ಬೆಳಗಾವಿ: ಚೀನಾಗೆ ಎಕ್ಸ್‌ಪೋರ್ಟ್ ಮಾಡುವ ಚಿಪ್ಪು ಹಂದಿ ಕಳ್ಳರ ಗ್ಯಾಂಗ್ ಮೇಲೆ ದಾಳಿ, ಇಬ್ಬರ ಬಂಧನ

ಖಾನಾಪುರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ ನಡೆಸಿ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾನಾಪುರ‌ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ‌ಕಾರ್ಯಾಚರಣೆ ನಡೆದಿದೆ. 

forest department raid the gang of shell pig thieves exporting to China at Khanapur in Belagavi grg

ಬೆಳಗಾವಿ(ಅ.02):  ಚೀನಾಗೆ ಎಕ್ಸ್‌ಪೋರ್ಟ್ ಮಾಡುವ ಚಿಪ್ಪು ಹಂದಿ ಕಳ್ಳರ ಗ್ಯಾಂಗ್ ಅರಣ್ಯ ಇಲಾಖೆ ಬಂಧಿಸಿದ ಘಟನೆ ಜಿಲ್ಲೆಯ ಖಾನಾಪುರ‌ದಲ್ಲಿ ಇಂದು(ಬುಧವಾರ) ನಡೆದಿದೆ.  ಅರಣ್ಯ ಇಲಾಖೆ ಅಧಿಕಾರಿಗಳುಚಿಪ್ಪು ಹಂದಿಯ ಅಂತಾರಾಜ್ಯ ಕಳ್ಳರ ಖೆಡ್ಡಾಕ್ಕೆ ಕೆಡವಿದ್ದಾರೆ.  

ಖಾನಾಪುರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ ನಡೆಸಿ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾನಾಪುರ‌ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ‌ಕಾರ್ಯಾಚರಣೆ ನಡೆದಿದೆ. 
ನೆರೆ ರಾಷ್ಟ್ರ ಚೀನಾದಲ್ಲಿ ಔಷಧಿ ಉತ್ಪಾದನೆಗೆಗೆ ಅತಿಹೆಚ್ಚು ‌ಚಿಪ್ಪು ಹಂದಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಖದೀಮರ ಗ್ಯಾಂಗ್‌ ಚೀನಾಗೆ ‌ಚಿಪ್ಪು ಹಂದಿ ಕಳ್ಳ ಸಾಗಣೆ ಮೂಲಕ ರಫ್ತು ಮಾಡುತ್ತಿದ್ದರು. 

ಹಾವೇರಿ: ಕಾಮದಾಹಕ್ಕೆ ತಾಳಿ ಕಟ್ಟಿದ ಗಂಡನನ್ನೇ ಕೊಂದ ಐನಾತಿ ಹೆಂಡ್ತಿ!

ಖಾನಾಪುರದ‌ ಅರಣ್ಯ ಪ್ರದೇಶದಲ್ಲಿ ‌ಚಿಪ್ಪುಹಂದಿ ಬೇಟೆಯಾಡಿ‌ ಚೀನಾಗೆ ಸಾಗಿಸುತ್ತಿದ್ದ ಜಾಲವೊಂದನ್ನ ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಕಾರ್ಯಾಚರಣೆ ‌ವೇಳೆ ಇಬ್ಬರು ಆರೋಪಿಗಳ ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. 

ಈ ಗ್ಯಾಂಗ್ ಖಾನಾಪುರ ‌ತಾಲೂಕಿನ‌ ಲೋಂಡಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಈ ವೇಳೆ ದಾಳಿ ನಡೆಸಿ ಚಿಪ್ಪು ಹಂದಿ ರಕ್ಷಿಸಿ, ಇಬ್ಬರು ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಪರಾರಿ ಆಗಿರುವ ಮತ್ತಿಬ್ಬರು ಆರೋಪಿಗಳಿಗೆ ವಿಶೇಷ ‌ತಂಡ‌ ರಚಿಸಿ ಶೋಧಕಾರ್ಯ ಅರಂಭಿಸಿದ್ದಾರೆ. ಲೋಂಡಾ‌ ಆರ್‌ಎಫ್ಓ ವೈ.ಪಿ ತೇಜ್, ಖಾನಾಪುರ ಆರ್‌ಎಫ್‌ಓ ಶ್ರೀಕಾಂತ್ ‌ಪಾಟೀಲ ಕಾರ್ಯಾಚರಣೆಗೆ ಸಾಥ್ ನೀಡಿದ್ದರು. 

Latest Videos
Follow Us:
Download App:
  • android
  • ios