ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುವಾಗ ಉಸಿರಾಟ ಸಮಸ್ಯೆಯಿಂದ ಅಸ್ವಸ್ಥಗೊಂಡ ಪವನ್ ಕಲ್ಯಾಣ್!

ತಿರುಪತಿ ಲಡ್ಡು ವಿವಾದದ ಬಳಿಕ ತಿಮ್ಮಪ್ಪನ ಸನ್ನಿಧಿ ಶುದ್ಧೀಕರಣ ಮಾಡಿದ್ದ ಡಿಸಿಎಂ ಪವನ್ ಕಲ್ಯಾಣ್ ಇದೀಗ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ ಉಸಿರಾಟದ ಸಮಸ್ಯೆ ಹಾಗೂ ಬೆನ್ನು ನೋವಿನಿಂದ ಪವನ್ ಕಲ್ಯಾಣ್ ಕುಸಿದ ಘಟನೆ ನಡೆದಿದೆ. ಆರೋಗ್ಯ ಸಮಸ್ಯೆ ನಡುವೆಯೂ ಪವನ್ ಕಲ್ಯಾಣ್ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದ್ದಾರೆ.

Pawan Kalyan struggle to breath during his barefoot walks to tirumala temple amid laddu row ckm

ತಿರುಪತಿ(ಅ.02) ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ವಿವಾದ ಇದೀಗ ಕೋರ್ಟ್ ಅಂಗಳದಲ್ಲಿದೆ. ಇತ್ತ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಈ ಪ್ರಕರಣವನ್ನು ಗಂಭೀರವಾಗಿ ಪರಗಿಣಿಸಿ ದೊಡ್ಡ ಹೋರಾಟವನ್ನೇ ನಡೆಸುತ್ತಿದ್ದಾರೆ. ಲಡ್ಡು ಪ್ರಸಾದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ಆರೋಪದ ಬಳಿಕ ದೇಗುಲವನ್ನು ಪವನ್ ಕಲ್ಯಾಣ್ ಶುದ್ಧೀಕರಣಗೊಳಿಸಿದ್ದರು. ಇಷ್ಟೇ ಅಲ್ಲ ವೃತ ಕೈಗೊಂಡಿದ್ದ ಪವನ್ ಕಲ್ಯಾಣ್ ಇಂದು ಬರಿಗಾಲಲ್ಲಿ ತಿರುಪತಿ ಬೆಟ್ಟ ಹತ್ತಿದ್ದಾರೆ. ಆದರೆ ಬೆಟ್ಟ ಹತ್ತುವಾಗ ಪವನ್ ಕಲ್ಯಾಣ್ ಉಸಿರು ಸಿಗದೆ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡ ಪವನ್ ಕಲ್ಯಾಣ್ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದ್ದಾರೆ. ಈ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿದೆ.

ಬರೋಬ್ಬರಿ 3,500 ಮೆಟ್ಟಿಲುಗಳ ತಿರುಪತಿ ಬೆಟ್ಟವನ್ನು ಪವನ್ ಕಲ್ಯಾಣ್ ಹತ್ತಲು ಆರಂಭಿಸಿದ್ದಾರೆ. ಸಾವಿರ ಮೆಟ್ಟಿಲು ಪೂರ್ಣಗೊಳ್ಳುತ್ತಿದ್ದಂತೆ ಪವನ್ ಕಲ್ಯಾಣ್ ಬಳಲಿದ್ದಾರೆ. ಇಷ್ಟೇ ಅಲ್ಲ ಸಂಪೂರ್ಣ ಬೆವರಿನಿಂದ ಒದ್ದೆಯಾಗಿದ್ದಾರೆ. ಆದರೆ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುವ ಅಚಲ ನಿರ್ಧಾರದ ಕಾರಣ ಪವನ್ ಕಲ್ಯಾಣ್ ಬೆಟ್ಟ ಹತ್ತುವ ಪ್ರಯತ್ನ ಮುಂದುವರಿಸಿದ್ದಾರೆ.

