ಆ್ಯಪಲ್ ಐಫೋನ್ 16 ಖರೀದಿಸುವವರಿಗೆ ಗುಡ್ ನ್ಯೂಸ್ ನೀಡಿದ ರತನ್ ಟಾಟಾ!
ರತನ್ ಟಾಟಾ ನೀಡಿದ ಮಾಸ್ಟರ್‌ಸ್ಟ್ರೋಕ್‌ಗೆ ಫ್ಲಿಪ್‌ಕಾರ್ಟ್, ಅಮೇಜಾನ್ ಕಂಗಾಲಾಗಿದೆ. ಇದರ ಪರಿಣಾಮ ಐಫೋನ್ 16 ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಬೆಂಗಳೂರು(ಅ.02) ಭಾರತದಲ್ಲಿ ಐಫೋನ್ 16 ಸೀರಿಸ್ ಬಿಡುಗಡೆಯಾದ ಬಳಿಕ ಜನರು ಆ್ಯಪಲ್ ಸ್ಟೋರ್, ಆನ್‌ಲೈನ್ ಶಾಪಿಂಗ್‌ನಲ್ಲಿ ಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ. ಇತ್ತ ಹಲವು ಆಫರ್‌ಗಳು ಕೂಡ ಲಭ್ಯವಿದೆ. ಫ್ಲಿಪ್‌ಕಾರ್ಟ್, ಅಮೆಜಾನ್ ಗ್ರಾಹಕರಿಗೆ ಡಿಸ್ಕೌಂಟ್ ಆಫರ್‌ಗಳನ್ನು ನೀಡಿದೆ. ಇದೀಗ ಐಫೋನ್ 16 ಮಾರಾಟದಲ್ಲಿ ರತನ್ ಟಾಟಾ ಮಾಲೀಕತ್ವದ ಟಾಟಾ ಗ್ರೂಪ್ ಎಂಟ್ರಿಕೊಟ್ಟಿದೆ. ಟಾಟಾ ಗ್ರೂಪ್ ಮಾಲೀಕತ್ವದ ಬಿಗ್‌ಬಾಸ್ಕೆಟ್ ಇದೀಗ ಐಫೋನ್ 16 ಮಾರಾಟಕ್ಕೆ ಇಳಿದಿದೆ. ಇದು ಅಮೇಜಾನ್, ಫ್ಲಿಪ್‌ಕಾರ್ಟ್ ಆತಂಕ ಹೆಚ್ಚಿಸಿದೆ.
ಬಿಗ್‌ಬಾಸ್ಕೆಟ್ ಆಹಾರ ಪದಾರ್ಥಗಳ ವಿತರಣೆ ಮೂಲಕ ಹೆಚ್ಚು ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರುಕಟ್ಟೆಗೂ ಪ್ರವೇಶಿಸಿದೆ. ಇದೀಗ ಐಫೋನ್ 16 ಸೀರಿಸ್ ಫೋನ್ ವಿತರಣೆ ಆರಂಭಿಸಿದೆ. ಐಫೋನ್ ಪ್ರೀಯರು ಆದಷ್ಟು ಬೇಗ ಐಫೋನ್ 16 ಸೀರಿಸ್ ಪಡೆಯಲು ಬಯಸುತ್ತಿದ್ದಾರೆ. ಹೀಗಾಗಿ ಆನ್‌ಲೈನ್ ಮೂಲಕ ಬುಕಿಂಗ್ ಹಾಗೂ ಸ್ಟೋರ್ ಮುಂದೆ ಕ್ಯೂ ನಿಂತಿರುವ ದೃಶ್ಯಗಳು ವೈರಲ್ ಆಗಿತ್ತು. ಇದೀಗ ಟಾಟಾ ಗ್ರೂಪ್‌ನ ಬಿಗ್‌ಬಾಸ್ಕೆಟ್ ಐಫೋನ್ 16 ಬುಕ್ ಮಾಡಿದ 10 ನಿಮಿಷದಲ್ಲಿ ಡೆಲಿವರಿ ಮಾಡಲಿದೆ.
ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಸ್ಟರ್‌ಸ್ಟ್ರೋಕ್, ಕೇವಲ 13 ಸಾವಿರ ಇಎಂಐನಲ್ಲಿ ಐಫೋನ್ 16 !
