Asianet Suvarna News Asianet Suvarna News

ಮೊದಲ ದಿನವೇ ಅಧಿವೇಶನಕ್ಕೆ ಕೊರೋನಾ ಶಾಕ್: ಅನಂತ್ ಕುಮಾರ್ ಹೆಗಡೆ ಸೇರಿ 17 ಸಂಸದರಿಗೆ ಸೋಂಕು

ಇಂದಿನಿಂದ ಮುಂಗಾರು ಸಂಸತ್ ಅಧಿವೇಶನ ಆರಂಭವಾಗಿದೆ. ಆದ್ರೆ, ಮೊದಲ ದಿನವೇ ಅಧಿವೇಶನಕ್ಕೆ ಕೊರೋನಾ ಶಾಕ್ ಕೊಟ್ಟಿದೆ.

17 MPs including Anant Kumar Hegde tests positive for COVID19
Author
Bengaluru, First Published Sep 14, 2020, 4:10 PM IST
  • Facebook
  • Twitter
  • Whatsapp

ನವದೆಹಲಿ, (ಸೆ.14): ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಸೇರಿದಂತೆ  ಒಟ್ಟು 17  ಸಂಸದರಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ.

 ಎಎನ್ ಐ ಈ ಬಗ್ಗೆ ವರದಿ ಮಾಡಿದ್ದು, ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗಡೆ, ಪ್ರವೇಶ್ ಸಾಹೇಬ್ ಸಿಂಗ್ ಸೇರಿದಂತೆ 17 ಮಂದಿ ಸಂಸದರಿಗೆ ಕೋವಿಡ್ ಸೋಂಕು ದೃಢವಾಗಿದೆ ಎಂದು ತಿಳಿಸಿದೆ.

ರಾಜ್ಯಸಭಾ ಸದಸ್ಯ ಅಶೋಕ ಗಸ್ತಿಗೆ ಕೊರೋನಾ ಪಾಸಿಟಿವ್‌

ಸಂಸದರು ಈಗಾಗಲೇ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಭಾನುವಾರ ಐವರು ಸಂಸದರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು. ಇದೀಗ ಮತ್ತೆ ಕೆಲ ಸಂಸದರಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂದಿನಿಂದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಿದೆ. ಸಾಮಾಜಿಕ ಅಂತರ ಕಲ್ಪಿಸುವ ಉದ್ದೇಶದಿಂದ ಸದನದಲ್ಲಿ ಆಸನ ವ್ಯವಸ್ಥೆಯನ್ನು ಅದಲು ಬದಲು ಮಾಡಲಾಗಿದೆ. ಕೆಲವರಿಗೆ ತಮ್ಮ ತಮ್ಮ ಕಚೇರಿಗಳಲ್ಲಿ ಮತ್ತು ಮೊಗಸಾಲೆಗಳಲ್ಲಿ ಕುಳಿತು ಸದನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

Follow Us:
Download App:
  • android
  • ios