ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಾಳೆ ಅಂದರೆ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗದೆ. ಇದೀಗ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ಬೆಂಗಳೂರು ನ್ಯಾಯಾಲಯದಿಂದ 'ಜಾನ್ ಡೋ' (John Doe) ಆದೇಶ ಹೊರಡಿಸಲಾಗಿದೆ.
Yash Toxic Movie- Bengaluru Court issued John Doe Order- ಯಶ್ ಸಿನಿಮಾ 'ಟಾಕ್ಸಿಕ್' ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ನ್ಯಾಯಾಲಯದಿಂದ 'ಜಾನ್ ಡೋ' ಆದೇಶ:
'ಜಾನ್ ಡೋ' ಆದೇಶ:
ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಾಳೆ ಅಂದರೆ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಇದೀಗ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ಬೆಂಗಳೂರು ನ್ಯಾಯಾಲಯದಿಂದ 'ಜಾನ್ ಡೋ' (John Doe) ಆದೇಶ ನೀಡಿದೆ. (ಗಮನಿಸಿ: ನ್ಯಾಯಾಂಗ ವ್ಯವಸ್ಥೆಯಲ್ಲಿ 'ಜಾನ್ ಡೋ' ಆದೇಶ ಎಂದರೆ, ಯಾರೋ ಅನಾಮಧೇಯ ವ್ಯಕ್ತಿಗಳು ಅಥವಾ ಸಂಸ್ಥೆಗಳು ಚಿತ್ರದ ಬಗ್ಗೆ ಸುಳ್ಳು ಸುದ್ದಿ ಅಥವಾ ಮಾನಹಾನಿಕರ ವಿಷಯಗಳನ್ನು ಹರಡದಂತೆ ಮುನ್ನೆಚ್ಚರಿಕೆಯಾಗಿ ಹೊರಡಿಸುವ ನಿರ್ಬಂಧಕ ಆದೇಶವಾಗಿದೆ.)
ಟಾಕ್ಸಿಕ್ ಸಿನಿಮಾ 'ವಯಸ್ಕರಿಗಾಗಿ'
ಮುಹೂರ್ತದ ದಿನದಿಂದಲೂ ನಟ ಯಶ್ ಹಾಗೂ ಟೀಮ್, ಟಾಕ್ಸಿಕ್ ಸಿನಿಮಾ 'ವಯಸ್ಕರಿಗಾಗಿ' ಎಂದು ಹೇಳುತ್ತಲೇ ಬಂದಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ಸಿನಿಮಾ ನೋಡಲು ಕಾನೂನಿನ ಪ್ರಕಾರ ಅನುಮತಿ ಇಲ್ಲ. ಆದರೆ, ಸಾಂಗ್ಸ್ ಹಾಗೂ ಟ್ರೇಲರ್ ಬಿಡುಗಡೆ ಬಳಿಕ, ನಟ ಯಶ್ ಹಾಗೂ ಟೀಮ್, ಮುಖ್ಯವಾಗಿ ಯಶ್-ಕಿಯಾರಾ ಅಡ್ವಾನಿ ಸಾಂಗ್ಸ್ ಸಾಕಷ್ಟು ಟೀಕೆಯನ್ನು ಎದುರಿಸಿದೆ. ಈ ಹಿನ್ನೆಲೆಯಲ್ಲಿ ಎಂಬಂತೆ, ಇದೀಗ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ಬೆಂಗಳೂರು ನ್ಯಾಯಾಲಯದಿಂದ 'ಜಾನ್ ಡೋ' (John Doe) ಆದೇಶ ಬಂದಿದೆ.
ಅಂದಹಾಗೆ, ರಾಕಿಂಗ್ ಸ್ಟಾರ್ ಯಶ್ ಅವರು ಇಂದು, ಅಂದರೆ 25 ಆಗಸ್ಟ್ 2026ರಂದು ಕರ್ನಾಟಕದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಳೆ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ತಮ್ಮ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಟ ಯಶ್ ಅವರು ಧರ್ಮಸ್ಥಳಕ್ಕೆ ಆಗಮಿಸಿ ಸಂಪ್ರದಾಯಬದ್ಧ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಇಂದು, ಅಂದರೆ 25 ಆಗಸ್ಟ್ 2026ರಂದು ಕರ್ನಾಟಕದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಳೆ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ತಮ್ಮ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಟ ಯಶ್ ಅವರು ಧರ್ಮಸ್ಥಳಕ್ಕೆ ಆಗಮಿಸಿ ಸಂಪ್ರದಾಯಬದ್ಧ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ಯಶ್ ಅವರು ತಮ್ಮ ಕೆಜಿಎಫ್ ಸಿನಿಮಾದ ಬಿಡುಗಡೆ ಸಮಯದಿಂದ ಈ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾ ಬಿಡುಗಡೆ ವೇಳೆ ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದ ನಟ ಯಶ್ ಅವರು, ಟಾಕ್ಸಿಕ್ ಸಿನಿಮಾದ ಮಹೂರ್ತದ ಸಮಯದಲ್ಲೂ ಹೋಗಿ ಭೇಟಿಯಾಗಿದ್ದರು.
ಇದೀಗ ತಮ್ಮ ಟಾಕ್ಸಿಕ್ ಸಿನಿಮಾದ ರಿಲೀಸ್ ಸಮಯದಲ್ಲೂ ಮತ್ತೆ ಅಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಟ ಯಶ್ ಅವರು ಉಜಿರೆಯ 'ಸೂರ್ಯ ದೇವಸ್ಥಾನ'ಕ್ಕೂ ಭೇಟಿ ನೀಡಲಿದ್ದಾರೆ.


