ಟೀ ಜೊತೆ ಸಿಗರೇಟು ಸೇದುವ ಅಭ್ಯಾಸ ನಿಮಗಿದೆಯಾ? ಈ ಸಮಸ್ಯೆ ಕಟ್ಟಿಟ್ಟ ಬುತ್ತಿ!
ಟೀ ಜೊತೆ ಸಿಗರೇಟು ಸೇದುವ ಅಭ್ಯಾಸ ಹಲವರಿಗಿದೆ. ಅದರಲ್ಲೂ ಕಚೇರಿಯಲ್ಲಿ ಕೆಲಸ ಮಾಡುವವರು, ಒತ್ತಡದ ಕೆಲಸದ ಮಾಡುವ ಹಲವರಿಗೆ ಚಹಾ ಹಾಗೂ ಸಿಗರೇಟು ಸಾಮಾನ್ಯ. ಆದರೆ ಈ ಕಾಂಬಿನೇಷನ್ ಅತ್ಯಂತ ಅಪಾಯಾಕಾರಿ ಅನ್ನೋದು ವೈದ್ಯರು ಸೂಚಿಸಿದ್ದಾರೆ.
ಟೀ ಕುಡ್ಕೊಂಡು ಸಿಗರೇಟ್ ಸೇದೋ ಅಭ್ಯಾಸ ಅನೇಕರಿಗೆ ಇರುತ್ತೆ. ಈ ಕಾಂಬಿನೇಷನ್ ನಿಮ್ ಟೆನ್ಶನ್ ಮತ್ತು ಆಯಾಸ ಕಡಿಮೆ ಮಾಡುತ್ತೆ ಅನ್ನೋದು ಹಲವರು ಅಭಿಪ್ರಾಯ. ಆದರೆ ಈ ಟೀ ಹಾಗೂ ಸಿಗರೇಟು ನಿಮ್ಮ ಆರೋಗ್ಯ ಹಾಲು ಮಾಡುತ್ತದೆ. ಟೀ ಮತ್ತು ಸಿಗರೇಟ್ ಜೊತೆಜೊತೆಗೆ ಸೇವಿಸೋದ್ರಿಂದ ಹಾರ್ಟ್ ಅಟ್ಯಾಕ್ ಸೇರಿದಂತೆ ಹಲವು ರೋಗಗಳು ಬರೋ ಸಾಧ್ಯತೆ ಇದೆ.
ಸಿಗರೇಟ್ ಮತ್ತು ಟೀ
ಒಂದು ಸಿಗರೇಟ್ ನಲ್ಲಿ 6 ರಿಂದ 12 ಮಿ.ಗ್ರಾಂ. ನಿಕೋಟಿನ್ ಇರುತ್ತೆ. ಸಿಗರೇಟ್ ಸೇದದೇ ಇರುವವರನ್ನು ಹೋಲಿಸಿದರೆ ಸಿಗರೇಟ್ ಸೇದೋರಿಗೆ ಹಾರ್ಟ್ ಅಟ್ಯಾಕ್ ಬರೋ ಸಾಧ್ಯತೆ 2 ರಿಂದ 3 ಪಟ್ಟು ಜಾಸ್ತಿ ಎಂದು ವೈದ್ಯರು ಹೇಳುತ್ತಾರೆ. ಸಿಗರೇಟ್ ನಲ್ಲಿರೋ ನಿಕೋಟಿನ್ ಹೃದಯಕ್ಕೆ ರಕ್ತನ ಸಾಗಿಸೋ ರಕ್ತನಾಳಗಳನ್ನ ಸಂಕುಚಿತಗೊಳಿಸುತ್ತೆ. ಇದರಿಂದ ಹೃದಯಕ್ಕೆ ಶುದ್ಧ ರಕ್ತ ಸರಿಯಾಗಿ ಸಿಗೋದಿಲ್ಲ. ಹಾರ್ಟ್ ಅಟ್ಯಾಕ್ ಬರೋ ಸಾಧ್ಯತೆ ಜಾಸ್ತಿಯಾಗುತ್ತೆ.
