35ನೇ ವಯಸ್ಸಲ್ಲೇ 10 ಮದ್ವೆಯಾದ ನಟಿ ಶ್ರದ್ಧಾ ಆರ್ಯರ ಕುತೂಹಲದ ಸ್ಟೋರಿ ಇದು. ಕನ್ನಡದ ಚಿತ್ರಗಳಲ್ಲಿಯೂ ನಟಿಸಿರೋ ಈಕೆ ಅಮ್ಮನಾದ ಬಳಿಕ ಹೇಗಿದ್ದಾರೆ ನೋಡಿ! 

ಕನ್ನಡದ ಮದುವೆ ಮನೆ ಮತ್ತು ಡಬಲ್ ಡೆಕ್ಕರ್ ಮನೆ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿ ಶ್ರದ್ಧಾ ಆರ್ಯ ಸದ್ಯ ಅವಳಿ ಮಕ್ಕಳ ಅಮ್ಮನಾಗಿದ್ದು, ಅಮ್ಮನಾಗಿ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ಕಳೆದ ನವೆಂಬರ್​ನಲ್ಲಿ ನಟಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಮಗುವನ್ನು ಎಷ್ಟು ಜತನದಿಂದ ಕಾಪಾಡಬೇಕು, ಅದು ಕೆಲವೊಮ್ಮೆ ಎಷ್ಟು ಸಾಹಸದ ಕೆಲಸ ಎನ್ನುವುದು ಪ್ರತಿಯೊಬ್ಬ ಅಮ್ಮನಿಗೂ ತಿಳಿದಿರುವ ವಿಷಯ. ಆದರೆ ಅವಳಿ ಮಕ್ಕಳನ್ನು ಹೆತ್ತ ಅಮ್ಮಂದಿರ ಪಾಡು ಮಾತ್ರ ದುಪ್ಪಟ್ಟು ಕಷ್ಟವೇ ಸರಿ. ಬಹುತೇಕ ಎಲ್ಲಾ ಪುಟಾಣಿಗಳೂ ಅಮ್ಮ ಕೆಲಸ ಮಾಡುವಾಗ ನಿದ್ದೆ ಮಾಡಿ, ರಾತ್ರಿ ಅಮ್ಮ ಮಲಗಿದಾಗ ಎಚ್ಚರದಿಂದ ಇದ್ದು ಅಮ್ಮನನ್ನೂ ಎಚ್ಚರದಿಂದ ಇರುವಂತೆ ಮಾಡುವುದು ಸಾಮಾನ್ಯ. ಅದೇ ಕಾರಣಕ್ಕೆ ಅಬ್ಬಬ್ಬಾ ಎಂದು ಎಷ್ಟೋ ಅಮ್ಮಂದಿರು ಹೇಳುವುದು ಉಂಟು.ಮಗುವನ್ನು ನೋಡಿಕೊಳ್ಳುವುದು ಎಂದರೆ ಸುಲಭದ ಮಾತೂ ಅಲ್ಲ ಬಿಡಿ. ಇದೀಗ ಶ್ರದ್ಧಾ ಆರ್ಯ ಅವರು ರೀಲ್ಸ್​ ಮಾಡಿದ್ದು, ಮಗುವನ್ನು ನೋಡಿಕೊಳ್ಳುವ ಪ್ರತಿಯೊಂದು ಅಮ್ಮನ ಸಂಕಷ್ಟವನ್ನು ಕೆಲವೇ ಸೆಕೆಂಡುಗಳಲ್ಲಿ ತೆರೆದಿಟ್ಟಿದ್ದಾರೆ.

ಅಷ್ಟಕ್ಕೂ, ಶ್ರದ್ಧಾ ಆರ್ಯ ಅವರ ಕಥೆ ಕೂಡ ಅಷ್ಟೇ ರೋಚಕವಾಗಿದೆ. ಕಳೆದ ವರ್ಷ ನಟಿ ನೀಡಿದ್ದ ಒಂದು ಹೇಳಿಕೆಯಿಂದ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದರು. ಈಗ ನನಗೆ 35 ವರ್ಷ ವಯಸ್ಸು. ಈ 35 ವರ್ಷಗಳಲ್ಲಿ ನಾನು 10 ಬಾರಿ ಮದುವೆಯಾಗಿದ್ದೇನೆ ಎಂದಿದ್ದರು. ಈ ಹೇಳಿಕೆ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು. ವಧುವಿನ ಗೆಟಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಶ್ರದ್ಧಾ, ಫೋಟೋದಲ್ಲಿ ಮದುವೆಯ ವಿಧಿವಿಧಾನಗಳನ್ನು ಹಾಕಿಕೊಂಡಿದ್ದರು. ಆದರೆ ಕೊನೆಗೆ ಅವರು ತಮ್ಮ ಮಾತಿನ ಅರ್ಥವನ್ನೂ ಹೇಳಿದ್ದರು. ಅದೇನೆಂದ್ರೆ, ಶ್ರದ್ಧಾ ಆರ್ಯ ಅವರು 10 ಬಾರಿ ಮದುವೆಯಾಗಿದ್ದು ಧಾರಾವಾಹಿ (Serials) ಮತ್ತು ಚಲನಚಿತ್ರಗಳಲ್ಲಿ! ನೌಕಾಪಡೆಯ ಅಧಿಕಾರಿಯಾಗಿರುವ ರಾಹುಲ್​ ನಾಗಲ್​ (Rahul Nagal) ಅವರನ್ನು 2021ರಲ್ಲಿ ಮದುವೆಯಾಗಿರುವ ಶ್ರದ್ಧಾ ತಮ್ಮ ಧಾರಾವಾಹಿಯ ಜೋಡಿಯ ಫೋಟೋವನ್ನು ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದರಷ್ಟೇ.

