಂದ್ಮೇಲೆ ಲಕ್ ತಿರುಗಿ ರಾಜ್ಯದ ಸಿಎಂ ಆದವರು. ಇವರಂತೆಯೇ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾರಿಗೂ ಜೈಲಿಗೆ ಹೋಗಿ ಬಂದ ಮೇಲೆ ಲಕ್ ತಿರುಗಿತ್ತು. ಡಿಕೆ ಶಿವಕುಮಾರ್ ಅವರ ಲಕ್ಕು ಬದಲಾಗಿದ್ದು ಎಲ್ಲಿಂದ ಗೊತ್ತಾ? ಅವರು ದೆಹಲಿ ತಿಹಾರ್ ಜೈಲಿಗೆ ಹೋಗಿ ಬಂದ ನಂತರ. ಜೈಲಿಗೆ ಹೋಗಿ ಬಂದ ಮೇಲೆ ಅವರು ಸಿಎಂ ಆಗದೇ ಇರಬಹುದು. ಆದ್ರೆ ಡಿಸಿಎಂ ಆದರು ರಾಜ್ಯ ಕಾಂಗ್ರೆಸ್ನ ರಾಜ್ಯಾಧ್ಯಕ್ಷರಾದರು.