ಟೀಯಲ್ಲಿ ಪಾಲಿಫಿನಾಲ್ ಗಳು ಅಂತ ಕರೆಯೋ ನೈಸರ್ಗಿಕ ಸಂಯುಕ್ತಗಳು ಇರುತ್ತವೆ. ಇದು ಹೃದಯಕ್ಕೆ ಒಳ್ಳೆಯದು ಅಂತ ಹೇಳಲಾಗುತ್ತೆ. ಆದ್ರೆ ಟೀ ಗೆ ಹಾಲು ಹಾಕೋದ್ರಿಂದ ಇದರ ಒಳ್ಳೆಯ ಗುಣಗಳು ಕಡಿಮೆಯಾಗುತ್ತವೆ. ಅಂದ್ರೆ, ಹಾಲಿನಲ್ಲಿರೋ ಪ್ರೋಟೀನ್ ಟೀಯಲ್ಲಿರೋ ಪಾಲಿಫಿನಾಲ್ ಗಳ ಗುಣಲಕ್ಷಣಗಳನ್ನ ಕಡಿಮೆ ಮಾಡುತ್ತೆ. ಇದರಿಂದ ಟೀ ಜಾಸ್ತಿ ಕುಡಿದ್ರೆ, ಹೃದಯ ಬಡಿತ ಜಾಸ್ತಿಯಾಗುತ್ತೆ. ರಕ್ತದೊತ್ತಡ ಕೂಡ ಜಾಸ್ತಿಯಾಗುತ್ತೆ. ಈ ಎರಡೂ ಕೂಡ ಹೃದಯದ ಆರೋಗ್ಯಕ್ಕೆ ಹಾನಿಕರ.
ಟೀ ಕುಡ್ಕೊಂಡು ಸಿಗರೇಟ್ ಸೇದೋದ್ರಿಂದ ಏನೇನೆಲ್ಲಾ ಸಮಸ್ಯೆಗಳು ಬರುತ್ತೆ.
ಟೀ ಕುಡ್ಕೊಂಡು ಸಿಗರೇಟ್ ಸೇದಿದ್ರೆ ಕ್ಯಾನ್ಸರ್ ಬರೋ ಸಾಧ್ಯತೆ 30% ಜಾಸ್ತಿ ಅಂತ ಒಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಟೀ ಯಲ್ಲಿರೋ ವಿಷಕಾರಿ ಅಂಶಗಳು ಸಿಗರೇಟ್ ಹೊಗೆಯ ಜೊತೆ ಸೇರಿ ಕ್ಯಾನ್ಸರ್ ತರಹದ ಅಪಾಯಕಾರಿ ರೋಗಗಳನ್ನ ಉಂಟುಮಾಡುತ್ತೆ. ಆದ್ದರಿಂದ ಯಾವುದೇ ಕಾರಣಕ್ಕೂ ಟೀ ಕುಡ್ಕೊಂಡು ಸಿಗರೇಟ್ ಸೇದಬಾರದು.
ಕ್ಯಾನ್ಸರ್ : ಸಿಗರೇಟ್ ಸೇದಿದ್ರೆ ಕ್ಯಾನ್ಸರ್ ಬರೋ ಸಾಧ್ಯತೆ ಜಾಸ್ತಿ. ವಿಶೇಷವಾಗಿ ಬಾಯಿ ಕ್ಯಾನ್ಸರ್ , ಶ್ವಾಸಕೋಶದ ಕ್ಯಾನ್ಸರ್ , ಗಂಟಲು ಕ್ಯಾನ್ಸರ್ ಬರೋ ಅಪಾಯ ಜಾಸ್ತಿ. ಟೀ ಜೊತೆ ಸೇರಿಸಿ ಸಿಗರೇಟ್ ಸೇದೋದ್ರಿಂದ ಕ್ಯಾನ್ಸರ್ ಬರೋ ಸಮಸ್ಯೆ ಇನ್ನೂ ಹೆಚ್ಚಾಗುತ್ತೆ ಅಂತ ವೈದ್ಯರು ಹೇಳ್ತಾರೆ. ಟೀ ನಿಮ್ಮ ದೇಹದಲ್ಲಿರೋ ಜೀವಕೋಶಗಳನ್ನ ಉತ್ತೇಜಿಸುತ್ತೆ. ಸಿಗರೇಟ್ ನಲ್ಲಿರೋ ವಿಷಕಾರಿ ಅಂಶಗಳು ಹೆಚ್ಚಿನ ಹಾನಿ ಉಂಟುಮಾಡುತ್ತೆ.
