ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಫಸ್ಟ್ ಲೇಡಿ ಮಲೇನಿಯಾ ಟ್ರಂಪ್‌ಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಫಲಿತಾಂಶ ಪಾಸಿಟಿವ್ ಬಂದಿದೆ. ಶುಕ್ರವಾರ ಇಬ್ಬರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

"

ನಾವು ತಕ್ಷಣ ಕ್ವಾರೆಂಟೈನ್ ಆಗಿ ಚಿಕಿತ್ಸೆ ಪಡೆಯಲಿದ್ದೇವೆ ಎಂದು ಟ್ರಂಪ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕ ಹೋಪ್ ಹಿಕ್ಸ್ ಅವರಿಗೆ ಕೊರೋನಾ ಪಾಟಿಸಿವ್ ಬಂದ ಬೆನ್ನಲ್ಲೇ ಟ್ರಂಪ್ ಅವರಿಗೂ ಪಾಸಿಟಿವ್ ಬಂದಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪವಿರುವುದರಿಂದ ಟ್ರಂಪ್ ಆಪ್ತ ಸಹಾಯಕಿ ಚುನಾವಣಾ ಸಂಬಂಧಿ ಕೆಲಸಗಳಿಗಾಗಿ ಓಡಾಡುತ್ತಿದ್ದರು. ಚುನಾವಣಾ ಅಭಿಯಾನಗಳಿಗೆ ಟ್ರಂಪ್‌ ಕೂಡಾ ಜೊತೆಯಾಗುತ್ತಿದ್ದರು.

ಕೊರೋನಾ ಪರೀಕ್ಷೆ ವಿಚಾರದಲ್ಲಿ ಮೋದಿಯೇ ನಮಗೆ ಭೇಷ್ ಎಂದಿದ್ದಾರೆ: ಟ್ರಂಪ್!

ಏರ್‌ಫೋರ್ಸ್ 1 ಅಧ್ಯಕ್ಷರ ಹೆಲಿಕಾಪ್ಟರ್‌ನಲ್ಲಿ ಈಕೆ ಟ್ರಂಪ್‌ ಜೊತೆ ಮಂಗಳವಾರ ಪ್ರಯಾಣ ಮಾಡಿದ್ದರು. ಕ್ಲೆವ್‌ಲೆಂಡ್‌ಗೆ ಅಧ್ಯಕ್ಷರ ಭಾಷಣಕ್ಕಾಗಿ ಪ್ರಯಾಣ ಮಾಡಿದ್ದರು. ಬುಧವಾರ ಮತ್ತೆ ಮಿನ್ನೆಸೋಟಾಗೆ ಚುನಾವಣಾ ರ್ಯಾಲಿಗಾಗಿ ತೆರಳಿದ್ದರು.