ಅರುಣಾಚಲ ಪ್ರದೇಶ ಭಾರತದ ಭಾಗ: ಚೀನಾಗೆ ಎಚ್ಚರಿಕೆ ನೀಡಿದ ಅಮೆರಿಕ!...

ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶದ ಗಡಿಯಲ್ಲಿ ಕಿರಿಕ್ ಮಾಡುತ್ತಿರುವ ಚೀನಾ, ಭಾರತದ ತಾಳ್ಮೆ ಪರೀಕ್ಷಿಸುತ್ತಿದೆ. ಅರುಣಾಚಲ ಪ್ರದೇಶ ನಮ್ಮದು ಎಂದು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಇದರ ಬೆನ್ನಲ್ಲೇ ಚೀನಾಗೆ ಅಮೆರಿಕ ವಾರ್ನಿಂಗ್ ನೀಡಿದೆ.

ಪ್ರಧಾನಿಯಾದರೂ ಶಾಸ್ತ್ರೀಜಿ ಬಳಿ ಒಂದು ಮನೆಯಿರಲಿಲ್ಲ, ಸರಳತೆಯ ಸಾಕಾರಮೂರ್ತಿವರು!...

ಅಕ್ಟೋಬರ್‌ 2 ಲಾಲ್‌ ಬಹದ್ದೂರ್‌ ಶಾಸ್ತಿ್ರ ಅವರ ಜನ್ಮದಿನವೂ ಹೌದು. ದೇಶದ ಇಬ್ಬರು ಅತ್ಯಂತ ಗೌರವಾನ್ವಿತರ ಜನ್ಮ ದಿನಾಚರಣೆ ಎಂಬ ಸಡಗರ ನಮ್ಮದು. ದೇಶ ಕಂಡ ಪ್ರಾಮಾಣಿಕ ಮತ್ತು ಸರಳ ರಾಜಕಾರಣಿಗಳಲ್ಲಿ ಶಾಸ್ತ್ರೀಜಿ ಪ್ರಮುಖರು. 

ಡ್ರಗ್ ಕೇಸ್‌ : ಕೈಮುಗಿದು ಕಣ್ಣೀರಿಟ್ಟ ಅನುಶ್ರೀ, ಕಾರಣ ಇಷ್ಟೇ..!...

ಡ್ರಗ್ ಕೇಸ್‌ ಬಗ್ಗೆ ಮೊದಲ ಬಾರಿಗೆ ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ. ಕೈ ಮುಗಿದು, ಕಣ್ಣೀರಿಟ್ಟಿದ್ದಾರೆ. ' ನಾನು ವಿಚಾರಣೆಗೆ ಹಾಜರಾಗಿದ್ದೇನೆ ಎಂದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ಕನ್ನಡಿಗರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ, ನಂಬಿಕೆಗೆ ನಾನು ಎಂದಿಗೂ ಮೋಸ ಮಾಡುವುದಿಲ್ಲ. ಎಂದಿದ್ಧಾರೆ. 

ಬಾಬ್ರಿ ಮಸೀದಿ ಧ್ವಂಸದಲ್ಲಿ ಪಾಕ್‌ ಕೈವಾಡ?...

ಈಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಲಕ್ನೋ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಇನ್ನು ಇದರ ಹಿಂದೆ ಪಾಕ್ ಕೈವಾಡದ ಮಾತುಗಳು ಇದ್ದು ಏನದು ವಿಚಾರ ಇಲ್ಲಿದೆ ಮಾಹಿತಿ 

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಪತ್ನಿ ಮೆಲೇನಿಯಾಗೆ ಕೊರೋನಾ ಪಾಸಿಟಿವ್..!...

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಫಸ್ಟ್ ಲೇಡಿ ಮಲೇನಿಯಾ ಟ್ರಂಪ್‌ಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಫಲಿತಾಂಶ ಪಾಸಿಟಿವ್ ಬಂದಿದೆ. ಶುಕ್ರವಾರ ಇಬ್ಬರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ : ಮಾನಾಲಿ-ಲೇಹ್‌ ಪ್ರಯಾಣದಲ್ಲಿ 5 ತಾಸು ಇಳಿಕೆ !...

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಹಿರಿಮೆ ಹೊಂದಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ 9.02 ಕಿ.ಮೀ. ಉದ್ದದ ಮನಾಲಿ- ಲೇಹ್‌ ನಡುವಣ ರಸ್ತೆ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಲಿದ್ದಾರೆ.