ಮಾತಾಡೋ ಮುನ್ನ ಯೋಚಿಸು; ಹಿಂದೂಗಳ ವಿರುದ್ಧ ನಾಲಗೆ ಹರಿಬಿಟ್ಟ ಪ್ರಕಾಶ ರಾಜ್‌ಗೆ ಡಿಸಿಎಂ ಪವನ್ ಕಲ್ಯಾಣ ಎಚ್ಚರಿಕೆ

ತೀವ್ರ ಸುಸ್ತಾದ ಪವನ್ ಕಲ್ಯಾಣ್ ಉಸಿರಾಟದ ಸಮಸ್ಯೆಯಿಂದ ಬಳಲಿದ್ದಾರೆ. ಹೀಗಾಗಿ ಮೆಟ್ಟಿಲುಗಳಲ್ಲೇ ಕುಸಿದ ಪವನ್ ಕಲ್ಯಾಣ್‌ಗೆ ನೀರು ನೀಡಲಾಯಿತು. ಕೆಲ ಹೊತ್ತು ವಿಶ್ರಾಂತಿ ಪಡೆಯಲು ಸೂಚಿಸಲಾಯಿತು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ಅಸ್ತಮಾ ಹಾಗೂ ಬೆನ್ನು ನೋವಿನ ಸಮಸ್ಯೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ. ತೀವ್ರ ಬಳಲಿದ ಪವನ್ ಕಲ್ಯಾಣ್ ಉಸಿರಾಟ ಸಮಸ್ಯೆಯಿಂದ ಕುಸಿದಿದ್ದಾರೆ.

. @PawanKalyan is suffering from Asthma and Back pain

Can't see him like this ♥️😭 pic.twitter.com/mRq5i986Yx

— Pawanism™ (@santhu_msd7) October 1, 2024

 

 

ಕೆಲ ಹೊತ್ತಿನ ವಿಶ್ರಾಂತಿಯಿಂದ ಪವನ್ ಕಲ್ಯಾಣ್ ಚೇತರಿಸಿಕೊಂಡಿದ್ದಾರೆ. ಬಳಿಕ ಕಾಲ್ನಡಿಯಲ್ಲೇ ತಿರುಪತಿ ಬೆಟ್ಟ ಹತ್ತಿ, ದೇವರ ದರ್ಶನ ಪಡೆದಿದ್ದಾರೆ. ಇದೇ ವೇಳೆ ತಿರುಪತಿ ಭಕ್ತರು ಜಯಘೋಷ ಮೊಳಗಿಸಿದ್ದಾರೆ. ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪವನ್ ಕಲ್ಯಾಣ್ ವೃತ ಕೈಗೊಂಡಿದ್ದರು. ಬಳಿಕ ತಿರುಪತಿ ಬೆಟ್ಟ ಕಾಲ್ನಡಿಗೆ ಮೂಲಕ ಹತ್ತಲು ನಿರ್ಧರಿಸಿದ್ದರು. ಪವಿತ್ರ ಹಿಂದೂ ದೇವಸ್ಥಾನವನ್ನು ಅಪವಿತ್ರಗೊಳಿಸಲಾಗಿದೆ ಎಂದು ಪವನ್ ಕಲ್ಯಾಣ್ ಈ ವೃತ ಕೈಗೊಂಡಿದ್ದರು.

ಇತ್ತ ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ವಿರುದ್ಧ ಗರಂ ಆಗಿತ್ತು. ಜುಲೈ ವರದಿ ಮುಂದಿಟ್ಟು ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು ಯಾಕೆ? ಇಷ್ಟೊಂದು ವಿಳಂಬ ಯಾಕೆ ಎಂದು ಪ್ರಶ್ನಿಸಿತ್ತು. ರಾಜಕೀಯದಿಂದ ದೇವರನ್ನು ದೂರವಿಡಿ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು.

ತಿರುಪತಿ ಲಡ್ಡು ವಿವಾದ: ಪವನ್‌ ಕಲ್ಯಾಣ್‌ 11 ದಿನ ಉಪವಾಸ ವ್ರತ
 

Latest Videos
Follow Us:
Download App:
  • android
  • ios