ಬಿಗ್ ಬಾಸ್ ತೆಲುಗು 7ನೇ ಸೀಸನ್ ಸ್ಪರ್ಧಿ ಪ್ರಿಯಾಂಕಾ ಜೈನ್ ತಮ್ಮ ಲವರ್ ಬಗ್ಗೆ ಹಾಗೂ ಮದುವೆ ಬಗ್ಗೆ ಹೇಳಿದ್ದಾರೆ. ತಮ್ಮ ತುಟಿಗಳ ಬಗ್ಗೆ ಬಾಯ್ ಫ್ರೆಂಡ್ ಮಾಡಿದ ಕಾಮೆಂಟ್ ಬಗ್ಗೆ ರಿವೀಲ್ ಮಾಡಿದ್ದಾರೆ.
- Home
- Entertainment
- News
- Kannada Entertainment Live: ಬಿಗ್ ಬಾಸ್ ಪ್ರಿಯಾಂಕಾ ಜೈನ್ ಲವ್ ಸ್ಟೋರಿ - ಗೆಳೆಯ ಹೇಳಿದ ತುಟಿ ರಹಸ್ಯ ಬಿಚ್ಚಿಟ್ಟ ನಟಿ!
Kannada Entertainment Live: ಬಿಗ್ ಬಾಸ್ ಪ್ರಿಯಾಂಕಾ ಜೈನ್ ಲವ್ ಸ್ಟೋರಿ - ಗೆಳೆಯ ಹೇಳಿದ ತುಟಿ ರಹಸ್ಯ ಬಿಚ್ಚಿಟ್ಟ ನಟಿ!

ಬೆಂಗಳೂರು (ಮೇ.26): ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೀಸ್ ಕಡ್ಡಿ (Sees Kaddi) ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಬೆಳ್ಳಿತೆರೆ, ಕಿರುತರೆ, ಒಟಿಟಿ ಹಾಗೂ ಮನರಂಜನಾ ಲೋಕದ ಇತರ ಸುದ್ದಿಗಳ ಕ್ಷಣ ಕ್ಷಣದ ಅಪ್ಡೇಟ್..
Kannada Entertainment Live 27th May:ಬಿಗ್ ಬಾಸ್ ಪ್ರಿಯಾಂಕಾ ಜೈನ್ ಲವ್ ಸ್ಟೋರಿ - ಗೆಳೆಯ ಹೇಳಿದ ತುಟಿ ರಹಸ್ಯ ಬಿಚ್ಚಿಟ್ಟ ನಟಿ!
Kannada Entertainment Live 27th May:ಮಡೆನೂರು ಮನುಗೆ ಕಿರುತೆರೆ, ಹಿರಿತೆರೆಯಿಂದ ಅಸಹಕಾರ- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಮಡೆನೂರು ಮನು ಮಾತನಾಡಿರುವುದು ಎನ್ನಲಾದ ವೈರಲ್ ಆಡಿಯೋ ಈಗ ಇನ್ನೊಂದು ಸಂಕಷ್ಟ ತಂದಿದೆ. ಮಡೆನೂರು ಮನು ಅವರು ಸ್ಟಾರ್ ನಟರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
Kannada Entertainment Live 27th May:ಕೈ ಸಹಾಯವಿಲ್ದೇ ಮಾವು ತಿಂದು, ಪಾತ್ರೆ ಸೋಪ್ನಲ್ಲಿ ಬಟ್ಟೆ ತೊಳೆದ ಶುಭಾ ಪೂಂಜಾ!
ಸ್ಯಾಂಡಲ್‌ವುಡ್‌ನ ನಟಿ ಶುಭಾ ಪೂಂಜಾ ಇದೀಗ ಕೈ ಸಹಾಯವಿಲ್ಲದೇ ಮಾವಿನ ಹಣ್ಣಿನ ಸಿಪ್ಪೆ ಬಿಡಿಸಿ ತಿನ್ನುವ ಹಾಗೂ ವಾಷಿಂಗ್ ಮಷಿನ್ ಸಹಾಯವಿಲ್ಲದೇ ಬಟ್ಟೆ ತೊಳೆಯುವ ಚಾಲೆಂಜ್ ತೆಗೆದುಕೊಂಡು ಸಕ್ಸಸ್ ಆಗಿದ್ದಾರೆ. ನೋಡಿ ಈ ವಿಡಿಯೋ .
Kannada Entertainment Live 27th May:30 ಲಕ್ಷದ ಕನ್ನಡ ಸಿನಿಮಾ ಗಳಿಸಿದ್ದು 5 ಕೋಟಿ - ಕ್ಷಣ ಕ್ಷಣಕ್ಕೂ ಭಯ ಬೀಳಿಸೋ ಹಾರರ್ ಕಥೆ!
