ತರಕಾರಿ ಮಾರಿದ ಇನ್ಫೋಸಿಸ್ ಅಧ್ಯಕ್ಷೆ, ಹಿರಿಯರಿಗೆ ಮಣೆಹಾಕಿದ ಸಿಎಸ್‌ಕೆ: ಸೆ.14ರ ಟಾಪ್ 10 ಸುದ್ದಿ!
ಮೊದಲ ದಿನವೇ ಅಧಿವೇಶನಕ್ಕೆ ಕೊರೋನಾ ಆತಂಕ ಎದುರಾಗಿದೆ. 17 ಶಾಸಕರಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ತಾಕತ್ತಿದ್ದರೆ ತಡೆಯಿರಿ ಎಂದು ಮುಂಬೈಗೆ ಬಂದಿದ್ದ ನಟಿ ಕಂಗನಾ ರಣಾವತ್ ಈಗ ಮುಂಬೈನಿಂದ ಹಿಂದಿರುಗುವ ದಿನಾಂಕವನ್ನು ಪ್ರಕಟ ಮಾಡಿದ್ದಾರೆ. ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ತರಕಾರಿ ಮಾರುವ ಫೋಟೋ ವೈರಲ್ ಆಗಿದೆ. ತುಪ್ಪದ ಹುಡುಗಿ ರಾಗಿಣಿ ಪರಪ್ಪನ ಅಗ್ರಹಾರಕ್ಕೆ, ಸಂಜನಾಗೆ ಸಿಸಿಬಿ ಕಸ್ಟಡಿ ಸೇರಿದಂತೆ ಸೆಪ್ಟೆಂಬರ್ 14ರ ಟಾಪ್ 1ದ ಸುದ್ದಿ ಇಲ್ಲಿವೆ.
ಚೀನಾ ಸಂಘರ್ಷದಲ್ಲಿ ಜಗತ್ತೇಕೆ ಭಾರತದ ಹಿಂದಿದೆ?...
ಶಕ್ತಿಶಾಲಿ ರಾಷ್ಟ್ರಗಳು ಈಗ ಕಿಡಿ ಕಾಣಿಸಿಕೊಂಡಿರುವ ಹಿಮಾಲಯ ಸಂಘರ್ಷದಲ್ಲಿ ಬಹುಪಾಲು ಭಾರತದ ಬೆನ್ನಿಗೆ ನಿಂತಿವೆ. ಭಾರತಕ್ಕೆ ಬಲ ತುಂಬುವುದಕ್ಕೆ ಹಿಂಜರಿಕೆಯನ್ನೇನೂ ಇಟ್ಟುಕೊಳ್ಳದ ರಾಷ್ಟ್ರಗಳು ಭಾರತ ಪ್ರಮುಖ ಪಾತ್ರ ವಹಿಸಿ, ಆ ಮೂಲಕ ಚೀನಾವನ್ನು ತಹಬದಿಯಲ್ಲಿಡುವ ಆಟಕ್ಕೆ ಕಳೆ ಕಟ್ಟಲೆಂದು ಬಯಸುತ್ತಿವೆ.
ಕೊರೋನಾ ಕಾಲದಲ್ಲಿ ಮೋದಿ ಅಣಿಮುತ್ತೇ ಜನರ ತಾಕತ್ತು!...
ಬರೋಬ್ಬರಿ 130 ಕೋಟಿ ಜನರು ಇರುವ ಭಾರತದಲ್ಲಿ ಕೊರೋನಾ ನಿಗ್ರಹಕ್ಕಾಗಿ ಘೋಷಿಸಲಾದ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೆ ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಮಾಡಿದ ಭಾಷಣವೂ ಪ್ರಮುಖ ಕಾರಣ ಎಂದು ಬ್ರಿಟನ್‌ನ ಪ್ರತಿಷ್ಠಿತ ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.
ಮೊದಲ ದಿನವೇ ಅಧಿವೇಶನಕ್ಕೆ ಕೊರೋನಾ ಶಾಕ್: ಅನಂತ್ ಕುಮಾರ್ ಹೆಗಡೆ ಸೇರಿ 17 ಸಂಸದರಿಗೆ ಸೋಂಕು...
ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಸೇರಿದಂತೆ ಒಟ್ಟು 17 ಸಂಸದರಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ.
IPL 2020: ಯಾವ ತಂಡದಲ್ಲಿದ್ದಾರೆ ಹೆಚ್ಚು ಸೀನಿಯರ್ ಆಟಗಾರರು..?...
ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ವಯಸ್ಸು ಕೂಡಾ ಸಾಕಷ್ಟು ಚರ್ಚಿತ ಹಾಗೆಯೇ ಆಸಕ್ತಿದಾಯಕ ವಿಚಾರವಾಗಿದೆ. ಐಪಿಎಲ್ ಟ್ರೋಫಿ ಗೆಲ್ಲಲು ವಯಸ್ಸು ಮುಖ್ಯವಲ್ಲ ಛಲ ಹಾಗೂ ಸಾಮರ್ಥ್ಯ ಮಾತ್ರವೇ ಮುಖ್ಯ ಎನ್ನುವುದನ್ನು ಕಳೆದೆರಡು ಆವೃತ್ತಿಗಳು ಸಾಬೀತು ಮಾಡಿತ್ತು.
