ತ್ರಿಷಾ ಅವರನ್ನು ರಾಜಕೀಯಕ್ಕೆ ಕರೆತರುವ ಅಭಿಯಾನದ ಮೊದಲ ಹೆಜ್ಜೆಯಾಗಿ ಜನಕಲ್ಯಾಣ ಮತ್ತು ಸಮಾಜಮುಖಿ ಕಾರ್ಯಗಳನ್ನು ನಡೆಸಲು ಅಭಿಮಾನಿಗಳು ಮುಂದಾಗಿದ್ದಾರೆ. ಈ ಮೂಲಕ ಜನರೊಂದಿಗೆ ನೇರ ಸಂಪರ್ಕ ಬೆಳೆಸಿ, ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಕ್ಕೆ ಪೂರಕ ವಾತಾವರಣ ನಿರ್ಮಿಸುವುದುಅವರ ಉದ್ದೇಶವಾಗಿದೆ ಎನ್ನಲಾಗಿದೆ.

ರಾಜಕೀಯಕ್ಕೆ ತ್ರಿಷಾ? ಫ್ಯಾನ್ಸ್ ಕಲ್ಪಿಸಿಕೊಟ್ಟ ವೇದಿಕೆಗೆ ತ್ರಿಷಾ ಏನಂದ್ರು?

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ತ್ರಿಷಾ ಕೃಷ್ಣನ್‌ (Trisha Krishnan) ಇದೀಗ ರಾಜಕೀಯ ವಿಚಾರವಾಗಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಉತ್ತರಾಧಿಕಾರಿ ಎಂದೇ ತ್ರಿಷಾ ಅವರನ್ನು ಬಿಂಬಿಸಿರುವ ಅಭಿಮಾನಿಗಳು, ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, 'ಇಳಯ ಪುರಚ್ಚಿ ತಲೈವಿ ತ್ರಿಷಾ' ಎಂಬ ಹೆಸರಿನಲ್ಲಿ ಹೊಸ ವೇದಿಕೆಯನ್ನೂ ಆರಂಭಿಸಿದ್ದಾರೆ. ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಸಮಂತಾಗೆ ಮಗ ಜನಿಸಿದ ಬೆನ್ನಲ್ಲೇ 'ಸರ್ವ ಮಂಗಳಾನಿ ಭವಂತು' ಎಂದು ಬರೆದು ಸೀತಾಫಲ ಕ್ರೀಮ್ ಸವಿದ ಶೀತಲ್!

ಇತ್ತೀಚಿನ ದಿನಗಳಲ್ಲಿ ನಟನೆಯ ಜೊತೆಗೆ ರಾಜಕೀಯ ಪ್ರವೇಶದ ವಿಚಾರದಲ್ಲಿಯೂ ಹಲವು ಸಿನಿಮಾ ತಾರೆಯರ ಹೆಸರುಗಳು ಕೇಳಿಬರುತ್ತಿವೆ. ಅದರಲ್ಲೂ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ರಾಜಕೀಯ ಪಯಣದ ನಡುವೆ ತ್ರಿಷಾ ಅವರ ಹೆಸರು ಮುನ್ನೆಲೆಗೆ ಬಂದಿರುವುದು ವಿಶೇಷ. ವಿಜಯ್ ನೇತೃತ್ವದ ಟಿವಿಕೆ ಪಕ್ಷದೊಂದಿಗೆ ತ್ರಿಷಾ ಕೈಜೋಡಿಸಲಿದ್ದಾರೆಯೇ ಎಂಬ ಪ್ರಶ್ನೆಯೂ ಅಭಿಮಾನಿಗಳ ವಲಯದಲ್ಲಿ ಚರ್ಚೆಯಾಗುತ್ತಿದೆ.

ಜಯಲಲಿತಾ ಅವರ ಉತ್ತರಾಧಿಕಾರಿ ಎಂದ ಫ್ಯಾನ್ಸ್‌!