ಇನ್ನು ಬಿಗ್‌ಬಾಸ್ಕೆಟ್ ಮೂಲಕ ಐಫೋನ್ ಖರೀದಿಸುವ ಗ್ರಾಹಕರಿಗೆ ಆ್ಯಪಲ್ ಸ್ಟೋರ್ ಬೆಲೆಯಲ್ಲೇ ಲಭ್ಯವಿದೆ. ಹೀಗಾಗಿ ಗ್ರಾಹಕರಿಗೆ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗದಂತೆ ಬಿಗ್‌ಬಾಸ್ಕೆಟ್ ನೋಡಿಕೊಂಡಿದೆ. ನಗರ ಪ್ರದೇಶಗಲ್ಲಿ ಬಿಗ್‌ಬಾಸ್ಕೆಟ್ ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ನಗರದ ಜನರು ಬಿಗ್‌ಬಾಸ್ಕೆಟ್ ಮೂಲಕ 10 ನಿಮಿಷದಲ್ಲಿ ಐಫೋನ್ 16 ಸೀರಿಸ್ ಪಡೆಯಲು ಸಾಧ್ಯವಿದೆ.
ಟಾಟಾ ಗ್ರೂಪ್ ಇದೀಗ ಐಫೋನ್ 16 ಸೀರಿಸ್ ಫೋನ್ ವಿತರಣೆಗೆ ಇಳಿದಿರುವುದು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಬಿಗ್‌ಬಾಸ್ಕೆಟ್ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ತನ್ನದೇ ಆದರ ಡಿಸ್ಕೌಂಟ್ ಆಫರ್ ನೀಡುವ ಕುರಿತು ಚಿಂತಿಸುತ್ತಿದೆ. ಹಂತ ಹಂತವಾಗಿ ಮಾರುಕಟ್ಟೆ ಹಾಗೂ ವಿತರಣೆ ವಿಸ್ತರಿಸಲು ಬಿಗ್‌ಬಾಸ್ಕೆಟ್ ಮುಂದಾಗಿದೆ. ನಂಬಿಕಸ್ಥ ಟಾಟಾ ಗ್ರೂಪ್ ಇದೀಗ ಐಫೋನ್ ವಿತರಣೆ ಮಾರುಕಟ್ಟೆಗೆ ಪ್ರವೇಶ ಪಡೆದಿರುವುದು ಗ್ರಾಹಕರ ವಿಶ್ವಾಸಾರ್ಹತೆ ಹೆಚ್ಚಿಸಿದೆ.
ಕಳೆದ ತಿಂಗಳು ಆ್ಯಪಲ್ ಭಾರತದಲ್ಲಿ ಐಫೋನ್ 16 ಸೀರಿಸ್ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 20 ರಿಂದ ಐಫೋನ್ ಮಾರಾಟ ಆರಂಭಗೊಂಡಿದೆ. ಮೊದಲ ದಿನದಿಂದಲೇ ಭಾರಿ ಬೇಡಿಕೆ ವ್ಯಕ್ತವಾಗಿದೆ. ಆ್ಯಪಲ್ ಸ್ಟೋರ್ ಮುಂದೆ ಜನ ರಾತ್ರಿಯಿಂದಲೇ ಕ್ಯೂ ನಿಂತು ಫೋನ್ ಪಡೆದುಕೊಂಡಿದ್ದಾರೆ. ಇನ್ನು ಆನ್‌ಲೈನ್‌ನಲ್ಲಿ ಆಫರ್ ಸೇಲ್ ಮೂಲಕ ಐಫೋನ್ 16 ಸೀರಿಸ್ ಖರೀದಿಸುತ್ತಿದ್ದಾರೆ. ಭಾರತದಲ್ಲಿ ಐಫೋನ್ 16 ಸೀರಿಸ್ 79,900 ರೂಪಾಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲೆ ಬೆಲೆ 1.44 ಲಕ್ಷ ರೂಪಾಯಿ.
ಮಹಿಳೆ ಬಳಿ ಇತ್ತು 26 ಐಫೋನ್ 16 ಪ್ರೋ ಮ್ಯಾಕ್ಸ್, ತಪಾಸಣೆ ವೇಳೆ ಅಧಿಕಾರಿಗಳೇ ದಂಗು!