ಅವರಿಗೆ ಸಕತ್​ ಹೆಸರು ತಂದುಕೊಂಡಿದ್ದ ಏಕ್ತಾ ಕಪೂರ್​ ಅವರ 'ಕುಂಡಲಿ ಭಾಗ್ಯ' ಟಿವಿ ಸೀರಿಯಲ್​ನಲ್ಲಿರುವ ವಧುವಿನ ಪಾತ್ರದ ಫೋಟೋ ಹಾಕಿಕೊಂಡು ತಮಾಷೆ ಮಾಡಿದ್ದರು. ಇದು ತಮ್ಮ 10ನೇ ಮದುವೆ ಎಂದು ಹೇಳಿದ್ದರು. ಇನ್ನು ನಟಿ ಕುರಿತು ಹೇಳುವುದಾದರೆ, ಇವರು 2011ರಲ್ಲಿ ಬಿಡುಗಡೆಯಾದ ಕನ್ನಡದ ಮದುವೆ ಮನೆ ಮತ್ತು ಡಬಲ್ ಡೆಕ್ಕರ್ ಮನೆಯಲ್ಲಿ ನಟಿಸಿದ್ದಾರೆ. ಬಾಲಿವುಡ್​, ಕಾಲಿವುಡ್​, ಮಾಲಿವುಡ್​, ಟಾಲಿವುಡ್​ ಹಾಗೂ ಪಂಜಾಬಿ ಚಿತ್ರಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಆದರೆ ಸಕತ್​ ಫೇಮಸ್​ ಆಗಿರೋದು ಟಿವಿ ಸೀರಿಯಲ್​ಗಳ ಮೂಲಕ. ಶ್​... ಫಿರ್ ಕೋಯಿ ಹೈ, ಮೈ ಲಕ್ಷ್ಮಿ ತೇರೆ ಆಂಗನ್ ಕೀ, ತುಮ್ಹಾರಿ ಪಾಖಿ, ಡ್ರೀಮ್ ಗರ್ಲ್, ಮಜಾಕ್ ಮಜಾಕ್ ಮೆ, ಕಸಮ್ ತೇರೆ ಪ್ಯಾರ್ ಕೀ ಸ್ವಾತಿ ಬೋರಾ, ಕುಂಕುಮ್​ ಭಾಗ್ಯ, ನಚ್ ಬಲಿಯೆಯಲ್ಲಿ ಧಾರಾವಾಹಿಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರುವ ಶ್ರದ್ಧಾ ಸದ್ಯ ಕುಂಡಲಿ ಭಾಗ್ಯದಲ್ಲಿ (Kundali Bhagya) ಡಾ.ಪ್ರೀತಾ ಅರೋರಾ ಆಗಿ ನಟಿಸುತ್ತಿದ್ದಾರೆ. ಟಿವಿಎಸ್ ಸ್ಕೂಟಿ, ಪಿಯರ್ಸ್ ಮತ್ತು ಜಾನ್ಸಸ್ ನಂತಹ ಬ್ರಾಂಡ್‌ಗಳೊಂದಿಗೆ ಪ್ರಮುಖ ಜಾಹೀರಾತು ಪ್ರಚಾರದಲ್ಲಿ ಭಾಗವಾಗಿದ್ದಾರೆ.

ಅಂದಹಾಗೆ ರಾಹುಲ್ ನಾಗಲ್ ಅವರನ್ನು ಮದುವೆಯಾಗುವ ಮುನ್ನ 2015ರಲ್ಲಿ ಅವರು ಎನ್ಆರ್​ಐ ಉದ್ಯಮಿ ಜಯಂತ್ ರಟ್ಟಿ ಅವರ ಜೊತೆ ಶ್ರದ್ಧಾ ಎಂಗೇಜ್​ಮೆಂಟ್​ ಆಗಿತ್ತು. ಆದರೆ ಮದುವೆಯಾದ ಮೇಲೆ ನಟನೆ ಬಿಡಬೇಕು ಎಂದು ಅವರು ಕಂಡೀಷನ್​ ಹಾಕಿದ್ದರಿಂದ ಶ್ರದ್ಧಾ ಮದುವೆ ಮುರಿದುಕೊಂಡಿದ್ದರು. ಈಗ ನೌಕಾಪಡೆಯ ಅಧಿಕಾರಿಯಾಗಿರುವ (Navy Officer) ರಾಹುಲ್​ ನಾಗಲ್​ ಅವರನ್ನು ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, 1987ರ ಆಗಸ್ಟ್‌ 17ರಂದು ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2005 ರಿಂದ ನಟನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಮುಂಬೈಗೆ ಶಿಫ್ಟ್‌ ಆಗಿದ್ದರು. ಹಿಂದಿ, ತೆಲುಗು, ತಮಿಳಿನ ಅನೇಕ ಚಿತ್ರಗಳಲ್ಲಿ ಶ್ರದ್ಧಾ ಆರ್ಯ ಅಭಿನಯಿಸಿದ್ದಾರೆ. ಗಣೇಶ್‌ ಅವರ ಜೊತೆ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ನಟಿ ನಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆ ಜಾಗಕ್ಕೆ ಯಾಮಿ ಗೌತಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಕೊನೆಗೆ ಗಣೇಶ್‌ ಜೊತೆಯಲ್ಲಿಯೇ 'ಮದುವೆ ಮನೆ'ಯಲ್ಲಿ ನಟಿಸು ಅವಕಾಶ ಸಿಕ್ಕಿತು.

View post on Instagram