ತ್ರಿಷಾ ಅವರ ಅಭಿಮಾನಿಗಳ ಗುಂಪು ಆರಂಭಿಸಿರುವ ಹೊಸ ವೇದಿಕೆಗೆ 'ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ' ಎಂದು ಹೆಸರಿಡಲಾಗಿದೆ. ಈ ವೇದಿಕೆಯ ಮೂಲಕ ನಟಿಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವುದು ಮತ್ತು ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ವೇದಿಕೆಯ ಪ್ರಕಟಣೆಯಲ್ಲಿ ತ್ರಿಷಾ ಅವರಿಗೆ 'ಇಳಯ ಪುರಚ್ಚಿ ತಲೈವಿ' ಎಂಬ ಬಿರುದು ನೀಡಲಾಗಿದೆ. ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು 'ಪುರಚ್ಚಿ ತಲೈವಿ' ಎಂದೇ ಪ್ರಸಿದ್ಧರಾಗಿದ್ದರು. ಅವರ ದಿಟ್ಟ ನಿರ್ಧಾರಗಳು, ಆಡಳಿತದ ಮೇಲಿನ ಹಿಡಿತ ಮತ್ತು ನಾಯಕತ್ವದ ಗುಣಗಳನ್ನು ಉಲ್ಲೇಖಿಸಿರುವ ಅಭಿಮಾನಿಗಳು, ತ್ರಿಷಾ ಅವರಲ್ಲಿಯೂ ಅಂತಹ ಸಾಮರ್ಥ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಅವರನ್ನು ಜಯಲಲಿತಾ ಅವರ ನಿಜವಾದ ಉತ್ತರಾಧಿಕಾರಿ ಎಂದು ಬಣ್ಣಿಸಿದ್ದಾರೆ.

ಜಯಲಲಿತಾ ಮಾದರಿಯ ಆಡಳಿತ ಬೇಕಂತೆ!

ತಮ್ಮ ಪ್ರಕಟಣೆಯಲ್ಲಿ ಜಯಲಲಿತಾ ಅವರ ಆಡಳಿತ ಶೈಲಿಯನ್ನು ಸ್ಮರಿಸಿರುವ ಅಭಿಮಾನಿಗಳ ವೇದಿಕೆ, ತಮಿಳುನಾಡಿಗೆ ಮತ್ತೆ ಅಂತಹ ದಿಟ್ಟ ನಾಯಕತ್ವದ ಅಗತ್ಯವಿದೆ ಎಂದು ಹೇಳಿದೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಆಡಳಿತದ ಪ್ರತಿಯೊಂದು ವಿಚಾರದ ಮೇಲೂ ಗಮನ ಹರಿಸುತ್ತಿದ್ದರು. ಅಧಿಕಾರಿಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದವರಿಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಎಂಬುದನ್ನು ಅಭಿಮಾನಿಗಳು ಉಲ್ಲೇಖಿಸಿದ್ದಾರೆ.

ಹೈದರಾಬಾದ್‌ ಬಿಡಲು ಸಜ್ಜಾದ್ರಾ 'ದೇವಸೇನಾ'..? ಜುಬಿಲಿ ಹಿಲ್ಸ್‌ನಲ್ಲಿರೋ ಮನೆ ಮಾರಿದ್ದೇಕೆ ಅನುಷ್ಕಾ ಶೆಟ್ಟಿ?

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಆಡಳಿತದಲ್ಲಿ ಶಿಸ್ತು ತರುವ ನಾಯಕತ್ವ ಬೇಕಾಗಿದೆ. ತ್ರಿಷಾ ಅವರಲ್ಲಿ ಅಂತಹ ಗುಣಗಳಿವೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಆದರೆ ಇವೆಲ್ಲವೂ ಅಭಿಮಾನಿಗಳ ವೇದಿಕೆ ವ್ಯಕ್ತಪಡಿಸಿರುವ ನಿಲುವುಗಳಾಗಿದ್ದು, ತ್ರಿಷಾ ಅವರ ರಾಜಕೀಯ ಸಾಮರ್ಥ್ಯದ ಬಗ್ಗೆ ಸ್ವತಂತ್ರವಾಗಿ ದೃಢಪಟ್ಟ ಮಾಹಿತಿಯಲ್ಲ.

ವಿಜಯ್‌ ಜೊತೆ ತ್ರಿಷಾ ರಾಜಕೀಯ ಪಯಣ?