2013ರಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಫೌಂಡ್ ಫೋಟೇಜ್ ಚಿತ್ರ. ಚಾರಣಕ್ಕೆಂದು ಅರಣ್ಯಕ್ಕೆ ಹೋದ ಯುವಕರು ಕಾಣೆಯಾಗಿ ಸಾಯುವ ಘಟನೆಗಳ ಸುತ್ತ ಸಿನಿಮಾ ನಡೆಯುತ್ತದೆ.
Kannada Entertainment Live 27th May:ವಿಶ್ವದ ಸುರಸುಂದರಾಂಗನೆಂಬ ಪಟ್ಟ ಯಾವ ನಟನಿಗೆ ಸಿಕ್ಕಿದೆ ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್!
ಒಬ್ಬೊಬ್ಬರಿಗೆ ಒಬ್ಬೊಬ್ಬರು ಸುಂದರ-ಸುಂದರಿಯಾಗಿ ಕಂಡರೂ ವಿಶ್ವದ ಸುರಸುಂದರಾಂಗನೆಂದ ಪಟ್ಟ ಒಬ್ಬ ನಟನಿಗೆ ಸಿಕ್ಕಿದೆ. ಅವರು ಯಾರು ಎನ್ನುವುದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್...
Kannada Entertainment Live 27th May:ವಿಜಯಾಂಬಿಕಾಗೆ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟ ಶ್ರಾವಣಿ - ಇದಪ್ಪಾ ಟ್ವಿಸ್ಟ್ ಅಂದ್ರು ವೀಕ್ಷಕರು!
Kannada Entertainment Live 27th May:800 ಸಂಚಿಕೆ ಮುಗಿಸಿದ ಭಾಗ್ಯಲಕ್ಷ್ಮಿ - ಭಾಗ್ಯಳ ಲೈಫ್ನಲ್ಲಿ ಹೊಸ ಎಂಟ್ರಿ? ಯಾರೀತ?
ಹಲವು ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿರುವ ಭಾಗ್ಯಲಕ್ಷ್ಮಿ ಸೀರಿಯಲ್ 800 ಕಂತುಗಳನ್ನು ಪೂರೈಸಿರುವ ಹೊತ್ತಿನಲ್ಲಿಯೇ ಭಾಗ್ಯಳ ಲೈಫ್ನಲ್ಲಿ ಹೊಸಬನ ಪ್ರವೇಶವಾಗಿದೆ. ಯಾರೀತ?
Kannada Entertainment Live 27th May:ತೆಲುಗು ಚಿತ್ರರಂಗ ಕಟ್ಟಿ ಬೆಳೆಸಿದ ನಿರ್ದೇಶಕ ದಾಸರಿ ನಾರಾಯಣರಾವ್ ₹100 ಕೋಟಿ ಆಸ್ತಿ ಲೂಟಿ!
ತೆಲುಗು ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಮಹಾನ್ ನಿರ್ದೇಶಕ ದಾಸರಿ ನಾರಾಯಣ ರಾವ್ ಸಂಪಾದಿಸಿದ ನೂರಾರು ಕೋಟಿ ಆಸ್ತಿ ಏನಾಯ್ತು? ಗುರುಗಳೇ ಅಂತ ನಂಬಿದವರೇ ಲೂಟಿ ಮಾಡಿದ್ರಾ? ದಂಗುಬಡಿಸುವ ವಿಷಯಗಳು ಬಹಿರಂಗ ಶಿಷ್ಯ!
Kannada Entertainment Live 27th May:ಇಶಾನ್‌ಗೆ 53ವರ್ಷದ ಟಬು ಜೋಡಿ - 24 ವರ್ಷ ವಯಸ್ಸಿನ ಅಂತರದ ರೊಮ್ಯಾನ್ಸ್!
53 ವರ್ಷದ ಟಬು ಮತ್ತು 29 ವರ್ಷದ ಇಶಾನ್ ಖಟ್ಟರ್ ನಡುವಿನ ಆನ್-ಸ್ಕ್ರೀನ್ ರೊಮ್ಯಾನ್ಸ್ ಸುದ್ದಿಯಲ್ಲಿದೆ. 24 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ಇಷಾನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Kannada Entertainment Live 27th May:Spirit ಒಪ್ಪಿಕೊಂಡು ಮೋಸ ಮಾಡಿದ್ರಾ ದೀಪಿಕಾ ಪಡುಕೋಣೆ? ಆಕ್ರೋಶ ಹೊರಹಾಕಿದ 'ಅರ್ಜುನ್ ರೆಡ್ಡಿ' ಡೈರೆಕ್ಟರ್!
