Asianet Suvarna News Asianet Suvarna News

ಹಾವೇರಿ: ಕಾಮದಾಹಕ್ಕೆ ತಾಳಿ ಕಟ್ಟಿದ ಗಂಡನನ್ನೇ ಕೊಂದ ಐನಾತಿ ಹೆಂಡ್ತಿ!

ಹೆಸರು ಬರೆದಿಟ್ಟು ಸಾಧಿಕ್ ಆತ್ಮಹತ್ಯೆ ಮಾಡಿಕೊಂಡರೆ ನಾವು ಜೈಲು ಪಾಲಾಗಬಹುದು ಎಂಬ ಆತಂಕ ಉಂಟಾದ ಹಿನ್ನಲೆಯಲ್ಲಿ ಪ್ರಿಯಕರ ಜಾಫರ್ ಜೊತೆ ಸೇರಿ ಸಾಧಿಕ್‌ ಸಾವಿಗೆ ಸಲ್ಮಾ ಮಹೂರ್ತ ಫಿಕ್ಸ್ ಮಾಡಿದ್ದಳು. ರಾತ್ರೋ ರಾತ್ರಿ ಸಾಧಿಕ್ ಕುತ್ತಿಗೆಗೆ ಹಗ್ಗ ಬಿಗಿದು, ತಲೆ ದಿಂಬು ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

Wife Killed Husband at Hirekerur in Haveri grg
Author
First Published Oct 2, 2024, 6:17 PM IST | Last Updated Oct 2, 2024, 6:17 PM IST

ಹಾವೇರಿ(ಅ.02):  ತನ್ನ ಕಾಮದಾಹಕ್ಕೆ ತಾಳಿ ಕಟ್ಟಿದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಪತ್ನಿ ಹತ್ಯೆಗೈದ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಲಿಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ. ಸಾಧಿಕ್ ಮತ್ತೂರು(30) ಕೊಲೆಯಾದ ದುರ್ದೈವಿ, ಸಲ್ಮಾ (26) ಹಾಗೂ ಜಾಫರ್ (28) ಆರೋಪಿಗಳು. 

ಗಂಡ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಸತ್ತ ಎಂದು ಕಥೆ ಕಟ್ಟಿದ್ದಳು ಸಲ್ಮಾ, ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನು ಕೊಲೆಗೈದಿದ್ದಾಳೆ. ಕಳೆದ ಸೆಪ್ಟೆಂಬರ್ 25 ರಂದು ಕೊಲೆ ಮಾಡಿದ್ದಾರೆ. ಸಲ್ಮಾ ಜಾಫರ್ ಎಂಬುವವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಸಲ್ಮಾ - ಜಾಫರ್ ಸರಸ ಸಲ್ಲಾಪ ನೋಡಿ ಸಾಧಿಕ್ ಬೇಸತ್ತಿದ್ದನು. ಪತ್ನಿ ಸಲ್ಮಾಗೆ ಸಾಕಲಷ್ಟು ಸಲ ಸಾಧಿಕ್ ವಾರ್ನಿಂಗ್ ಕೂಡ ಮಾಡಿದ್ದನಂತೆ. ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಸಾಧಿಕ್ ವಾರ್ನಿಂಗ್ ಮಾಡಿದ್ದನು. 

ಯುವಕನ ಜತೆ ವಿವಾಹಿತ ಮಹಿಳೆಯ ಲವ್ವಿ ಡವ್ವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ್ಲು ಅಂತ ತಾಯಿಯನ್ನೇ ಕೊಂದ ಮಗಳು..!

ಹೆಸರು ಬರೆದಿಟ್ಟು ಸಾಧಿಕ್ ಆತ್ಮಹತ್ಯೆ ಮಾಡಿಕೊಂಡರೆ ನಾವು ಜೈಲು ಪಾಲಾಗಬಹುದು ಎಂಬ ಆತಂಕ ಉಂಟಾದ ಹಿನ್ನಲೆಯಲ್ಲಿ ಪ್ರಿಯಕರ ಜಾಫರ್ ಜೊತೆ ಸೇರಿ ಸಾಧಿಕ್‌ ಸಾವಿಗೆ ಸಲ್ಮಾ ಮಹೂರ್ತ ಫಿಕ್ಸ್ ಮಾಡಿದ್ದಳು. ರಾತ್ರೋ ರಾತ್ರಿ ಸಾಧಿಕ್ ಕುತ್ತಿಗೆಗೆ ಹಗ್ಗ ಬಿಗಿದು, ತಲೆ ದಿಂಬು ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. 

ಸಾಧಿಕ್ ಇನ್ನೂ ಜೀವಂತ ಇರಬಹುದು ಎಂಬ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಸಲ್ಮಾ ಹಾಗೂ ಜಾಫರ್ ಮಚ್ಚಿನಿಂದ ಸಾಧಿಕ್ ತಲೆಗೆ ಹೊಡೆದಿದ್ದರು. ಬಳಿಕ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಗಂಡ ಸತ್ತಿರೋದಾಗಿ ಐನಾತಿ ಸಲ್ಮಾ ಕಥೆ ಕಟ್ಟಿದಳು. ತನಿಖೆ ಕೈಗೊಂಡಿದ್ದ ಪೊಲೀಸರ ವಿಚಾರಣೆ ವೇಳೆ ಗಂಡನ ಮರ್ಡರ್ ಬಗ್ಗೆ ಸಲ್ಮಾ ಹಾಗೂ ಜಾಫರ್ ಕಥೆ ಬಿಚ್ಚಿಟ್ಟಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ನಡೆದಿದೆ. 

Latest Videos
Follow Us:
Download App:
  • android
  • ios