ಟೀ, ಸಿಗರೇಟ್ ಕಾಂಬಿನೇಷನ್ ನಿಮ್ಮ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತೆ. ವಿಶೇಷವಾಗಿ ಇದು ನಿಮ್ಮ ಅನ್ನನಾಳ, ಹೊಟ್ಟೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಇದರಿಂದ ಹೊಟ್ಟೆ ನೋವು, ಎದೆಯುರಿ, ಗ್ಯಾಸ್ಟ್ರಿಕ್ ತರಹದ ಜೀರ್ಣಕ್ರಿಯೆ ಸಮಸ್ಯೆಗಳು ಬರುತ್ತವೆ.
ಮಾನಸಿಕ ಒತ್ತಡ: ಸಿಗರೇಟ್ ಸೇದೋರಿಗೆ ಸಿಗರೇಟ್ ಸೇದೋ ಸಮಯದಲ್ಲಿ ರಿಲ್ಯಾಕ್ಸ್ ಆಗಿದ್ದಂಗೆ ಅನಿಸುತ್ತೆ. ಆದ್ರೆ ನಂತರ ಮಾನಸಿಕ ಒತ್ತಡ ಮತ್ತು ಟೆನ್ಶನ್ ಜಾಸ್ತಿಯಾಗುತ್ತೆ. ಟೀಯಲ್ಲಿರೋ ಕೆಫೀನ್ ನಿದ್ರಾಹೀನತೆಗೆ ಕಾರಣವಾಗುತ್ತೆ. ಇದರಿಂದ ಮಾನಸಿಕ ಆರೋಗ್ಯ ಇನ್ನಷ್ಟು ಹದಗೆಡುತ್ತೆ.
ಹಲ್ಲು, ಬಾಯಿ ಆರೋಗ್ಯದ ಮೇಲೆ ಪರಿಣಾಮ: ಟೀ, ಸಿಗರೇಟ್ ಹೊಗೆಯಲ್ಲಿರೋ ಟ್ಯಾನಿನ್ ಗಳು ಹಲ್ಲುಗಳ ಆರೋಗ್ಯನ ಹಾಳುಮಾಡುತ್ತೆ. ವಿಶೇಷವಾಗಿ ನಿಮ್ಮ ಬಿಳಿ ಹಲ್ಲುಗಳನ್ನ ಕಂದು, ಹಳದಿ ಬಣ್ಣಕ್ಕೆ ತಿರುಗಿಸುತ್ತೆ. ಹಲ್ಲುಗಳ ಬಲವನ್ನ ಕಡಿಮೆ ಮಾಡುತ್ತೆ. ಸಿಗರೇಟ್ ಸೇದೋದ್ರಿಂದ ಬಾಯಿಯಿಂದ ದುರ್ವಾಸನೆ ಬರುತ್ತೆ. ಇದು ಬಾಯಿ ಕ್ಯಾನ್ಸರ್ ಬರೋ ಸಾಧ್ಯತೆಯನ್ನೂ ಹೆಚ್ಚಿಸುತ್ತೆ.
ಟೀ ಕುಡಿದು ಸಿಗರೇಟ್ ಸೇದೋ ಅಭ್ಯಾಸನ ಹೇಗೆ ನಿಲ್ಲಿಸೋದು?
ನಿಮಗೆ ಟೀ ಕುಡಿದು ಸಿಗರೇಟ್ ಸೇದೋ ಅಭ್ಯಾಸ ಇದ್ರೆ ಅದನ್ನ ಕ್ರಮೇಣ ಕಡಿಮೆ ಮಾಡಿ ನಂತರ ಸಂಪೂರ್ಣವಾಗಿ ನಿಲ್ಲಿಸಬಹುದು. ಟೀ ಕುಡಿಯೋ ಬದಲು ಬಿಸಿ ನೀರು ಅಥವಾ ಹರ್ಬಲ್ ಟೀ ಕುಡಿಯಬಹುದು. ಸಿಗರೇಟ್ ಅಭ್ಯಾಸನ ಬಿಡೋಕೆ ಆಗ್ತಿಲ್ಲ ಅಂದ್ರೆ ವೈದ್ಯರ ಸಲಹೆ ಪಡೆಯೋದು ಒಳ್ಳೆಯದು.