ಬೆಂಗಳೂರು, (ಸೆ.29): ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ RR ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಅದರಲ್ಲೂ ಆರ್‌ಆರ್‌ ನಗರ ಕ್ಷೇತ್ರ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಯಾಕಂದ್ರೆ ಟಿಕೆಟ್​ ವಿಚಾರವಾಗಿ ಮುನಿರತ್ನಾ ಹಾಗೂ ತುಳಸಿ ಮುನಿರಾಜಗೌಡ ನಡುವೆ ಫೈಟ್​ ನಡೆಯಲಿದೆ. 

ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ

ಮುನಿರತ್ನ ಅವರು ಬೈ ಎಲೆಕ್ಷನ್‌ ಟಿಕೆಟ್ ಪಕ್ಕಾ ಮಾಡಿಕೊಂಡೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ವಲಸೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್​ ಮುನಿರತ್ನಗೆ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ, ಮುನಿರತ್ನಗೆ ಟಿಕೆಟ್ ನೀಡುವುದಕ್ಕೆ ಮುನಿರಾಜು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತೀವ್ರ ಕುತೂಹಲ ಮೂಡಿಸಿದೆ.

ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್
ಹೌದು... ಕಾಂಗ್ರೆಸ್​ನಿಂದ ಯಾವುದೇ ಹೆಸರು ಫೈನಲ್ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಇನ್ನೆರಡು ದಿನದಲ್ಲಿ ಸಭೆ ಸೇರಿ ಅಭ್ಯರ್ಥಿ ಹೆಸರು ಫೈನಲ್​ ಆಗಲಿದೆ. ಜೆಡಿಎಸ್ ಅಭ್ಯರ್ಥಿ ಸಹ ಇನ್ನೂ ತಿರ್ಮಾನ ಆಗಿಲ್ಲ.

ಇನ್ನು ರಾಜರಾಜೇಶ್ವರಿ ವಿಧಾಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಐಡಿಯಲ್ ರಾಜಕುಮಾರ್ ಮುಂದೆ ಬಂದಿದ್ದಾರೆ. ಹೈಕಮಾಂಡ್ ಸೂಚಿಸಿದ್ರೆ ಮುನಿರತ್ನ ವಿರುದ್ಧ ಸ್ಪರ್ಧೆ ಮಾಡಲು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಜಕುಮಾರ್ ತಯಾರಿದ್ದಾರೆ ಎಂದು ತಿಳಿದುಬಂದಿದೆ.

ಏಕೆಂದರೆ ಮುನಿರತ್ನ ಕಾಂಗ್ರೆಸ್ ಬಿಟ್ಟ ಮೇಲೆ ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಜವಾಬ್ದಾರಿಯನ್ನು ಇದೇ ರಾಜಕುಮಾರ್  ಹೊತ್ತಿದ್ದಾರೆ. ಈ ಒಂದು ಆಧಾರದ ಮೇಲೆ ಅವರು ಟಿಕೆಟ್ ಆಕಾಂಕ್ಷಿಯಾಗಲು ಕಾರಣವಾಗಿದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಅನ್ನೋದು ಕಾದು ನೋಡಬೇಕಿದೆ.

ಪ್ರಮುಖ ದಿನಾಂಕಗಳು
* ನವೆಂಬರ್ 3ಕ್ಕೆ ಮತದಾನ, ನ.10ಕ್ಕೆ ರಿಸಲ್ಟ್
* ಅಕ್ಬೋಬರ್ 9ಕ್ಕೆ ನಾಮಪತ್ರ ಸಲ್ಲಿಕೆ ಆರಂಭ
* ಅಕ್ಟೋಬರ್ 16 - ನಾಮಪತ್ರಕ್ಕೆ ಕೊನೇ ದಿನ
* ಅಕ್ಟೋಬರ್ 17 - ನಾಮಪತ್ರಗಳ ಪರಿಷ್ಕರಣೆ
* ಅ.19 - ನಾಮಪತ್ರ ವಾಪಸ್ ಗೆ ಕೊನೇ ದಿನ