ಕೇತುಗ್ರಸ್ತ ಚಂದ್ರಗ್ರಹಣ ಯಾರು, ಏನು ಮಾಡಬೇಕು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 1:49 PM IST
Longest lunar eclipse of the century what should be done
Highlights

ಜುಲೈ 27ರಂದು ಹಲವು ಖಗೋಳ ಅದ್ಭುತಗಳಿಗೆ ಸಾಕ್ಷಿಯಾಗಲಿರುವ ಶತಮಾನದ ಸುದೀರ್ಘ, ಸಂಪೂರ್ಣ, ಖಗ್ರಾಸ ಚಂದ್ರ ಗ್ರಹಣದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಸೂತಕವೆಂದೇ ಬಯಸುವ ಈ ಗ್ರಹಣ ಸಂದರ್ಭಗಳಲ್ಲಿ ಯಾರು, ಯಾವ ಆಚರಣೆಗಳನ್ನು ಮಾಡಿದರೊಳಿತು?

ಶ್ರೀ ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆ ಜುಲೈ 27, 2018ರ ಶುಕ್ರವಾರ ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ, ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ, ಕೇತುಗ್ರಸ್ತ  ಚಂದ್ರಗ್ರಹಣ ಸಂಭವಿಸುತ್ತದೆ. ಸೂತಕ ಸಮಯವೆಂದೇ ಭಾವಿಸುವ ಈ ಗ್ರಹಣ ಸಮಯದಲ್ಲಿ ಕೆಲವು ಆಚರಣೆಗಳನ್ನು ತಪ್ಪದೇ ಪಾಲಿಸಬೇಕೆಂದು ಹಿರಿಯರು ಹೇಳುತ್ತಾರೆ. ಈ ಬಗ್ಗೆಯೊಂದು ಸುತ್ತು.


ಗ್ರಹಣ ಸ್ಪರ್ಶ ಕಾಲ: ರಾತ್ರಿ 11.54

ಗ್ರಹಣ ಮಧ್ಯ ಕಾಲ: ಮಧ್ಯರಾತ್ರಿ 01.52 

ಗ್ರಹಣ ಮೋಕ್ಷ ಕಾಲ: 03.49 ಬೆಳಗಿನ ಜಾವ

ಭಾರತದಲ್ಲಿಯೂ ಇದೆ ಗ್ರಹಣ:

ಗ್ರಹಣವು ಭಾರತದಲ್ಲಿಯೂ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ. 

ಆಷಾಢ ಮಾಸದ ಶುಕ್ಲ ಪೌರ್ಣಿಮೆಯಂದು ಚಂದ್ರ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ ರಾತ್ರಿ 11.54 ರಿಂದ ಪ್ರಾರಂಭವಾಗಿ ರಾತ್ರಿ 03.49ಕ್ಕೆ ಮೋಕ್ಷ ಕಾಲವಾಗಿರುತ್ತದೆ.

ಊಟ ಎಷ್ಟೊತ್ತಿಗೆ ಮಾಡಬೇಕು?

- ಹಗಲು 12.29 ಗಂಟೆಯವರೆಗೆ ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಆ ದಿನ ಮಧ್ಯಾಹ್ನ 03-38ರವರೆಗೂ ಆಹಾರ ಸೇವಿಸಬಹುದು.

- ಗ್ರಹಣ ಮಧ್ಯಕಾಲಾನಂತರ ಅಂದರೆ ರಾತ್ರಿ 01.51ರ ನಂತರ ತರ್ಪಣ ಬಿಡಬಹುದು.

- ಶ್ರಾದ್ಧವು ಜುಲೈ 27, 2018ಕ್ಕೆ ಇದ್ದರೆ, ಮಾರನೇ ದಿನ ಶನಿವಾರ ನಡೆಸಬಹುದು. 

- 'ಉತ್ತರಾಷಾಢ' ನಕ್ಷತ್ರದವರೂ, 'ಶ್ರವಣ' ನಕ್ಷತ್ರದವರೂ, 'ಮಕರ', 'ಧನಸ್ಸು' ರಾಶಿಯವರೂ ಈ ಕೆಳಗಿನ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು,  ಗ್ರಹಣ ಮುಗಿಯುವವರೆಗೂ ಜತೆಯಲ್ಲಿಟ್ಟುಕೊಳ್ಳಬೇಕು. ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಸಮೇತ ದಾನ ಮಾಡಬೇಕು. 

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |


ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |


ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||2||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3|


ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳೇನು?
- ಸೂತಕ ಸಮಯವೆಂದು ಭಾವಿಸುವ ಗ್ರಹಣ ಕಾಲದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಅನಿವಾರ್ಯ...
- ಗ್ರಹಣದ ಆರಂಭ ಅಂತ್ಯಗಳಲ್ಲಿ ಧರಿಸಿದ ಬಟ್ಟೆ ಸಮೇತ ಸ್ನಾನ ಮಾಡ ಬೇಕು. 
- ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.
- ಚಂದ್ರ ಗ್ರಹಣದ ಸೂತಕವು ಗ್ರಹಣ ಆರಂಭದ ಒಂಬತ್ತು ಗಂಟೆ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.
- ಗ್ರಹಣ ಕಾಲದಲ್ಲಿಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.
- ಗ್ರಹಣ ಮೋಕ್ಷ ಕಾಲದ  ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ,  ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. 
- ದೇವಾಲಯ ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು. - 
- ಶೌಚಾಲಯವನ್ನು ಬಳಸಬಾರದು. 
- ಗ್ರಹಣ ಕಾಲದಲ್ಲಿ  ಅಲಂಕಾರ ಮಾಡಿಕೊಳ್ಳಬಾರದು.
- 'ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ' ಎಲ್ಲರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.
- ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. 
- ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು.  ‌                ‌            ‌            
- ಜನನ ಹಾಗೂ ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು. 
- ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
- ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.- ಗ್ರಹಣ ಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು. ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನ ಮಾಡಬಹುದು. 
- ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂಥವರು, ಹಾಗೆಯೇ ಮಾಡಬೇಕು. 
- ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆಯೋ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆ ಹಾಕಿರಬೇಕು. 
- ಗ್ರಹಣ ಆರಂಭದಿಂದ ಅಂತ್ಯವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು.  ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. 

ಅನಾಹುತ ಹೊತ್ತು ತರಲಿವೆಯಾ ರಕ್ತ ಚಂದ್ರ ಗ್ರಹಣ?

 

loader