IPL 2020: ಈ 4 ತಂಡಗಳ ಪಾಲಿಗೆ ನಾಯಕರೇ ವಿಲನ್..!...

ನಾಯಕರ ಬ್ಯಾಟಿಂಗ್ ಕ್ರಮಾಂಕವೇ ತಂಡದ ಸೋಲಿಗೆ ಕಾರಣವಾಯ್ತಾ ಎನ್ನುವ ಅನುಮಾನ ಶುರುವಾಗಲಾರಂಭಿಸಿದೆ. ತಾವು ಆಡ್ತಿಲ್ಲ, ಬೇರೆಯವರಿಗೂ ಆಡಲು ಬಿಡುತ್ತಿಲ್ಲ ಎನ್ನುವಂತಾಗಿದೆ ಈ ನಾಯಕ ತಂಡಗಳ ನಾಯಕರ ಪರಿಸ್ಥಿತಿ.

ಡ್ರಗ್ಸ್‌ ದಂಧೆಯಲ್ಲಿ ಸಿಲುಕಿಕೊಂಡ ನಟಿಯರು ಏಕೆ ವಿಚಾರಣೆಗೆ ಸೆಲ್ವಾರ್‌ನಲ್ಲಿ ಬರ್ತಾರೆ ?...

ಎಲ್ಲೆಡೆ ಸದ್ದು ಮಾಡುತ್ತಿರುವ ಡ್ರಗ್ಸ್‌ ಮಾಫಿಯಾದ ಬಗ್ಗೆ ಸಿಸಿಬಿ ಹಾಗೂ ಎನ್‌ಸಿಬಿ ಕಠಿಣ ವಿಚಾರಣೆ ಆರಂಭಿಸಿದೆ. ಹೆಚ್ಚಾಗಿ ನಟಿಯರ ಹೆಸರು ಕೇಳಿ ಬಂದಿದ್ದು ಎಲ್ಲರೂ ವಿಚಾರಣೆಗೆ ಸಲ್ವಾರ್‌ ಧರಿಸಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ನಟಿಯರು ಈ ಲುಕ್‌ ಆಯ್ಕೆ ಮಾಡಿಕೊಳ್ಳಲು ಕಾರಣವೇನು? 

ಗೂಗಲ್ ಪ್ಲೇಸ್ಟೋರ್, ಆ್ಯಪಲ್‌ಗೆ ಪ್ರತಿಸ್ಪರ್ಧಿಯಾಗಿ ಸರ್ಕಾರದಿಂದ ಭಾರತ್ ಆ್ಯಪ್ ಸ್ಟೋರ್!...

ಐಟಿ ಹಾಗೂ ತಂತ್ರಜ್ಞಾನದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಡುತ್ತಿದೆ. ಇದೀಗ ಗೂಗಲ್ ಹಾಗೂ ಆ್ಯಪಲ್ ಭಾರತದಲ್ಲಿ ಆ್ಯಪ್ ಸ್ಟೋರ್ ಆರಂಭಿಸಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಕೇಂದ್ರ ಸರ್ಕಾರ ಭಾರತದ ಆ್ಯಪ್ ಸ್ಟೋರ್ ಆರಂಭಿಸಲು ಮುಂದಾಗಿದೆ. 

ಆಕರ್ಷಕ ಬೆಲೆಯೊಂದಿಗೆ ಮಹೀಂದ್ರ ಥಾರ್ 2020 ಬಿಡುಗಡೆ!...

ನ್ಯೂ ಜನರೇಶನ್ ಮಹೀಂದ್ರ ಥಾರ್ ಬಿಡುಗಡೆಯಾಗಿದೆ. ಆಕರ್ಷಕ ಬೆಲೆಯೊಂದಿಗೆ ಮಾರಕಟ್ಟೆ ಪ್ರವೇಶಿಸಿರುವ ಥಾರ್ ಇದೀಗ ಬಹುಬೇಡಿಕೆ ವಾಹನವಾಗಿ ಮಾರ್ಪಡುತ್ತಿದೆ. ಹಲವು ಸೆಲೆಬ್ರೆಟಿಗಳು ಕೂಡಾ ಥಾರ್ ಖರೀದಿಗೆ ಮುಂದಾಗಿದ್ದಾರೆ.