ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತೆಯ ಮೇಲೆ ಗೂಳಿ ದಾಳಿ, ವೃದ್ಧೆ ಆಸ್ಪತ್ರೆಗೆ ದಾಖಲು
ಗೂಳಿ ದಾಳಿಗೆ ವೃದ್ಧೆ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿದೆ. ಮಂಡ್ಯ ಜಿಲ್ಲೆಯ ಹೆಚ್.ಹೊಸೂರು ನಿಂಗಮ್ಮ ಗಾಯಗೊಂಡವಳು. ದೇವರಿಗೆ ತಲೆ ಮುಡಿಕೊಡಲು ಹೋಗುತ್ತಿದ್ದಾಗ ದಾಸೋಹದ ಬಳಿ ಈ ಅವಘಡ ಜರುಗಿದೆ.
ಚಾಮರಾಜನಗರ(ಅ.02): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತೆಯೊಬ್ಬಳ ಮೇಲೆ ಗೂಳಿಯೊಂದು ದಾಳಿ ಮಾಡಿದ ಘಟನೆ ಇಂದು(ಬುಧವಾರ) ನಡೆದಿದೆ.
ಗೂಳಿ ದಾಳಿಗೆ ವೃದ್ಧೆ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿದೆ. ಮಂಡ್ಯ ಜಿಲ್ಲೆಯ ಹೆಚ್.ಹೊಸೂರು ನಿಂಗಮ್ಮ(70) ಗಾಯಗೊಂಡವಳು. ದೇವರಿಗೆ ತಲೆ ಮುಡಿಕೊಡಲು ಹೋಗುತ್ತಿದ್ದಾಗ ದಾಸೋಹದ ಬಳಿ ಈ ಅವಘಡ ಜರುಗಿದೆ.
ಚಾಮರಾಜನಗರದ ಜನನ ಮಂಟಪದಲ್ಲೂ ನಡೆಯಲಿದೆ ಚಾಮರಾಜೇಶ್ವರರ ದರ್ಬಾರ್!
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಘಟಕದವರು ಆಂಬ್ಯುಲೆನ್ಸ್ ಮೂಲಕ ಕೊಳ್ಳೇಗಾಲವಿಭಾಗೀಯಆಸ್ಪತ್ರೆಗೆ ರವಾನಿಸಿದ್ದರು. ವೃದ್ಧೆಯನ್ನು ಪರೀಕ್ಷಿಸಿದ ವೈದ್ಯರು ಕಿವಿಯಿಂದ ರಕ್ತ ಸೋರುತ್ತಿರುವುದು ನಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಮಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.