ವಾಶಿಂಗ್ಟನ್(ಅ.02): ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟ ಕೇವಲ ಲಡಾಖ್‌ಗೆ ಮಾತ್ರ ಸೀಮಿತವಾಗಿಲ್ಲ. ಅರುಣಾಚಲ ಪ್ರದೇಶದ ಗಡಿಯಲ್ಲೂ ಚೀನಾ ಕಿರಿಕ್ ಮಾಡುತ್ತಲೇ ಇದೆ. ಅರುಣಾಚಲ ಪ್ರದೇಶದ ಗಡಿಯೊಳಕ್ಕೆ ನುಗ್ಗಿದ ಚೀನಾ, ಐವರನ್ನು ಅಪಹರಣ ಮಾಡಿತ್ತು. ಭಾರತದ ಒತ್ತಡದ ಬಳಿಕ ಚೀನಾ ಕಾಣೆಯಾದ ಐವರು ಚೀನಾಗಡಿಯೊಳ ಪ್ರವೇಶಿಸಿದ ಕಾರಣ ಸೇನೆ ವಶಪಡಿಸಿಕೊಂಡಿತ್ತು ಎಂದಿತ್ತು. ಬಳಿಕ ಬಿಡುಗಡೆ ಮಾಡಿತ್ತು. ಇಷ್ಟೇ ಅಲ್ಲ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ ಕ್ಯಾತೆ ತೆಗೆಯುತ್ತಲೇ ಬಂದಿದೆ. ಇದೀಗ ಭಾರತ ಚೀನಾ ಗಡಿ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶದ ಭಾರತದ ಭಾಗ ಎಂದು ಅಮೆರಿಕ ಹೇಳಿದೆ.

ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ; ಮತ್ತೆ ಶುರುವಾಯ್ತು ಕಿರಿಕ್!.

ಭಾರತ ಚೀನಾ ಗಡಿ ಸಂಘರ್ಷದ ಕುರತು ಅಮೆರಿಕ ಹಿರಿಯ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಅಮೆರಿಕ ಗುರುತಿಸಿರುವ ಪ್ರಕಾರ ಕಳೆದ 6 ದಶಗಳಿಂದ ಅರುಣಾಚಲ ಪ್ರದೇಶ ಭಾರತದ ಭಾಗ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಗಡಿಯಲ್ಲಿ ಸಂಘರ್ಷಕ್ಕೆ ಕಾರಣವಾಗುವ ಯಾವುದೇ ನಿರ್ಧಾರವನ್ನು ಅಮೆರಿಕ ಬೆಂಬಲಿಸುವುದಿಲ್ಲ. ಪ್ರಮುಖವಾಗಿ ವಾಸ್ತವ ಗಡಿ ರೇಖೆ ಬದಲಾವಣೆಗೆ ಅಮರಿಕಗ ಸಹಮತವಿಲ್ಲ. ಹೀಗಾಗಿ ಚೀನಾ ಅರುಣಾಚಲ ಪ್ರದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದು ಸರಿಯಲ್ಲ ಎಂದಿದ್ದಾರೆ.

ಅರುಣಾಚಲ ಪ್ರದೇಶ ಗಡಿ ಬಳಿ ಕಾಣೆಯಾಗಿದ್ದ ಐವರು ಭಾರತೀಯರ ಹಸ್ತಾಂತರಿಸಿದ ಚೀನಾ

ಭಾರತ ಹಾಗೂ ಚೀನಾ ಗಡಿ ಸಂಘರ್ಷವನ್ನು ನಾವು  ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಿಜವಾದ ಗಡಿ ರೇಖೆ ಎಲ್ಲಿ ಅನ್ನೋವುದು ಬಹಳ ಸೂಕ್ಷ್ಮ ವಿಚಾರವಾಗಿದೆ.  ಹೀಗಾಗಿ ಈ ಹಿಂದಿನ ರಾಜತಾಂತ್ರಿಕ ಒಪ್ಪಂದಗಳನ್ನು ಗೌರವಿಸುವುದು ಉತ್ತಮ. ಇಷ್ಟೇ ಅಲ್ಲ ಮಾತುಕತೆ ಮೂಲಕ ಬಗೆಹರಿಸಲು ಅಮೆರಿಕ ಎಲ್ಲಾ ಬೆಂಬಲ ನೀಡಲಿದೆ ಎಂದು ಅಮೆರಿಕ ಹಿರಿಯ ಅಧಿಕಾರಿ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ಚೀನಾದ ದಕ್ಷಿಣ ಟಿಬೆಟ್ ಭಾಗ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾಹೋ ಲಿಂಜಂಗ್ ಹೇಳಿಕೆ ನೀಡಿದ್ದರು. ಈ ಮೂಲಕ ಗಡಿ ಸಂಘರ್ಷಕ್ಕೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಅಮೆರಿಕ, ಅರುಣಚಲ ಪ್ರದೇಶ ಭಾರತದ ಭಾಗ ಎಂದಿದೆ.