Deepika Padukone, Prabhas Spirit Movie: ದೀಪಿಕಾ ಪಡುಕೋಣೆ 'ಸ್ಪಿರಿಟ್' ಚಿತ್ರದಿಂದ ಹೊರಬಿದ್ದಿದ್ದು, ತೃಪ್ತಿ ದಿಮ್ರಿ ಅವರು ದೀಪಿಕಾ ಸ್ಥಾನವನ್ನು ತುಂಬಲಿದ್ದಾರೆ. ದೀಪಿಕಾ ಕಥೆ ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kannada Entertainment Live 27th May:ಬಾನು ಮುಷ್ಟಾಕ್ ಸಾಧನೆ ಮರೆಯೋಯ್ತು.. ಮಡೆನೂರು ಮನುಗೋಸ್ಕರ ಸುದ್ದಿಗೋಷ್ಠಿ ಬೇಕಾ? ಚಲನಚಿತ್ರ ಮಂಡಳಿಗೆ ಪ್ರಶ್ನೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಟರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಮಡೆನೂರು ಮನು ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದೆ.
Kannada Entertainment Live 27th May:Paaru Serial Actor Death - ಪ್ರಾರ್ಥನೆ ಫಲಿಸಲಿಲ್ಲ, ನಟ ಶ್ರೀಧರ್ ನಾಯ್ಕ್ ವಿಧಿವಶ
Paaru Kannada Serial Actor Shridhar Naik Death: ಪಾರು ಧಾರಾವಾಹಿ ನಟ ಶ್ರೀಧರ್ ಅವರು ಮೇ 26ರಂದು ನಿಧನರಾಗಿದ್ದಾರೆ. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತ್ಯಕ್ರಿಯೆಯನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ನೆರವೇರಿಸಲಾಗುವುದು.
Kannada Entertainment Live 27th May:35ನೇ ವಯಸ್ಸಲ್ಲೇ 10 ಮದ್ವೆಯಾದ ಕನ್ನಡದ ನಟಿ ಈಕೆ! ಇಬ್ಬರು ಮಕ್ಕಳ ಅಮ್ಮನ ಕುತೂಹಲದ ಸ್ಟೋರಿ ಇಲ್ಲಿದೆ...
35ನೇ ವಯಸ್ಸಲ್ಲೇ 10 ಮದ್ವೆಯಾದ ನಟಿ ಶ್ರದ್ಧಾ ಆರ್ಯರ ಕುತೂಹಲದ ಸ್ಟೋರಿ ಇದು. ಕನ್ನಡದ ಚಿತ್ರಗಳಲ್ಲಿಯೂ ನಟಿಸಿರೋ ಈಕೆ ಅಮ್ಮನಾದ ಬಳಿಕ ಹೇಗಿದ್ದಾರೆ ನೋಡಿ!
Kannada Entertainment Live 27th May:ಮಲೆನಾಡಿನ ಮಳೆಗೆ ಆಲಿಯಾ ಭಟ್ ಗಂಡ ರಾಯಭಾರಿ, ಏನಿದು ರಣಬೀರ್ ಕಪೂರ್ ಮೋಡಿ ?
ಮಲೆನಾಡಿನಾದ್ಯಂತ ಭಾರೀ ಮಳೆಯಿಂದಾಗಿ ಅನಾಹುತಗಳು ಸಂಭವಿಸಿವೆ. ಕಳಸದಲ್ಲಿ ರಸ್ತೆ ಗುಂಡಿಗಳಿಗೆ ರಣಬೀರ್ ಕಪೂರ್ ಫ್ಲೆಕ್ಸ್‌ಗಳನ್ನು ಅಳವಡಿಸಿ ಫುಟ್‌ಪಾತ್ ಗುಂಡಿಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮನೆ ಕುಸಿತ, ಮರ ಬಿದ್ದು ಗಾಯಗಳಾದ ಘಟನೆಗಳು ವರದಿಯಾಗಿವೆ.
Kannada Entertainment Live 27th May:ಪೆನ್ಸಿಲ್ ಸೂಕ್ಷ್ಮಗಳು ಪಾತ್ರಗಳಾಗಿ ಸಿನಿಮಾ ಆಗಿರೋ 'ಸೀಸ್ ಕಡ್ಡಿ' ಟ್ರೈಲರ್ ಬಿಡುಗಡೆ ಆಯ್ತು!
ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೀಸ್ ಕಡ್ಡಿ (Sees Kaddi) ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಐವರು ಪ್ರತಿಭಾನ್ವಿತ ನಿರ್ದೇಶಕರು ಅತಿಥಿಗಳಾಗಿ ಆಗಮಿಸಿದ್ದು ವಿಶೇಷ. ಬೀರ್ ಬಲ್ ಖ್ಯಾತಿಯ ಶ್ರೀನಿ, ಮಹಿರಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ, ಡೊಳ್ಳು ಖ್ಯಾತಿಯ ನಿರ್ದೇಶಕ ಸಾಗರ್ ಪುರಾಣಿಕ್, ಆಯುಷ್ ಮಲ್ಲಿ, ಚೆಲುವರಾಜ್ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.