ಈ ವೇಳೆ ನಟ ಯಶ್ ಅವರು ‘ಎಲ್ಲರಿಗೂ ಒಳ್ಳೆಯದಾಗಲಿ, ಮುಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಇರಲಿ.. ನಾನು ಯಾವಾಗ್ಲೂ ಬರ್ತೀನಿ, ಪ್ರತಿ ವರ್ಷ ಬರ್ತೀನಿ.. ನನ್ನ ಎಲ್ಲಾ ಸಿನಿಮಾ ಬಿಡುಗಡೆ ಸಮಯದಲ್ಲೂ ಬರ್ತಿನಿ’ಎಂದಿದ್ದಾರೆ. ಜೊತೆಗೆ, ಮತ್ತೊಂದು ಗುಟ್ಟು ರಟ್ಟು ಮಾಡಿದ್ದಾರೆ..
Ahead of the release of his movie 'Toxic' tomorrow, Yash visited Dharmasthala and Talked infront of camera like this-ನಾಳೆ ಬಿಡುಗಡೆ ಆಗಲಿರುವ ತಮ್ಮ ಟಾಕ್ಸಿಕ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ, ಧರ್ಮಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್!
ಕನ್ನಡ ನಟ, ಇದೀಗ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇಂದು, ಅಂದರೆ 25 ಆಗಸ್ಟ್ 2026ರಂದು ಕರ್ನಾಟಕದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಡನೆ ಮಾತನ್ನಾಡಿದ್ದಾರೆ. ನಾಳೆ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ತಮ್ಮ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಟ ಯಶ್ ಅವರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ನಟ ಯಶ್ ಅವರು 'ಎಲ್ಲರಿಗೂ ಒಳ್ಳೆಯದಾಗಲಿ, ಮುಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಇರಲಿ.. ನಾನು ಯಾವಾಗ್ಲೂ ಬರ್ತೀನಿ, ಪ್ರತಿ ವರ್ಷ ಬರ್ತೀನಿ.. ನನ್ನ ಎಲ್ಲಾ ಸಿನಿಮಾ ಬಿಡುಗಡೆ ಸಮಯದಲ್ಲೂ ಬರ್ತಿನಿ.. ಈ ಬಾರಿ ಸಿನಿಮಾ ಬಿಡುಗಡೆ ಹಿಂದಿನ ದಿನ ಇಲ್ಲಿಗೆ ಬರುವ ಅವಕಾಶ ಸಿಕ್ತು.. ಸಿನಿಮಾ ಬಿಡುಗಡೆಯ ಎಲ್ಲಾ ಕೆಲಸಗಳನ್ನು ಮಗಿಸಿ, ಇಲ್ಲಿಗೆ ಬಂದಿದ್ದೇನೆ. ಮಂಜುನಾಥನ ಆಶೀರ್ವಾದ ಎಲ್ಲರ ಮೇಲಿರಲಿ, ಎಲ್ಲರಿಗೂ ಒಳ್ಳೆಯದಾಗಲಿ, ಜನರ ಆಶೀರ್ವಾದ ನಮ್ಮ ಮೇಲೆ ಇರಲಿ' ಎಂದಿದ್ದಾರೆ ಮಾಧ್ಯಮಗಳ ಕ್ಯಾಮೆರಾ ಮುಂದೆ 'ಟಾಕ್ಸಿಕ್' ನಟ ಯಶ್.
ಹೌದು, ಯಶ್ ಅವರು ತಮ್ಮ ಕೆಜಿಎಫ್ ಸಿನಿಮಾದ ಬಿಡುಗಡೆ ಸಮಯದಿಂದ ಈ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾ ಬಿಡುಗಡೆ ವೇಳೆ ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದ ನಟ ಯಶ್ ಅವರು, ಟಾಕ್ಸಿಕ್ ಸಿನಿಮಾದ ಮಹೂರ್ತದ ಸಮಯದಲ್ಲೂ ಹೋಗಿ ಭೇಟಿಯಾಗಿದ್ದರು. ಇದೀಗ ತಮ್ಮ ಟಾಕ್ಸಿಕ್ ಸಿನಿಮಾದ ರಿಲೀಸ್ ಸಮಯದಲ್ಲೂ ಮತ್ತೆ ಅಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ, ಪ್ರತಿವರ್ಷ ತಾವು ಧರ್ಮಸ್ಥಳಕ್ಕೆ ಭೆಟಿ ಕೊಡುವ ಸಂಪ್ರದಾಯದ ಸೀಕ್ರೆಟ್‌ಅನ್ನು ಅವರಿಂದು ಕ್ಯಾಮೆರಾ ಎದುರು ರಿವೀಲ್ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಟ ಯಶ್ ಅವರು ಉಜಿರೆಯ 'ಸೂರ್ಯ ದೇವಸ್ಥಾನ'ಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲಿಯೂ ಕೂಡ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಬಳಿಕ ಅವರು ಟಾಕ್ಸಿಕ್ ಬಿಡುಗಡೆ ಕೆಲಸದಲ್ಲಿ ಮತ್ತೆ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಾಳೆ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾದ ಬಿಡುಗಡೆ ಜಗತ್ತಿನಾದ್ಯಂತ ನಡೆಯಲಿದೆ. ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ಕಡೆ ನಾಳೆ ಬೆಳಿಗ್ಗೆ 6-00 ಗಂಟೆಗೆ ಮೊದಲ ಶೋ ಶುರುವಾಗಲಿದೆ ಎಂಬ ಮಾಹಿತಿ ಬಂದಿದೆ.
ಅಂದಹಾಗೆ, ಪ್ರಪಂಚದಾದ್ಯಂತ ಟಾಕ್ಸಿಕ್ ಸಿನಿಮಾ 12 ಸಾವಿರಕ್ಕಿಂತ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲಿ 500 ಕ್ಕೂ ಹೆಚ್ಚು ತೆರೆಗಳಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಿಡುಗಡೆ ಕಾಣಲಿದ್ದು, ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ಒಟ್ಟಿನಲ್ಲಿ, ನಾಳೆಯಿಂದ ಕನ್ನಡನಾಡು ಸೇರಿದಂತೆ ಭಾರತ ಹಾಗೂ ಜಗತ್ತಿನಾದ್ಯಂತ ಕನ್ನಡಿಗ ಯಶ್ ಅವರನ್ನು 'ಪ್ಯಾನ್ ವರ್ಲ್ಡ್ ಸ್ಟಾರ್' ಮಾಡುತ್ತಿರುವ ಟಾಕ್ಸಿಕ್ ಸಿನಿಮಾದ ಹಬ್ಬ ಶುರುವಾಗಲಿದೆ. ಕನ್ನಡದ ನಟ, ಪ್ಯಾನ್ ಇಂಡಿಯಾ ನಟ ಇದೀಗ 'ಪ್ಯಾನ್ ವರ್ಲ್ಡ್ ಸ್ಟಾರ್' ಆಗಲಿರುವ ಸಂತಸದ ಕ್ಷಣ ನಾಳೆ ಅಧಿಕೃತವಾಗಿ ನಡೆಯಲಿದೆ.


