Asianet Suvarna News Asianet Suvarna News

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ : ಮಾನಾಲಿ-ಲೇಹ್‌ ಪ್ರಯಾಣದಲ್ಲಿ 5 ತಾಸು ಇಳಿಕೆ !

ದೇಶದಲ್ಲಿ ಅತೀ ಉದ್ದನೆಯ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ

PM Narendra Modi To inaugurate Atal Tunnel On October 3   snr
Author
Bengaluru, First Published Oct 2, 2020, 11:08 AM IST

ನವದೆಹಲಿ (ಅ.02):  ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಹಿರಿಮೆ ಹೊಂದಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ 9.02 ಕಿ.ಮೀ. ಉದ್ದದ ಮನಾಲಿ- ಲೇಹ್‌ ನಡುವಣ ರಸ್ತೆ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಲಿದ್ದಾರೆ.

ಮನಾಲಿ ಹಾಗೂ ಲೇಹ್‌ ನಡುವಣ ಅಂತರವನ್ನು 46 ಕಿ.ಮೀ.ಯಷ್ಟುತಗ್ಗಿಸುವ, ಪ್ರಯಾಣ ಅವಧಿಯನ್ನು 4ರಿಂದ 5 ತಾಸು ಕಡಿತಗೊಳಿಸುವ ಇದಕ್ಕೆ ಅಟಲ್‌ ಸುರಂಗ ಎಂಬ ಹೆಸರನ್ನು ಇಡಲಾಗಿದೆ.

ಹಿಮಾಚಲಪ್ರದೇಶದ ರೋಹ್ಟಂಗ್‌ನಲ್ಲಿರುವ ಈ ಸರ್ವಋುತು ಸುರಂಗವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಬಳಿಕ ಸೋಲನ್‌ ಕಣಿವೆ ಹಾಗೂ ಲಹೌಲ್‌ ಸ್ಪಿಟಿಯಲ್ಲಿನ ಸಿಸ್ಸುವಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮನಾಲಿ- ಲೇಹ್‌ ನಡುವಣ ಮಾರ್ಗ ಪ್ರತಿ ವರ್ಷ 6 ತಿಂಗಳ ಕಾಲ ಹಿಮಪಾತದ ಹಿನ್ನೆಲೆಯಲ್ಲಿ ಸ್ಥಗಿತಗೊಳ್ಳುತ್ತಿತ್ತು. ಆದರೆ ಈ ಸುರಂಗದಿಂದ ಆ ಸಮಸ್ಯೆ ನಿವಾರಣೆಯಾಗಲಿದೆ. ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿರುವ ಈ ಸುರಂಗ, ಅತ್ಯಾಧುನಿಕ ವಿಶೇಷತೆಗಳನ್ನು ಹೊಂದಿದೆ.

ಭಾರತದ ರಸ್ತೆಗಳ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ! ..

2000ನೇ ಇಸ್ವಿಯ ಜೂ.3ರಂದು ಈ ಸುರಂಗ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ನಿರ್ಧರಿಸಿದ್ದರು. 2002ರ ಮೇ 26ರಂದು ಶಂಕುಸ್ಥಾಪನೆ ನೆರವೇರಿತ್ತು. ಈ ಸುರಂಗಕ್ಕೆ ಅಟಲ್‌ ಹೆಸರನ್ನು ಇಡಲು ಮೋದಿ ಸರ್ಕಾರ 2019ರ ಡಿಸೆಂಬರ್‌ನಲ್ಲಿ ನಿರ್ಧಾರ ತೆಗೆದುಕೊಂಡಿತ್ತು.
 
ಸುರಂಗ ವಿಶೇಷತೆಗಳು

- 9.02 ಕಿ.ಮೀ. ಉದ್ದ ಕುದುರೆ ಲಾಳಾಕೃತಿಯಲ್ಲಿದೆ. ದ್ವಿಪಥವನ್ನು ಹೊಂದಿದೆ.

- 8 ಮೀಟರ್‌ ಅಗಲದ ರಸ್ತೆ ಇದೆ. 5.525 ಮೀ. ಎತ್ತರದ ವಾಹನ ಚಲಿಸಬಹುದು

- ನಿತ್ಯ 3000 ಕಾರು, 1500 ಲಾರಿಗಳ ಸಂಚಾರಕ್ಕೆ ಅವಕಾಶ

- ಗರಿಷ್ಠ 80 ಕಿ.ಮೀ. ವೇಗದಲ್ಲಿ ಹೋಗಬಹುದು

- ಸರ್ವಋುತು ಸುರಂಗ. ಹಿಮಪಾತ ವೇಳೆಯೂ ವಾಹನ ಸಂಚಾರ

- ಮನಾಲಿ- ಲೇಹ್‌ ನಡುವಣ ದೂರ 46 ಕಿ.ಮೀ. ಇಳಿಕೆ

- ಎರಡೂ ನಗರಗಳ ಪ್ರಯಾಣ ಅವಧಿ 4ರಿಂದ 5 ತಾಸಿನಷ್ಟುಉಳಿತಾಯ

Follow Us:
Download App:
  • android
  • ios