ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎನ್ನಲಾಗಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ರೇಸ್‌ನಲ್ಲಿ ಖಮೇನಿ ಅವರ ಎರಡನೇ ಮಗ, ಧಾರ್ಮಿಕ ವಿದ್ವಾಂಸ ಮತ್ತು IRGC ಜೊತೆ ಉತ್ತಮ ಸಂಬಂಧ ಹೊಂದಿರುವ ಮುಜ್ತಬಾ ಖಮೇನಿ ಹೆಸರು ಮುಂಚೂಣಿಯಲ್ಲಿದೆ.

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ. ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಅಲಿ ಖಮೇನಿ, ಮಗಳು, ಅಳಿಯ ಕೂಡ ಸಾವನ್ನಪ್ಪಿದ್ದಾರೆ. ಖಮೇನಿ ಸಾವನ್ನು ಮುಚ್ಚಿಟ್ಟು ಇರಾನ್ ಪ್ರತಿದಾಳಿ ಆರಂಭಿಸಿತ್ತು. ಖಮೇನಿ ನಿವಾಸದ ಮೇಲೆಯೇ ಕ್ಪಿಪಣಿ ಅಪ್ಪಳಿಸಿದ್ದರಿಂದ ಸರ್ವೋಚ್ಚ ನಾಯಕನಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನು ಇಸ್ರೇಲ್ ಮತ್ತು ಅಮೆರಿಕ ನೀಡಿರಲಿಲ್ಲ. ಇದೇ ದಾಳಿಯಲ್ಲಿ ಖಮೇನಿಯ ಮೊಮ್ಮಗ ಸಹ ಮೃತಪಟ್ಟಿರುವ ಬಗ್ಗೆ ವರದಿಗಳು ಬರುತ್ತಿವೆ. ಅಯತೊಲ್ಲಾ ಅಲಿ ಖಮೇನಿ ಹತ್ಯೆ ಬೆನ್ನಲ್ಲೇ ಮುಂದಿನ ಸರ್ವಾಧಿಕಾರಿ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಉತ್ತರಾಧಿಕಾರಿ ರೇಸ್‌ನಲ್ಲಿ ಖಮೇನಿ ಅವರ ಮಗ ಮುಜ್ತಬಾ ಖಮೇನಿ ಹೆಸರು ಬಲವಾಗಿ ಕೇಳಿ ಬರುತ್ತಿದೆ.

Add Asianetnews Kannada as a Preferred SourcegooglePreferred

ಯಾರು ಈ ಮುಜ್ತಬಾ ಖಮೇನಿ?

ಕಳೆದ ಜುಲೈನಲ್ಲಿ 12 ದಿನಗಳ ಕಾಲ ನಡೆದ ಇರಾನ್-ಇಸ್ರೇಲ್ ಸಂಘರ್ಷದ ವೇಳೆ, ಮುಜ್ತಬಾ ಖಮೇನಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಬಂದಿತ್ತು. ಖಮೇನಿ ಅವರ ಆರು ಮಕ್ಕಳಲ್ಲಿ ಮುಜ್ತಬಾ ಎರಡನೆಯವರು. ಹೋಡಾ, ಬೋಶ್ರಾ, ಮೊಸ್ತಫಾ, ಮಸೂದ್ ಮತ್ತು ಮೆಯ್ಸಮ್ ಇವರ ಇತರ ಮಕ್ಕಳಾಗಿದ್ದಾರೆ.

1969ರಲ್ಲಿ ಇರಾನ್‌ನ ಮಶಾದ್ ನಗರದಲ್ಲಿ ಜನಿಸಿದ ಮುಜ್ತಬಾ ಖಮೇನಿ, ತತ್ವಶಾಸ್ತ್ರ ಮತ್ತು ಇಸ್ಲಾಮಿಕ್ ಕಾನೂನು ಅಧ್ಯಯನ ಮಾಡಿ ಧಾರ್ಮಿಕ ವಿದ್ವಾಂಸನಾಗಿದ್ದಾನೆ. 1987ರಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ನಂತರ, ಮುಜ್ತಬಾ IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಸೇರಿದರು. ಇರಾನ್-ಇರಾಕ್ ಯುದ್ಧದ ಕೊನೆಯ ಹಂತದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಇರಾನ್‌ನ ಹಿರಿಯ ಧಾರ್ಮಿಕ ವಿದ್ವಾಂಸರು ಮತ್ತು IRGC ನಾಯಕರೊಂದಿಗೆ ಮುಜ್ತಬಾ ಖಮೇನಿ ಉತ್ತಮ ಸಂಬಂಧ ಹೊಂದಿದ್ದಾರೆ.

ಇದನ್ನೂ ಓದಿ: ಅಯತೊಲ್ಲಾ ಅಲಿ ಖಮೇನಿ ಹತ್ಯೆ? ಡೊನಾಲ್ಡ್ ಟ್ರಂಪ್‌ಗೆ X ಮೂಲಕ ತಿರುಗೇಟು ಕೊಟ್ಟ ಇರಾನ್!

ಮುಜ್ತಬಾ ಹೆಸರಿನ ಅರ್ಥ ಏನು?

ಅರೇಬಿಕ್ ಭಾಷೆಯಲ್ಲಿ ಮುಜ್ತಬಾ ಅದ್ರೆ ಆಯ್ಕೆಯಾದವನು ಎಂಬ ಅರ್ಥವಿದೆ. ಇಸ್ಲಾಮಿಕ್ ಸಾಹಿತ್ಯದಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿಶೇಷಣವಾಗಿಯೂ ಈ ಪದವನ್ನು ಬಳಸಲಾಗುತ್ತದೆ. ಹಾಗಾಗಿ ಅಯತೊಲ್ಲಾ ಅಲಿಯ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆಮ ಯಾವುದೇ ಅಧಿಕೃತ ಪ್ರಕಟನೆಗಳು ಹೊರ ಬಂದಿಲ್ಲ.

ಇದನ್ನೂ ಓದಿ: ಜಗತ್ತು ಹಿಂದೆಂದೂ ಕಂಡರಿಯದ ದಾಳಿ ನಡೆಸುತ್ತೇವೆ: ಇಸ್ರೇಲ್-ಅಮೆರಿಕಾಗೆ ಇರಾನ್‌ ಖಡಕ್ ಎಚ್ಚರಿಕೆ