ಇನ್ನು ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಕಾರ್ಯವೈಖರಿಯನ್ನೂ ಅಭಿಮಾನಿಗಳು ಪ್ರಶಂಸಿಸಿದ್ದಾರೆ. ವಿಜಯ್ ಅವರ ಆಡಳಿತಕ್ಕೆ ತ್ರಿಷಾ ಕೂಡ ಕೈಜೋಡಿಸಿದರೆ ರಾಜ್ಯದಲ್ಲಿ ಮತ್ತೊಮ್ಮೆ ಜಯಲಲಿತಾ ಮಾದರಿಯ ದಕ್ಷ ಆಡಳಿತವನ್ನು ಕಾಣಬಹುದು ಎಂಬ ವಿಶ್ವಾಸವನ್ನು ವೇದಿಕೆ ವ್ಯಕ್ತಪಡಿಸಿದೆ. ತ್ರಿಷಾ ಅವರ ಆಪ್ತ ವಲಯದವರಿಗೆ ಅವರಲ್ಲಿರುವ ನಾಯಕತ್ವದ ಗುಣಗಳ ಬಗ್ಗೆ ತಿಳಿದಿದೆ ಎಂದೂ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಜನಸೇವೆಯ ಮೂಲಕ ರಾಜಕೀಯಕ್ಕೆ ಅಡಿಪಾಯ?

ತ್ರಿಷಾ ಅವರನ್ನು ರಾಜಕೀಯಕ್ಕೆ ಕರೆತರುವ ಅಭಿಯಾನದ ಮೊದಲ ಹೆಜ್ಜೆಯಾಗಿ ಜನಕಲ್ಯಾಣ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಅಭಿಮಾನಿಗಳು ಮುಂದಾಗಿದ್ದಾರೆ. ಈ ಸೇವಾ ಕಾರ್ಯಗಳ ಮೂಲಕ ಜನರೊಂದಿಗೆ ನೇರ ಸಂಪರ್ಕ ಬೆಳೆಸಿ, ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಅವರ ಉದ್ದೇಶವಾಗಿದೆ ಎನ್ನಲಾಗಿದೆ.

ಇದು ಜೋಡೆತ್ತು ಬಗ್ಗೆ ಅಲ್ಲ, ರಾಮಾಯಣದ 'ರಾವಣ' ಯಶ್ ನೋಡಿ ಸುಮಲತಾ ಅಂಬರೀಷ್ ಈಗ ಹೇಳಿರೋ ಮಾತು!

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ, ತ್ರಿಷಾ ಅವರು ಸ್ವತಃ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಟಿವಿಕೆ ಪಕ್ಷ ಸೇರುವ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ. ಸದ್ಯಕ್ಕೆ ಅಭಿಮಾನಿಗಳ ಉತ್ಸಾಹ ಮತ್ತು ಹೊಸ ವೇದಿಕೆಯ ಚಟುವಟಿಕೆಗಳೇ ಈ ಚರ್ಚೆಗೆ ಕಾರಣವಾಗಿವೆ. ಹಾಗಾದರೆ ತ್ರಿಷಾ ನಿಜಕ್ಕೂ ರಾಜಕೀಯಕ್ಕೆ ಬರುತ್ತಾರಾ? ವಿಜಯ್ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರಾ? ಅಥವಾ ಚಿತ್ರರಂಗದಲ್ಲಿಯೇ ತಮ್ಮ ವೃತ್ತಿಜೀವನ ಮುಂದುವರಿಸುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ನಟಿಯೇ ಉತ್ತರ ನೀಡಬೇಕಿದೆ. ಸದ್ಯಕ್ಕೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಅಭಿಮಾನಿಗಳ ನಡುವೆಯೂ ತ್ರಿಷಾ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಗರಿಗರಿಯಾದ ರಾಗಿ-ಹೆಸರುಬೇಳೆ ದೋಸೆ ಹೀಗೆ ಮಾಡಿ.. ಹೋಟೆಲ್ ರುಚಿ ಏನೇನೂ ಅಲ್ಲ ಈ ದೋಸೆ ತಿಂದ್ರೆ!