ಬೆಂಗಳೂರು[ಜು.25]  2018ರ ಎರಡನೇ ಚಂದ್ರಗ್ರಹಣವನ್ನು ನೋಡಲು ಜಗತ್ತಿನೆಲ್ಲೆಡೆ ಜನರು ಉತ್ಸುಕರಾಗಿದ್ದಾರೆ. ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಖ್ಯಾತಿಯೂ ನಾಡಿದ್ದು ಘಟಿಸಲಿರುವ ಖಗೋಳ ವಿಸ್ಮಯಕ್ಕೆ ಇದೆ. ಒಂದಿಷ್ಟು ಪದ್ಧತಿ, ಒಂದಿಷ್ಟು ಆಚರಣೆ, ಒಂದಿಷ್ಟು ಸಂಶೋಧನೆ ಎಲ್ಲದಕ್ಕೂ ಗ್ರಹಣ ಕಾರಣವಾಗಲಿದೆ.

ಈ ಜನವರಿ 31 ರ ಸೂಪರ್ ಬ್ಲ್ಯೂ ಬ್ಲಡ್ ಮೂನ್ ಅನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಸಿಕೊಂಡಿದ್ದರು. ಅಂದು ಚಂದ್ರ ಕೆಂಪಾಗಿದ್ದನ್ನು ಎಲ್ಲರೂ ನೋಡಿ ಆನಂದಿಸಿದ್ದರು. ಇದೀಗ ಬರೋಬ್ಬರಿ ಅರ್ಥ ವರ್ಷದ ನಂತರ ಅಂದರೆ ಜುಲೈ 27ರಂದು ಮತ್ತೆ ಗ್ರಹಣ ಘಟಿಸಲಿದೆ.

ಕೇತುಗ್ರಸ್ತ ಚಂದ್ರಗ್ರಹಣ ಯಾರು, ಏನು ಮಾಡಬೇಕು?

ಶತಮಾನದ ಸುದೀರ್ಘ ಚಂದ್ರಗ್ರಹಣ
ಜುಲೈ 27, ಶುಕ್ರವಾರದಂದು ಸಂಭವಿಸುವ ಈ ಚಂದ್ರಗ್ರಹಣ 21ನೇ ಶತಮಾನದ ಸುದೀರ್ಘ ಚಂದ್ರಗ್ರಹಣ. 2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ. ಮುಂದೆ ಸಂಭವಿಸುವುದೂ ಇಲ್ಲ. 1 ಗಂಟೆ 42 ನಿಮಿಷ 57 ಸೆಕೆಂಡ್ ನಷ್ಟು ಸುದೀರ್ಘ ಕಾಲ ಖಗ್ರಾಸ ಗ್ರಹಣ ಸಂಭವಿಸಲಿದೆ. ಅಂದರೆ ಗ್ರಹಣದ ಅವಧಿ ಬರೋಬ್ಬರಿ 3 ಗಂಟೆ 45 ನಿಮಿಷ. ಮಧ್ಯರಾತ್ರಿ 1.52ಕ್ಕೆ ಸಂಪೂರ್ಣ ಚಂದ್ರ ಸಂಪೂರ್ಣ ಮರೆಯಾಗಲಿದ್ದಾನೆ.

ಮಂಗಳನೂ ಹತ್ತಿರ ಬರಲಿದ್ದಾನೆ
ಸುದೀರ್ಘ ಚಂದ್ರಗ್ರಹಣದೊಟ್ಟಿಗೆ ಖಗೋಳದಲ್ಲಿ ಇನ್ನೊಂದು ವಿಸ್ಮಯ ಸಂಭವಿಸಲಿದೆ. ಈ ದಿನ ಮಂಗಳ ಗ್ರಹ ಭೂಮಿಗೆ ಅತೀ ಹತ್ತಿರ ಬರಲಿದ್ದು, ಸೂರ್ಯ ಮತ್ತು ಮಂಗಳ ಗ್ರಹ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ದಶಕದ ನಂತರ ಭೂಮಿಗೆ ಅತೀ ಹತ್ತಿರದಲ್ಲಿ ಮಂಗಳ ಗ್ರಹ ಕಾಣಿಸುವುದರಿಂದ ಅತಿ ದೊಡ್ಡದಾಗಿ ಕಾಣಿಸಲಿದೆ. ಮಂಗಳಯಾನದ ಮಾಡಿ ಬಂದಿದ್ದನ್ನು ಕೇಳಿದ್ದೇವು. ನಮ್ಮ ಮ್ಯಾಮ್ ಅಲ್ಲಿ ಎಲ್ಲಿದೆ ಎಂದು ಹುಡುಕಬಹುದೆನೋ!

ಅನಾಹುತದ ಸರಮಾಲೆ ಹೊತ್ತು ತರಲಿದೆಯಾ ರಕ್ತ ಚಂದ್ರಗ್ರಹಣ?

ಬರೀ ಕಣ್ಣಲ್ಲಿ ನೋಡಬಹುದೆ?
ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಣೆ ಮಾಡಬಹುದು. ಮಳೆ ಮೋಡ ಅಂದು ಅಡ್ಡಿ ಮಾಡದಿದ್ದರೆ ಖಗೋಳ ವಿಸ್ಮಯವನ್ನು ಸವಿಯಬಹುದು. ಭಾರತದ ಬಹುತೇಕ ಭಾಗದಲ್ಲಿ ಗ್ರಹಣ ಕಾಣಲಿದೆ. ಬೆಂಗಳೂರಿನ  ಜವಾಹರಲಾಲ ನೆಹರು ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.

ಖಗ್ರಾಸ ಚಂದ್ರ ಗ್ರಹಣ: ಯಾವ ರಾಶಿಯವರಿಗೇನು ಫಲ?

ಗ್ರಹಣ ಆಸ್ವಾದನೆಗೆ ಟಿಪ್ಸ್..
* ದಾರಿ ದೀಪಗಳು ದೂರವಿರುವ ಜಾಗದಲ್ಲಿ ನಿಂತು ಗ್ರಹಣ ನೋಡಿ
* ಸಾಧ್ಯವಾದರೆ ದೂರದರ್ಶಕ ಬಳಸಿ
* ಗ್ರಹಣದ ಬಗ್ಗೆ ವೈಜ್ಞಾನಿಕ ಮಾಹಿತಿ ಕಲೆಹಾಕಿಕೊಳ್ಳಿ
* ಮೊಬೈಲ್ ನಲ್ಲಿ ಸೆರೆಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತ ನೈಜ ಸೌಂದರ್ಯ ಮಿಸ್ ಮಾಡಿಕೊಳ್ಳಬೇಡಿ