ಇಸ್ರೇಲಿ ವೈಮಾನಿಕ ದಾಳಿಯ ನಂತರ ಕಟ್ಟಡದ ಅವಶೇಷಗಳಡಿ ಇರಾನ್ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾದ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ಅಮೆರಿಕ ಮತ್ತು ಇಸ್ರೇಲ್ ನಾಯಕರು ನೋಡಿದ್ದಾರೆ ಎಂದು ವರದಿಯಾಗಿದೆ.
ಟೆಹ್ರಾನ್: ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಇರಾನ್ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಮೃತದೇಹದ ಫೋಟೋ ರಿವೀಲ್ ಆಗಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಖಮೇನಿ ಮೃತದೇಹ ಸಿಕ್ಕಿದೆ. ಅವಶೇಷಗಳನ್ನು ತೆರವುಗೊಳಿಸುತ್ತಿರುವ ಫೋಟೋ ಇದಾಗಿದೆ. ಈ ಫೋಟೋವನ್ನು ನೋಡಿದ ಬಳಿಕವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಖಮೇನಿ ಸಾವಿನ ಬಗ್ಗೆ ಬರೆದುಕೊಂಡಿದ್ದರು. ವಿಶ್ವದಲ್ಲಿನ ದುಷ್ಟ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ಘೋಷಿಸಿದ್ದರು. ಇದೀಗ ಅಯಾತುಲ್ಲಾ ಅಲಿ ಖಮೇನಿ ಮೃತದೇಹದದ್ದು ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನೆತನ್ಯಾಹುಗೆ ತೋರಿಸಲಾಗಿದೆ ಖಮೇನಿ ಹೆಣದ ಫೋಟೋ
ಇಸ್ರೇಲ್ ವೈಮಾನಿಕ ದಾಳಿಯ ಅವಶೇಷಗಳಲ್ಲಿ ಅಯಾತುಲ್ಲಾ ಅಲಿ ಖಮೇನಿ ಮೃತದೇಹ ಪತ್ತೆಯಾಗಿದೆ ಎಂದು ಶನಿವಾರ ಸಂಜೆಯೇ ಹಿರಿಯ ಇಸ್ರೇಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿತ್ತು. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಖಮೇನಿ ಮೃತದೇಹದ ಚಿತ್ರಗಳನ್ನು ತೋರಿಸಲಾಗಿದೆ ಎಂದು ವರದಿಯಾಗಿದೆ. ಈ ಚಿತ್ರಗಳನ್ನು ನೋಡಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್‌ನಲ್ಲಿ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದರು. ವೈಮಾನಿಕ ದಾಳಿಯ ನಂತರ ಟೆಹ್ರಾನ್‌ನಲ್ಲಿರುವ ಅವರ ಆವರಣದ ಅವಶೇಷಗಳಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ದಾಳಿಯ ಸಮಯದಲ್ಲಿ ಖಮೇನಿ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ದಾಳಿ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ತಮ್ಮ ಸಹಾಯಕ ಅಲಿ ಶಮ್ಖಾನಿ ಮತ್ತು ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಅವರನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ. ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಶಮ್ಖಾನಿ ಕೂಡ ಸಾನ್ನಪ್ಪಿದ್ದಾರೆ.
ಬಂಕರ್‌ನಿಂದ ಹೊರಗೆ ಬರಬೇಡಿ: ಇಸ್ರೇಲ್ ಸಂದೇಶ
ಇರಾನ್ ದಾಳಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಇಸ್ರೇಲ್ ಸೇನೆ ಎಚ್ಚರಿಕೆ ನೀಡಿದೆ. ದಾಳಿಗಳು ನಡೆಯುತ್ತಿರುವ ಸ್ಥಳದಲ್ಲಿ ಜನರು ಸುರಕ್ಷಿತ ಬಂಕರ್ ಸ್ಥಳಕ್ಕೆ ತೆರಳಬೇಕು. ಬಂಕರ್‌ನಿಂದ ಹೊರಬರದಂತೆ ಇಸ್ರೇಲ್ ತನ್ನ ದೇಶವಾಸಿಗಳಿಗೆ ಸಂದೇಶ ರವಾನಿಸಿದೆ. ಇರಾನ್ ಮತ್ತೊಂದು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಇಸ್ರೇಲ್ ಅನುಮಾನ ವ್ಯಕ್ತಪಡಿಸಿದ್ದು, ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇದನ್ನೂ ಓದಿ: ಪಾಕಿಸ್ತಾನ-ತಾಲಿಬಾನ್ ಸಂಘರ್ಷ; ಆಟ ಶುರು ಮಾಡಿದ ಅಮೆರಿಕದ ಡೊನಾಲ್ಡ್ ಟ್ರಂಪ್; ಭಾರತಕ್ಕೆ ಸಮಸ್ಯೆ?
ಗಲ್ಫ್ ದೇಶಗಳ ಮೇಲೆ ಮುಂದುವರಿದ ದಾಳಿ
ಗಲ್ಫ್ ದೇಶಗಳಲ್ಲಿ ಇರಾನ್‌ನ ಪ್ರತಿದಾಳಿ ಮುಂದುವರೆದಿದೆ. ದುಬೈನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದಕ್ಕೂ ಮೊದಲು, ಬುರ್ಜ್ ಅಲ್ ಅರಬ್ ಸೇರಿದಂತೆ ಡ್ರೋನ್ ದಾಳಿ ನಡೆದಿತ್ತು. ಬುರ್ಜ್ ಖಲೀಫಾ ಟವರ್ ಸಮೀಪದಲ್ಲಿಯೇ ಇರಾನ್ ಕ್ಪಿಪಣಿಗಳು ಅಪ್ಪಳಿಸುತ್ತಿವೆ.
ಇದನ್ನೂ ಓದಿ: ಖಮೇನಿ ಹತ್ಯೆ; ಕರ್ನಾಟಕ ರಾಜ್ಯದ ಮಿನಿ ಇರಾನ್‌ನಲ್ಲಿ ಮೂರು ದಿನ ಶೋಕಾಚರಣೆ