ಯೋಗೇಶ್ ಗೌಡ ಕೊಲೆ ಕೇಸ್‌ಗೆ ಮರುಜೀವ; ಮಾಜಿ ಸಚಿವನ ಸೋದರನಿಗೆ ಬಂಧನ ಭೀತಿ?...
ಧಾರಾವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್‌ಗೆ ಮತ್ತೆ ಮರುಜೀವ ಬಂದಿದೆ. ಈ ಕೊಲೆ ಕೇಸ್ ನಡೆದಾಗ ಸುವರ್ಣ ನ್ಯೂಸ್ ಇದರ ಬಗ್ಗೆ ಸಾಕ್ಷಿ ಸಮೇತ ಪ್ರಸಾರ ಮಾಡಿತ್ತು.ಕೊಲೆಯ ತನಿಖೆಗೆ ನಿಂತ ಪೊಲೀಸ್ ಅಧಿಕಾರಿಗಳು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು. ಆ ನಂತರ ಪ್ರಕರಣ ಸಿಬಿಐಗೆ ಹೋಗಿತ್ತು. ಈಗ ತನಿಖೆ ಗಂಭೀರ ಘಟ್ಟಕ್ಕೆ ಬಂದು ನಿಂತಿದೆ.
ಮಹಾ ಸರ್ಕಾರವನ್ನೇ ನಡುಗಿಸಿ ವಾಪಸ್ ಹೊರಟ ಕಂಗನಾ
ತಾಕತ್ತಿದ್ದರೆ ತಡೆಯಿರಿ ಎಂದು ಮುಂಬೈಗೆ ಬಂದಿದ್ದ ನಟಿ ಕಂಗನಾ ರಣಾವತ್ ಈಗ ಮುಂಬೈನಿಂದ ಹಿಂದಿರುಗುವ ದಿನಾಂಕವನ್ನು ಪ್ರಕಟ ಮಾಡಿದ್ದಾರೆ. ಕೇಂದ್ರ ಸರ್ಕಾರ ನಟಿಗೆ ವೈ ಪ್ಲಸ್ ಸೆಕ್ಯೂರಿಟಿಯನ್ನು ನೀಡಿತ್ತು.
ಮಾಲಿಕನ ನಿಧನದಿಂದ ಊಟ ಬಿಟ್ಟ ಮೂಕ ಪ್ರಾಣಿಗಳು; ದಿನ ಸಮಾಧಿ ಬಳಿ ಕಣ್ಣೀರಿಡುತ್ತವೆ!...
ಮನುಷ್ಯರಿಗೂ ಸಾಕುಪ್ರಾಣಿಗಳಿಗೂ ಅವಿನಾಭಾವ ಸಂಬಂಧ ಇರುತ್ತವೆ. ಇಬ್ಬರಲ್ಲಿ ಒಬ್ಬರು ಇಲ್ಲ ಅಂದರೂ ಮರುಗುತ್ತೇವೆ. ಮಾಲಿಕನ ಮರಣದಿಂದ ಮೂಕ ಪ್ರಾಣಿಗಳು ಕಣ್ಣೀರಿಡುತ್ತಿವೆ. ಬೆಳಗಾವಿಯ ಶಂಕರಪ್ಪ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾಲಿಕನ ಸಾವಿನಿಂದ ಮನೆಯಲ್ಲಿ ಸಾಕಿದ್ದ ಶ್ವಾನ, ಕೋತಿಗಳು ಕಳೆದ 8 ದಿನಗಳಿಂದ ಅನ್ನ, ನೀರು ಬಿಟ್ಟು ಕುಳಿತಿವೆ.
ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ತರಕಾರಿ ಮಾರುವ ಫೋಟೋ ವೈರಲ್!
ದೇಶದ ದಿಗ್ಗಜ ಕಂಪನಿಗಳಲ್ಲೊಂದಾದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಒಂದು ಭಾರಿ ವೈರಲ್ ಆಗಿದ್ದು, ಇದರಲ್ಲಿ ಅವರು ತರಕಾರಿ ಮಾರುತ್ತಿರವ ದೃಶ್ಯವಿದೆ.
ಗಣೇಶ ಹಬ್ಬ ಆಚರಿಸಿದ್ದೇ ಲಾಸ್ಟ್, ಬಳಿಕ ಶೇಕ್ ಫಾಜಿಲ್ ಭೂಗತ!...
ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಬಗ್ಗೆ ಹುಡುಕುತ್ತಾ ಹೋದರೆ ಹೊಸ ಹೊಸ ವಿಚಾರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತಿವೆ. ನಟಿಯರಿಬ್ಬರು ಅರೆಸ್ಟ್ ಆಗಿದ್ದೇ ತಡ ಶೇಖ್ ತಲೆಮರೆಸಿಕೊಂಡಿದ್ದಾನೆ. ಜಯನಗರ ನಿವಾಸದಲ್ಲಿ ಗಣೇಶನನ್ನು ಕೂರಿಸಿ ಹಬ್ಬ ಮಾಡಿದ್ದಾನೆ. ಅದೇ ಕೊನೆ. ಅದಾದ ಬಳಿಕ ಶೇಖ್ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ತುಪ್ಪದ ಹುಡುಗಿ ರಾಗಿಣಿ ಪರಪ್ಪನ ಅಗ್ರಹಾರಕ್ಕೆ, ಸಂಜನಾಗೆ ಸಿಸಿಬಿ ಕಸ್ಟಡಿ!...
ಡ್ರಗ್ಸ್ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂಜನಾ ಅವರನ್ನು ಎರಡು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.