ಆಕರ್ಷಕ ಬೆಲೆಯೊಂದಿಗೆ ಮಹೀಂದ್ರ ಥಾರ್ 2020 ಬಿಡುಗಡೆ!
ನ್ಯೂ ಜನರೇಶನ್ ಮಹೀಂದ್ರ ಥಾರ್ ಬಿಡುಗಡೆಯಾಗಿದೆ. ಆಕರ್ಷಕ ಬೆಲೆಯೊಂದಿಗೆ ಮಾರಕಟ್ಟೆ ಪ್ರವೇಶಿಸಿರುವ ಥಾರ್ ಇದೀಗ ಬಹುಬೇಡಿಕೆ ವಾಹನವಾಗಿ ಮಾರ್ಪಡುತ್ತಿದೆ. ಹಲವು ಸೆಲೆಬ್ರೆಟಿಗಳು ಕೂಡಾ ಥಾರ್ ಖರೀದಿಗೆ ಮುಂದಾಗಿದ್ದಾರೆ.
ನವದೆಹಲಿ(ಅ.02): ಹೊಚ್ಚ ಹೊಸ ಮಹೀಂದ್ರ ಥಾರ್ 2020 ಬಿಡುಗಡೆಯಾಗಿದೆ. ಆಗಸ್ಟ್ 15 ರಂದು ಅನಾವರಣಗೊಂಡಿದ್ದ ನೂತನ ಮಹೀಂದ್ರ ಥಾರ್ ಭಾರಿ ಸಂಚನಲ ಸೃಷ್ಟಿಸಿತ್ತು. ಸೆಲೆಬ್ರೆಟಿಗಳು ಸೇರಿದಂತೆ ಹಲವರು ಥಾರ್ ಖರೀದಿಸಲು ಮುಂದಾಗಿದ್ದರು. ಇದೀಗ ಬಹುನಿರೀಕ್ಷಿತ ಥಾರ್ ಬಿಡುಗಡೆಯಾಗಿದೆ. ಗಾಂಧಿ ಜಯಂತಿ ದಿನ ಥಾರ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.
ದಾಖಲೆ ಬರೆದ ಜೀಪ್: ಮೊದಲ ಮಹೀಂದ್ರ ಥಾರ್ 1.1 ಕೋಟಿಗೆ ಹರಾಜು!...
ನ್ಯೂ ಜನರೇಶನ್ ಥಾರ್ ಬೆಲೆ 9.80 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 13.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಸಾಫ್ಟ್ ಟಾಪ್, ಕನ್ವರ್ಟೇಬಲ್ ಟಾಪ್ ಹಾಗೂ ಹಾರ್ಡ್ ಟಾಪ್ ಆಯ್ಕೆಗಳು ಲಭ್ಯವಿದೆ.
ಮಹೀಂದ್ರ ಥಾರ್ ಬೆಲೆ(ಎಕ್ಸ್ ಶೋ ರೂಂ)
AX ಪೆಟ್ರೋಲ್ ಸ್ಯಾಂಡರ್ಡ್ 6 ಸೀಟರ್ ಸಾಫ್ಟ್ ಟಾಪ್ = 9.80 ಲಕ್ಷ ರೂಪಾಯಿ
AX ಪೆಟ್ರೋಲ್ 6 ಸೀಟರ್ ಸಾಫ್ಟ್ ಟಾರ್ = 10.65 ಲಕ್ಷ ರೂಪಾಯಿ
AX ಪೆಟ್ರೋಲ್ ಆಪ್ಶನಲ್ 4 ಸೀಟರ್ ಕನ್ವರ್ಟೇಬಲ್ ಟಾಪ್ = 11.90 ಲಕ್ಷ ರೂಪಾಯಿ
AX ಡೀಸೆಲ್ 6 ಸೀಟರ್ ಸಾಫ್ಟ್ ಟಾಪ್ = 10.85 ಲಕ್ಷ ರೂಪಾಯಿ
AX ಡೀಸೆಲ್ ಆಪ್ಶನಲ್ 4 ಸೀಟರ್ ಕನ್ವರ್ಟೇಬಲ್ ಟಾಪ್ = 12.10 ಲಕ್ಷ ರೂಪಾಯಿ
AX ಡೀಸೆಲ್ ಆಪ್ಶನಲ್ 4 ಸೀಟರ್ ಹಾರ್ಡ್ ಟಾಪ್ = 12.20 ಲಕ್ಷ ರೂಪಾಯಿ
ಮಹೀಂದ್ರ ಥಾರ್ ಮೋಡಿಗೆ ನಟ ಪೃಥ್ವಿರಾಜ್ ಕ್ಲೀನ್ ಬೋಲ್ಡ್!
2020 ಮಹೀಂದ್ರ ಥಾರ್ LX ವೇರಿಯೆಂಟ್ ಬೆಲೆ(ಎಕ್ಸ್ ಶೋ ರೂಂ)
LX ಪೆಟ್ರೋಲ್ 4 ಸೀಟರ್ ಹಾರ್ಡ್ ಟಾಪ್ MT = 12.49 ಲಕ್ಷ ರೂಪಾಯಿ
LX ಡೀಸಸೆಲ್ 4 ಸೀಟರ್ ಕನ್ವರ್ಟಬೇಲ್ ಟಾಪ್ MT = 12.85 ಲಕ್ಷ ರೂಪಾಯಿ
LX ಡೀಸೆಲ್ 4 ಸೀಟರ್ ಕನ್ವರ್ಟೇಬಲ್ ಟಾಪ್ MT = 12.95 ಲಕ್ಷ ರೂಪಾಯಿ
LX ಪೆಟ್ರೋಲ್ 4 ಸೀಟರ್ ಕನ್ವರ್ಟೇಬಲ್ ಟಾಪ್ AT = 13.45 ಲಕ್ಷ ರೂಪಾಯಿ
LX ಪೆಟ್ರೋಲ್ 4 ಸೀಟರ್ ಹಾರ್ಡ್ ಟಾಪ್ AT = 13.55 ಲಕ್ಷ ರೂಪಾಯಿ
LX ಡೀಸೆಲ್ 4 ಸೀಟರ್ ಕನ್ವರ್ಟೇಬಲ್ ಟಾಪ್ AT = 13.65 ಲಕ್ಷ ರೂಪಾಯಿ
LX ಡೀಸೆಲ್ 4 ಸೀಟರ್ ಹಾರ್ಡ್ ಟಾಪ್ AT = 13.75 ಲಕ್ಷ ರೂಪಾಯಿ
ಥಾರ್ ವಾಹನ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಲಭ್ಯವಿದೆ. 2.0-ಲೀಟರ್ mಸ್ಟಾಲಿಯನ್ 150 TGDI ಪೆಟ್ರೋಲ್ ಎಂಜಿನ್ ವಾಹನ, 150 bhp ಪವರ್ (at 5,000 rpm) ಹಾಗೂ 320 Nm ಪೀಕ್ ಟಾರ್ಕ್ ( between 1,500-3,000 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಡೀಸೆಲ್ ಎಂಜಿನ್ ವೆರಿಯೆಂಟ್ 2.2-ಲೀಟರ್ mHawk 130 ಎಂಜಿನ್ ಹೊಂದಿದ್ದು, 130 bhp ಪವರ್( at 3,750 rpm) ಹಾಗೂ 300 Nm ಪೀಕ್ ಟಾರ್ಕ್( 1,600-2,800 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.